Quantcast
Channel: VijayKarnataka
Viewing all articles
Browse latest Browse all 6795

ಆ್ಯಕ್ಷನ್ ಸ್ಟಾರ್‌ಗೆ ಸುವರ್ಣ ವೇದಿಕೆ

$
0
0

* ಪದ್ಮಿನಿ ಜೈನ್ ಎಸ್.

ಹತ್ತು ಜನ ಗಟ್ಟಿಗಿತ್ತಿಯರು ತೊಡೆ ತಟ್ಟಿ ನಿಂತಿದ್ದಾರೆ. ಜೋಶ್ ತುಂಬಲು ಮಾಲಾಶ್ರೀ ಬಂದಾಗಿದೆ. ವೇದಿಕೆ ಸಿದ್ಧವಾಗಿದೆ. ಮಿಸ್ಟರ್ ಇಂಡಿಯಾ ರಘು ಮುಖರ್ಜಿಯೂ ಸೈ ಅಂದ ಮೇಲೆ ಮುಗೀತು, ಆ್ಯಕ್ಷನ್ ಸ್ಟಾರ್ ಶೋ ಶುರುವಾಗ್ತಿದೆ ಎಂದೇ ಅರ್ಥ.

ಇಂದಿನಿಂದ ( ಮಾ.19) ಸುವರ್ಣ ವಾಹಿನಿಯಲ್ಲಿ ಆಕ್ಷನ್ ಸ್ಟಾರ್ ಹೊಸ ಶೋ ಶುರುವಾಗಲಿದೆ. ಪ್ರತಿ ವಾರಾಂತ್ಯ ರಾತ್ರಿ 07.30ಕ್ಕೆ ನಡೆಯಲಿರುವ ಈ ಶೋದ ಮೊದಲ ಸಂಚಿಕೆಯಲ್ಲಿ ಆ್ಯಕ್ಷನ್ ಕ್ವೀನ್ ಮಾಲಾಶ್ರೀ ಭಾಗವಹಿಸಲಿದ್ದು, ಅವರನ್ನು ಕಂಡ ಹುಡುಗೀರ ಹುರುಪು ಡಬಲ್ ಆಗಿದೆ. ಆ್ಯಕ್ಷನ್, ಸ್ಟಂಟ್, ಸಾಹಸಗಳೆಂದರೆ ಅದು ಪುರುಷರ ಸೊತ್ತು ಎಂಬ ಪೂರ್ವಾಗ್ರಹ ಇದೆ. ಅದನ್ನು ಬ್ರೇಕ್ ಮಾಡಿ, ನಾವು ಯಾರಿಗೂ ಕಡಿಮೆ ಇಲ್ಲ ಎಂದು ತೋರಿಸಲು ಹೊರಟಿದ್ದಾರೆ ಈ ಹುಡುಗೀರು.

'ಕನ್ನಡ ಕಿರುತೆರೆಗೆ ರಿಯಾಲಿಟಿ ಶೋಗಳನ್ನು ಪರಿಚಯಿಸಿದ ಕೀರ್ತಿ ಸುವರ್ಣ ವಾಹಿನಿಗೆ ಸಲ್ಲುತ್ತದೆ. ಈ ಬಾರಿ ನಾವು ಹೊಸ ಕಾನ್ಸೆಪ್ಟ್ ಒಂದನ್ನು ಪರಿಚಯಿಸುತ್ತಿದ್ದೇವೆ. ಹೆಣ್ ಮಕ್ಳೇ ಸ್ಟ್ರಾಂಗ್ ಗುರು ಎಂಬ ಮಾತನ್ನು ಸಾಬೀತು ಮಾಡುವಂತಹ ಶೋ ಇದಾಗಿದ್ದು, ರಾಜ್ಯಾದ್ಯಂತ ಹುಡುಕಾಡಿ 10 ಜನ ಹುಡುಗಿಯರನ್ನು ಆಯ್ಕೆ ಮಾಡಿದ್ದೇವೆ. ಇಲ್ಲಿ ವೈವಿಧ್ಯಮಯ ಹಾಗೂ ಸಾಹಸೀ ಟಾಸ್ಕ್‌ಗಳನ್ನು ನೀಡಲಾಗುತ್ತದೆ. ಎಲ್ಲವನ್ನೂ ಶಕ್ತಿ ಹಾಗೂ ಯುಕ್ತಿಯಿಂದ ನಿಭಾಯಿಸಿ ಕೊನೆಯವರೆಗೆ ಯಾರು ಇರುತ್ತಾರೋ ಆ ಹುಡುಗಿಗೆ ಆ್ಯಕ್ಷನ್ ಸ್ಟಾರ್ ಎಂದು ಬಿರುದು ನೀಡುತ್ತೇವೆ' ಎನ್ನುತ್ತಾರೆ ಸುವರ್ಣ ವಾಹಿನಿಯ ಮಾರ್ಕೆಟಿಂಗ್ ಹೆಡ್ ಅನಿಲ್ ನಾರಂಗ.

