ಇತ್ತೀಚೆಗೆ ಭಾರತ ವಿರುದ್ಧದ ಟಿ20 ಸರಣಿ, ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಕಳಪೆ ಆಟ ಪ್ರದರ್ಶಿಸಿರುವ ಲಂಕಾ ಪಡೆ, ಆಫ್ಘನ್ನರ ವಿರುದ್ಧ ಗೆಲುವಿನ ವಿಶ್ವಾಸದಲ್ಲಿದೆ. ಈ ಮೂಲಕ ಗ್ರೂಪ್-1ರಿಂದ ಸೆಮಿಫೈನಲ್ ತಲುಪುವ ಕನಸಿಗೆ ಆರಂಭದಲ್ಲೇ ಬಲ ತಂದುಕೊಳ್ಳುವತ್ತ ಏಂಜೆಲೊ ಮ್ಯಾಥ್ಯೂಸ್ ಪಡೆ ದೃಷ್ಟಿ ನೆಟ್ಟಿದೆ.
ಮತ್ತೊಂದೆಡೆ ಪಾಕಿಸ್ತಾನದ ಮಾಜಿ ನಾಯಕ ಇಂಜಮಾನ್ ಉಲ್ ಹಕ್ ಅವರ ಗರಡಿಯಲ್ಲಿ ಪಳಗಿರುವ ಅಫಘಾನಿಸ್ತಾನ ಅಪಾಯಕಾರಿ ತಂಡವೆಂಬುದರಲ್ಲಿ ಎರಡು ಮಾತಿಲ್ಲ. ಅರ್ಹತಾ ಸುತ್ತಿನಲ್ಲಿ ಭರ್ಜರಿ ಪ್ರದರ್ಶನ ತೋರಿ ಪ್ರಧಾನ ಸುತ್ತಿಗೇರಿರುವ ಆಫ್ಘನ್ನರು ಇಲ್ಲೂ ಬಲಿಷ್ಠ ತಂಡಗಳಿಗೆ ಶಾಕ್ ನೀಡಿದರೆ ಅಚ್ಚರಿ ಪಡಬೇಕಿಲ್ಲ.
ಐಸಿಸಿ ರಾಂಕಿಂಗ್
08 ಶ್ರೀಲಂಕಾ
09 ಅಫಘಾನಿಸ್ತಾನ
ತಂಡಗಳ ವಿವರ
ಶ್ರೀಲಂಕಾ: ಏಂಜೆಲೊ ಮ್ಯಾಥ್ಯೂಸ್ (ನಾಯಕ), ಲಸಿತ್ ಮಲಿಂಗ, ದುಶ್ಮಂತ ಚಾಮೀರ, ದಿನೇಶ್ ಚಾಂದಿಮಾಲ್, ನಿರೋಶನ್ ದಿಕ್ವೆಲ್ಲಾ, ತಿಲಕರತ್ನೆ ದಿಲ್ಷಾನ್, ರಂಗನ ಹೆರತ್, ಶೆಹಾನ್ ಜಯಸೂರ್ಯ, ಚಾಮರ ಕಪುಗೆಡೆರ, ನುವಾನ್ ಕುಲಶೇಖರ, ತಿಸಾರ ಪೆರೆರಾ, ಸಚಿತ್ರ ಸೇನನಾಯಕೆ, ದಸುನ್ ಶನಾಕ, ಮಿಲಿಂದ ಸಿರಿವರ್ಧನ, ಸುರಂಗ ಲಕ್ಮಲ್, ಲಾಹಿರು ತಿರಿಮಾನೆ.
ಅಫಘಾನಿಸ್ತಾನ: ಅಸ್ಗರ್ ಸ್ತಾನಿಕ್‌ಜಾಯ್ (ನಾಯಕ), ಆಮಿರ್ ಹಮ್ಜಾ, ದವಲತ್ ಜದ್ರಾನ್, ಗುಲ್ಬದಿನ್ ನೈಬ್, ಹಮೀದ್ ಹಸನ್, ಕರೀಮ್ ಸಾದಿಕ್, ಮೊಹಮ್ಮದ್ ನಬಿ, ಮೊಹಮ್ಮದ್ ಶಹ್ಜಾದ್, ನಿಜಿಬುಲ್ಹಾ ಜದ್ರಾನ್, ನೂರ್ ಅಲಿ ಜದ್ರಾನ್, ರಶೀದ್ ಖಾನ್, ಸಮಿಯುಲ್ಲಾ ಶೆನ್ವಾರಿ, ಶಫೀಕುಲ್ಲಾ, ಶಾಪುರ್ ಜದ್ರಾನ್, ಉಸ್ಮಾನ್ ಘನಿ, ಮಿರ‌್ವಾಯಿಸ್ ಅಶ್ರಫ್, ನಜೀಬ್ ತರಾಕಾಯ್, ರೊಕ್ಹಾನ್ ಬರಾಕ್ಜಾಯ್, ಯಮೀನ್ ಅಹ್ಮದ್ಜಾಯ್.
ಇಂದಿನ ಪಂದ್ಯ
ಗ್ರೂಪ್- 1
ಶ್ರೀಲಂಕಾ - ಅಫಘಾನಿಸ್ತಾನ
ಸ್ಥಳ: ಈಡನ್ ಗಾರ್ಡನ್ಸ್, ಕೋಲ್ಕೊತಾ
ಸಮಯ: ರಾತ್ರಿ 7.30ಕ್ಕೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಕೋಲ್ಕೊತಾ: ಸತತ ಎರಡು ಅಭ್ಯಾಸ ಪಂದ್ಯಗಳಲ್ಲಿ ಮುಗ್ಗರಿಸಿರುವ ಹಾಲಿ ಚಾಂಪಿಯನ್ ಶ್ರೀಲಂಕಾ ತಂಡ, ಇಲ್ಲಿನ ಈಡನ್ ಗಾರ್ಡನ್ಸ್‌ನಲ್ಲಿ ಗುರುವಾರ ನಡೆಯುವ ಪಂದ್ಯದಲ್ಲಿ ಅಫಘಾನಿಸ್ತಾನವನ್ನು ಎದುರಿಸುವ ಮೂಲಕ ತನ್ನ ಅಭಿಯಾನ ಆರಂಭಿಸಲಿದೆ.