ಈವರೆಗೂ ಸಾಫ್ಟ್ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಪ್ರಜ್ವಲ್ ದೇವರಾಜ್ ಇದೇ ಮೊದಲ ಬಾರಿಗೆ ಸಾಹಸ ಪ್ರಧಾನ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಜೀವ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ಪ್ರಜ್ವಲ್ ಇಲ್ಲಿ ಆ್ಯಕ್ಷನ್ ಹೀರೋ.
ಇದೇ ಮೊದಲ ಬಾರಿಗೆ ಬರಚುಕ್ಕಿಯ ಸಣ್ಣ ದ್ವೀಪದಂತಾ ಸ್ಥಳದಲ್ಲಿ ಎರಡು ದಿವಸಗಳ ಕಾಲ ಚಿತ್ರೀಕರಣ ನಡೆಸಿದ ದಾಖಲೆ ನಿರ್ಮಿಸಿದೆ ಚಿತ್ರತಂಡ. ಇಲ್ಲಿ ಅಪರೂಪದ ದೃಶ್ಯವನ್ನು ನಿರ್ದೇಶಕರು ಶೂಟ್ ಮಾಡಿದ್ದಾರೆ. ನಾಯಕ ರೋಪ್ ಸಹಾಯದೊಂದಿಗೆ ನಾಯಕಿ ಮೇಘನ ರಾಜನ್ನು ಹೊತ್ತುಕೊಂಡು ಸಾಗಬೇಕು. ಅದು ಪೋಲ್ ವಾಲ್ಟ್ ರೀತಿಯಲ್ಲಿ. 50 ಅಡಿ ಕೆಳಗೆ ಹಾರಿ ನೆಲಕ್ಕೆ ಇಳಿಯುವ ದೃಶ್ಯವು ಥ್ರಿಲ್ ಕೊಡುವಂಥದ್ದು. ಅಂತಹ ದೃಶ್ಯದಲ್ಲಿ ನಾಯಕ ಮತ್ತು ನಾಯಕಿ ಕಾಣಿಸಿಕೊಂಡಿದ್ದಾರೆ.
ಸಾಹಸ, ಹಾಸ್ಯ, ಭಾವನಾತ್ಮಕ ವಿಷಯಗಳ ಸಂಗಮದಲ್ಲಿ ಚಿತ್ರ ಮೂಡಿ ಬಂದಿದೆ. ಮೇಘನಾ ರಾಜ್ ನಾಯಕಿ.
↧
ಆ್ಯಕ್ಷನ್ ಪಾತ್ರದಲ್ಲಿ ಪ್ರಜ್ವಲ್
↧