ಆ್ಯಕ್ಷನ್ ಸ್ಟಾರ್ ಶೋಗಾಗಿ ನಡೆದ ಆಡಿಷನ್‌ನಲ್ಲಿ ಸಾವಿರಾರು ಹುಡುಗಿಯರು ಭಾಗವಹಿಸಿದ್ದು, ಅವರಲ್ಲಿ 10 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. 'ಕರ್ನಾಟಕದ ಆ್ಯಕ್ಷನ್ ಫೀಮೇಲ್ ಸ್ಟಾರ್‌ನ್ನು ಹುಡುಕುವುದು ನಮ್ಮ ಉದ್ದೇಶ. ಫಿಸಿಕಲಿ ಫಿಟ್ ಆಗಿರುವವರಿಗೆ ಆದ್ಯತೆ ನೀಡಲಾಗಿದೆ. ಯಾಕೆಂದರೆ ಶೋನ ತುಂಬ ನಾವು ಕಠಿಣ ಪರೀಕ್ಷೆಗಳನ್ನು ಒಡ್ಡುತ್ತೇವೆ. ಅದನ್ನೆಲ್ಲ ಮೀರಿ ಶೋನಲ್ಲಿ ಭಾಗವಹಿಸುವ ಧೈರ್ಯ ಇರುವವರು ಮಾತ್ರ ಎಂಟ್ರಿ ಪಡೆದಿದ್ದಾರೆ' ಎಂದು ವಾಹಿನಿಯ ನಾನ್‌ಫಿಕ್ಷನ್ ಹೆಡ್ ಜಯ ಚಂದ್ರ ಹೇಳುತ್ತಾರೆ.

ಹುಡುಗೀರ ಶಾರೀರಿಕ ಹಾಗೂ ಮಾನಸಿಕ ಸಾಮರ್ಥ್ಯ ಎಂತಹದ್ದು ಎಂದು ಈ ಶೋ ತೋರಿಸುತ್ತದೆ. ವಾರದಿಂದ ವಾರಕ್ಕೆ ಟಾಸ್ಕ್‌ಗಳು ಕೂಡ ಕಠಿಣವಾಗುತ್ತದೆ.

ಅಲ್ಲದೆ ಇದೊಂತರ ಸಂಚಾರಿ ಶೋ. ಒಂದೇ ಕಡೆ ನೆಲೆ ನಿಲ್ಲದೆ, ಬೇರೆ ಬೇರೆ ಪ್ರದೇಶಗಳಲ್ಲಿ ಸಾಹಸಮಯ ಚಟುವಟಿಕೆಗಳನ್ನು ಮಾಡಿಸಲಾಗುತ್ತದೆ. ಪ್ರತಿ ವಾರ ಒಬ್ಬ ಸ್ಪರ್ಧಿ ಎಲಿಮಿನೇಟ್ ಆಗಲಿದ್ದು, ವೀಕ್ಷಕರು ಕಳುಹಿಸುವ ಮತಗಳು ಈ ಎಲಿಮಿನೇಶನ್‌ನ ಮಾನದಂಡ. ಮಿಸ್ಟರ್ ಇಂಡಿಯಾ ರಘು ಮುಖರ್ಜಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದು, ಶೋ ನಿರೂಪಣೆ ಮಾಡಲಿದ್ದಾರೆ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>