ಮಹಡಿಯಿಂದ ಬಿದ್ದ ಯುವತಿಯ ತಲೆ ಮತ್ತು ಮುಖಕ್ಕೆ ತೀವ್ರ ಸ್ವರೂಪದ ಗಾಯಗಳಾಗಿವೆ. ಸ್ನೇಹಿತನೊಂದಿಗೆ ಮಾತನಾಡಲು ಯುವತಿ ಆತನ ಮನೆಗೆ ಹೋಗಿದ್ದಳು. ಸ್ನೇಹಿತನೊಂದಿಗೆ ಆತನ ಇಬ್ಬರು ಗೆಳೆಯರೂ ಮನೆಯಲ್ಲಿದ್ದರು.
ಯುವತಿಗೆ ಮತ್ತು ಬರಿಸುವ ವಸ್ತು ಬೆರೆಸಿದ ತಂಪು ಪಾನೀಯ ಕುಡಿಯಲು ಕೊಟ್ಟ ಆಕೆಯ ಗೆಳೆಯ ತಮ್ಮೊಂದಿಗೆ ಸಹಕರಿಸುವಂತೆ ಒತ್ತಾಯಿಸಿದ್ದ. ಅದಕ್ಕೊಪ್ಪದ ಆಕೆಯ ಮೇಲೆ ಮೂವರು ಗ್ಯಾಂಗ್‌ರೇಪ್‌ಗೆ ಯತ್ನಿಸಿದ್ದರು. ಮಂಪರಿನಲ್ಲೇ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡ ಯುವತಿ ಎರಡನೇ ಮಹಡಿಗೆ ಓಡಿ ಬಂದು ಬೇರೆ ದಾರಿ ಕಾಣದೇ ಕೆಳಕ್ಕೆ ಧುಮುಕಿದ್ದಳು. ಗಲಾಟೆಯಿಂದ ಎಚ್ಚೆತ್ತುಕೊಂಡ ಅಕ್ಕಪಕ್ಕದ ಮನೆಯವರು ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ ಮುವರು ದುಷ್ಕರ್ಮಿಗಳನ್ನು ಬಂಧಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಕೋಲ್ಕೊತಾ: ಅತ್ಯಾಚಾರದಿಂದ ಪಾರಾಗಲು ಯುವತಿಯೊಬ್ಬಳು ಎರಡನೇ ಮಹಡಿಯಿಂದ ಜಿಗಿದ ಘಟನೆ ಹೌರಾದ ಲಿಲುವಾಹ್‌ನಲ್ಲಿ ಭಾನುವಾರ ನಡೆದಿದೆ. ಘಟನೆ ಸಂಬಂಧ ಅತ್ಯಾಚಾರಕ್ಕೆ ಯತ್ನಿಸಿದ ಯುವತಿಯ ಗೆಳೆಯ ಹಾಗೂ ಆತನ ಇಬ್ಬರು ಸ್ನೇಹಿತರನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ.