Quantcast
Channel: VijayKarnataka
Viewing all articles
Browse latest Browse all 6795

ಶ್ರೀಜೇಶ್, ದೀಪಿಕಾ ವರ್ಷದ ತಾರೆಗಳು

$
0
0

ಹಾಕಿ ಇಂಡಿಯಾದ 2ನೇ ವಾರ್ಷಿಕ ಪ್ರಶಸ್ತಿ ಪ್ರದಾನ / ದಿವಂಗತ ಶಂಕರ್ ಲಕ್ಷ್ಮಣ್‌ಗೆ ಮೇಜರ್ ಧ್ಯಾನ್‌ಚಂದ್ ಜೀವಮಾನ ಸಾಧನೆ ಪ್ರಶಸ್ತಿ
ಬೆಂಗಳೂರು: ದಿವಂಗತ ಹಾಗೂ ಮಾಜಿ ಗೋಲ್ ಕೀಪರ್ ಶಂಕರ್ ಲಕ್ಷ್ಮಣ್ ಅವರು, ಹಾಕಿ ಇಂಡಿಯಾ ನೀಡಿದ ಮೇಜರ್ ಧ್ಯಾನ್‌ಚಂದ್ ಜೀವಮಾನ ಸಾಧನೆ ಗೌರವಕ್ಕೆ ಭಾಜನರಾದರೆ, ಗೋಲ್ ಕೀಪರ್ ಪಿ.ಆರ್.ಶ್ರೀಜೇಶ್ ಮತ್ತು ದೀಪಿಕಾ ಕ್ರಮವಾಗಿ 2015ನೇ ವರ್ಷದ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಧ್ರುವ್ ಬಾತ್ರಾ ಪ್ರಶಸ್ತಿಗೆ ಪಾತ್ರರಾದರು.

ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಶನಿವಾರ ನಡೆದ ಹಾಕಿ ಇಂಡಿಯಾದ 2ನೇ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ದಿವಂಗತ ಶಂಕರ್ ಲಕ್ಷ್ಮಣ್ ಸೇರಿದಂತೆ 11 ಸಾಧಕರಿಗೆ ಹಾಕಿ ಇಂಡಿಯಾ ಅಧ್ಯಕ್ಷ ನರೆಂದರ್ ಬಾತ್ರಾ ಸೇರಿದಂತೆ ಕ್ರೀಡೆಯ ಪ್ರಮುಖರು ವಾರ್ಷಿಕ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ಸಮಾರಂಭದ ಆರಂಭದಲ್ಲಿ ಭಾರತ ಪರ 100 ಪಂದ್ಯಗಳನ್ನಾಡಿದ್ದ ಮಾಜಿ ಹಾಕಿಪಟುಗಳಾದ ಧರ್ಮವೀರ್ ಸಿಂಗ್, ಕೋಥಾಜಿತ್ ಸಿಂಗ್, ಬಿರೇಂದ್ರ ಲಾಕ್ರಾ ಮತ್ತು ಸುಶೀಲಾ ಚಾನು ಅವರಿಗೆ 50 ಲಕ್ಷ ರೂ. ಚೆಕ್ ಜತೆ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಭಾರತ ಪರ 200 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ ಗುರ್ಬಜ್ ಸಿಂಗ್ ಮತ್ತು ಕರ್ನಾಟಕದ ವಿ.ಆರ್.ರಘುನಾಥ್ ಅವರಿಗೂ ತಲಾ ಒಂದು ಲಕ್ಷ ರೂ.ಚೆಕ್ ನೀಡಿ ಗೌರವಿಸಲಾಯಿತು.

2015ರ ಹಾಕಿ ಇಂಡಿಯಾ ವಿಶ್ವ ಲೀಗ್ ಸೆಮಿಫೈನಲ್‌ನಲ್ಲಿ ಅಂಪೈರ್ ಆಗಿ ಕಣಕ್ಕಿಳಿಯುವ ಮೂಲಕ 100 ಪಂದ್ಯಗಳಲ್ಲಿ ಅಂಪೈರ್ ಆಗಿ ಕಾರ್ಯನಿರ್ವಹಿಸಿದ ರಾಜ್ಯದ ಆರ್.ವಿ.ರಘುಪ್ರಸಾದ್ ಅವರನ್ನು ಸನ್ಮಾನಿಸಲಾಯಿತು.

ಒಲಿಂಪಿಕ್ ಅರ್ಹತೆ ಪಡೆದ ಮಹಿಳಾ ತಂಡಕ್ಕೆ ಸನ್ಮಾನ

36 ವರ್ಷಗಳ ನಂತರ 2016ರ ರಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿ ಐತಿಹಾಸಿಕ ಸಾಧನೆ ಮಾಡಿದ ಭಾರತ ಮಹಿಳಾ ತಂಡ ಮತ್ತು ಸಿಬ್ಬಂದಿಗೆ ತಲಾ ಒಂದು ಲಕ್ಷ ರೂ. ಚೆಕ್ ಮತ್ತು ಸ್ಮರಣಿಕೆ ನೀಡಲಾಯಿತು.

