ಸಂಜನಾ ಇತ್ತೀಚೆಗಂತೂ ಐಟಂ ಸಾಂಗ್‌ಗಳಿಗೆ ಹೆಜ್ಜೆ ಹಾಕುವುದು ಹೆಚ್ಚಾಗಿತ್ತು. ಆದರೆ ಇಲ್ಲಿ ಅವರು ಫ್ಯಾಮಿಲಿ ಗೆಟ್ ಟುಗೆದರ್ ಸೀಕ್ವೆನ್ಸ್‌ನಲ್ಲಿ 45 ಕಲಾವಿದರ ಜತೆ ಕುಣಿಯುತ್ತಾರೆ. ಐಟಂ ಸಾಂಗ್ ಅಲ್ಲದ ಹಾಡಿನಲ್ಲಿ ಇದೇ ಮೊದಲ ಬಾರಿಗೆ ಅವರು ಕುಣಿದು ಅಚ್ಚರಿ ಮೂಡಿಸಿದ್ದಾರೆ.
- ಎಚ್. ಮಹೇಶ್
ಚಿರಂಜೀವಿ ಸರ್ಜಾ ಅಭಿನಯದ ರಾಮ್‌ಲೀಲಾ ಚಿತ್ರದಲ್ಲಿ 45 ಜನ ಕಲಾವಿದರು ಅಭಿನಯಿಸಿದ್ದಾರೆ. ಆ ಕಲಾವಿದರ ಪಟ್ಟಿಯಲ್ಲಿ ಇದುವರೆಗೂ ಸಂಜನಾ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ ಎಂಬ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿರಲಿಲ್ಲ. ಆದರೆ ಆ ಗುಟ್ಟು ರಟ್ಟಾಗಿದೆ. ಸಂಜನಾ ಈ ಚಿತ್ರದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುವುದರ ಜತೆಗೆ ಐಟಂ ಸಾಂಗ್ ಅಲ್ಲದ ಹಾಡಿನಲ್ಲಿ ಕುಣಿದಿದ್ದಾರೆ.
ಸಂಜನಾ ಇತ್ತೀಚೆಗಂತೂ ಐಟಂ ಸಾಂಗ್‌ಗಳಲ್ಲಿ ನಟಿಸುವುದು ಹೆಚ್ಚಾಗಿತ್ತು. ಆದರೆ ಇಲ್ಲಿ ಅವರು ಫ್ಯಾಮಿಲಿ ಗೆಟ್ ಟುಗೆದರ್ ಸೀಕ್ವೆನ್ಸ್‌ನಲ್ಲಿ 45 ಕಲಾವಿದರ ಜತೆ ಕುಣಿಯುತ್ತಾರೆ. ಚಿತ್ರದ ನಿರ್ದೇಶಕ ವಿಜಯ್ ಕಿರಣ್ ಅವರನ್ನು ಈ ಬಗ್ಗೆ ಕೇಳಿದಾಗ, 'ಸಂಜನಾ ಪಾತ್ರ ಚಿತ್ರದಲ್ಲಿ ಸರ್‌ಪ್ರ್ರೈೆಸ್ ಎಲಿಮೆಂಟ್. ಅವರು ಈ ಮೊದಲು ಐಟಂ ಸಾಂಗ್‌ನಲ್ಲಿ ಕುಣಿದಿರಬಹುದು. ಆದರೆ ಇಲ್ಲಿ ಗ್ಲಾಮ್ ಡ್ರೆಸ್ ಧರಿಸದೇ ಫ್ಯಾಮಿಲಿ ಜತೆ ಡಾನ್ಸ್ ಮಾಡುತ್ತಾರೆ. ಕುತೂಹಲ ಇರಲೆಂದು ಇದನ್ನು ಗುಟ್ಟಾಗಿಯೇ ಇಟ್ಟಿದ್ದೆವು' ಎಂದು ವಿವರಣೆ ಕೊಡುತ್ತಾರೆ.
ಜಾರ್ಜಿಯಾದಲ್ಲಿ ಹಾಡಿನ ಚಿತ್ರೀಕರಣ ಮಾಡುವಾಗ ನಡೆದ ಅನಾಹುತವನ್ನು ನೆನಪಿಸಿಕೊಳ್ಳಲು ನಿರ್ದೇಶಕ ವಿಜಯ್ ಕಿರಣ್ ಮರೆಯುವುದಿಲ್ಲ. 'ಜಾರ್ಜಿಯಾದಲ್ಲಿ ಶೂಟಿಂಗ್ ನಡೆಯುವಾಗ ಪ್ರವಾಹ ಬಂತು. ಪ್ರಾಣಿ, ಪಕ್ಷಿಗಳು ರಸ್ತೆಗೆ ಬಂದು ಜನರಿಗೆ ತೊಂದರೆ ಕೊಟ್ಟವು. ನಾವು ಅದೇ ಸಮಯದಲ್ಲಿ ಹಾಡಿನ ಚಿತ್ರೀಕರಣ ಮಾಡಲು ಪ್ಲಾನ್ ಮಾಡಿದ್ದೆವು. ಆಗ ಬೆಂಗಳೂರಿನಲ್ಲಿದ್ದ ನಮ್ಮ ಚಿತ್ರತಂಡ ಹಾಗೂ ತಾಂತ್ರಿಕ ವಿಭಾಗದವರು ಜಾರ್ಜಿಯಾಗೆ ಬರಲು ಹಿಂದೇಟು ಹಾಕಿದರು. ನಾವು ಅವರಿಗೆ ಪ್ರವಾಹಕ್ಕೆ ತುತ್ತಾದ ಸ್ಥಳ ಬೇರೆ, ನಾವು ಶೂಟಿಂಗ್ ಮಾಡುತ್ತಿರುವ ಸ್ಥಳ ಬೇರೆ ಎಂದು ಸುಳ್ಳು ಹೇಳಿ ಕರೆಸಿಕೊಂಡೆವು. ಆದರೆ ಅವರಿಗೆ ಇಲ್ಲಿಗೆ ಬಂದಾಗ ಗೊತ್ತಾಗಿದ್ದು, ಪ್ರವಾಹಕ್ಕೆ ಸಿಲುಕಿರುವ ಪ್ರದೇಶದಲ್ಲಿ ಶೂಟಿಂಗ್ ಮಾಡುತ್ತಿದ್ದೇವೆ ಎಂದು. ನಂತರ ನಾವೆಲ್ಲ ಭಯದಲ್ಲೇ ಶೂಟಿಂಗ್ ಮಾಡಿದೆವು. ಶೂಟಿಂಗ್ ಸ್ಥಳದಲ್ಲಿ ಪ್ರಾಣಿಗಳು ಬರುತ್ತಿದ್ದವು. ನಾವು ಪ್ರಾಣ ಭಯದಿಂದ ಆ ಸ್ಥಳ ಬಿಟ್ಟು ಓಡಿಹೋಗಿದ್ದೂ ಇದೆ' ಎಂದು ಅಲ್ಲಿನ ಅನುಭವ ಹಂಚಿಕೊಂಡರು ವಿಜಯ್.
↧
ಸಂಜನಾ ಡಾನ್ಸ್ ಲೀಲೆ
↧