ಜೂನಿಯರ್ ಏಷ್ಯಾ ಕಪ್ ಗೆದ್ದ ಯುವ ಪುರುಷರ ತಂಡ ಮತ್ತು ಸಿಬ್ಬಂದಿಗೆ ತಲಾ 1 ಲಕ್ಷ ರೂ. ಚೆಕ್ ನೀಡಿಲಾಯಿತು. ಇದೇ ವೇಳೆ ಕಳೆದ ಡಿಸೆಂಬರ್‌ನಲ್ಲಿ ರಾಯ್ಪುರದಲ್ಲಿ ನಡೆದ ಎಚ್‌ಡಬ್ಲ್ಯುಎಲ್ ಟೂರ್ನಿಯಲ್ಲಿ ಕಂಚಿನ ಪದಕ ಗೆದ್ದ ಹಿರಿಯ ಪುರುಷರ ತಂಡವನ್ನು ಗೌರವಿಸಲಾಯಿತು.

ಗಮನ ಸೆಳೆದ ಶ್ರೀಜೇಶ್ ನೃತ್ಯ

ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾದ ಶ್ರೀಜೇಶ್ ವೇದಿಕೆಯಲ್ಲಿ ಎರಡು ಬಾರಿ ಬಾಲಿವುಡ್ ಹಾಡುಗಳಿಗೆ ಹೆಜ್ಜೆ ಹಾಕಿ ಗಮನ ಸೆಳೆದರೆ, ಸಮಾರಂಭದ ಮಧ್ಯದಲ್ಲಿ ಮೂಡಿ ಬಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಮನಸೂರೆಗೊಂಡವು. ಹಾಕಿ ಇಂಡಿಯಾ ಒಟ್ಟಾರೆ 2 ಕೋಟಿ ರೂ.ಗಳನ್ನು ಬಹುಮಾನವಾಗಿ ನೀಡಿತು.

ಒಲಿಂಪಿಕ್‌ಗೆ ಕಠಿಣ ಅಭ್ಯಾಸ

ಒಲಿಂಪಿಕ್‌ನಲ್ಲಿ ಪದಕ ಜಯಿಸುವುದು ನಮ್ಮ ಪ್ರಮುಖ ಗುರಿ ಎಂದು ವರ್ಷದ ಆಟಗಾರ ಪ್ರಶಸ್ತಿಗೆ ಪಾತ್ರರಾದ ಗೋಲ್‌ಕೀಪರ್ ಶ್ರೀಜೇಶ್ ಅಭಿಪ್ರಾಯಪಟ್ಟಿದ್ದಾರೆ. ''ತಂಡ ಕಠಿಣ ಅಭ್ಯಾಸದಲ್ಲಿ ನಿರತವಾಗಿದೆ. ಒಲಿಂಪಿಕ್ಸ್ ನಮ್ಮ ಮುಂದಿನ ಗುರಿ. ಮಲೇಷ್ಯಾದಲ್ಲಿ ನಡೆಯಲಿರುವ ಸುಲ್ತಾನ್ ಅಜ್ಲಾನ್ ಶಾ ಮತ್ತು ಸ್ಪೇನ್‌ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿ, ಒಲಿಂಪಿಕ್ಸ್‌ಗೆ ಪೂರ್ವಾಭ್ಯಾಸ ಟೂರ್ನಿಗಳಾಗಿವೆ. ಈ ವೇಳೆ ತಂಡದಲ್ಲಿನ ಹೊಂದಾಣಿಕೆ, ನ್ಯೂನತೆಗಳ ಕುರಿತು ಗಮನ ಹರಿಸಲಾಗುವುದು. ಗಾಯದ ಸಮಸ್ಯೆಯ ಬಗ್ಗೆಯೂ ಎಚ್ಚರ ವಹಿಸಲಿದ್ದೇವೆ,'' ಎಂದು 148 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿರುವ ಶ್ರೀಜೇಶ್ ವಿವರಿಸಿದರು.

ವರ್ಷದ ಆಟಗಾರ್ತಿ ಪ್ರಶಸ್ತಿಗೆ ಸಂತಸ ವ್ಯಕ್ತಪಡಿಸಿದ ದೀಪಿಕಾ, ''ಪ್ರಶಸ್ತಿಗೆ ಆಯ್ಕೆ ಮಾಡಿದ ಎಲ್ಲರಿಗೂ ಧನ್ಯವಾದಗಳು. ಈ ಪ್ರಶಸ್ತಿ ಆರ್ಥಿಕವಾಗಿಯೂ ನಮ್ಮನ್ನು ಸಬಲಗೊಳಿಸಲಿದ್ದು, ಎಲ್ಲರಿಗೂ ಉತ್ತೇಜನಕಾರಿಯಾಗಿದೆ,'' ಎಂದು ಆಶಿಸಿದರು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>