Quantcast
Channel: VijayKarnataka
Viewing all articles
Browse latest Browse all 6795

ಮುಂಬಯಿಯಲ್ಲಿ 4 ಗ್ಯಾಂಗ್‌ಮನ್‌ಗಳ ಮೇಲೆ ಹರಿದ ರೈಲು

$
0
0

ಮುಂಬಯಿ: ಮುಂಬಯಿಯ ಉಪನಗರಳಾದ ಕುರ್ಲಾ ಹಾಗೂ ವಿದ್ಯಾವಿಹಾರ ರೈಲು ನಿಲ್ದಾಣಗಳ ನಡುವಿನ ರೈಲ್ವೆ ಹಳಿಗಳಲ್ಲಿ ನಡೆದುಹೋಗುತ್ತಿದ್ದ ನಾಲ್ವರು ಗ್ಯಾಂಗ್‌ಮನ್‌ಗಳು ರೈಲಿನಡಿಗೆ ಬಿದ್ದು ಸಾವನ್ನಪ್ಪಿದ್ದಾರೆ.

ಶುಕ್ರವಾರ ಮುಂಜಾನೆ 6:15ರಿಂದ 6:30ರ ನಡುವೆ ದುರಂತ ಸಂಭವಿಸಿದ್ದು, ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ನಾಲ್ವರು ಕಾರ್ಮಿಕರು ಛತ್ರಪತಿ ಶಿವಾಜಿ ಟರ್ಮಿನಸ್‌ಗೆ ಸೇರಿದ್ದ ರೈಲಿನಡಿಗೆ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

2013ರ ನವೆಂಬರ್‌ 3ರಂದು ಇದೇ ರೀತಿಯ ದುರ್ಘಟನೆಯಲ್ಲಿ ನಾಲ್ವರು ಗ್ಯಾಂಗ್‌ಮೆನ್‌ಗಳು ಸಾವನ್ನಪ್ಪಿದ್ದರು. ಅವರೆಲ್ಲರೂ ಥಾಣೆ ಸಮೀಪದ ಥಾಕುರ್ಲಿ ಹಾಗೂ ಕಲ್ಯಾಣ್‌ ರೈಲು ನಿಲ್ಧಾಣದ ನಡುವೆ ಹಳಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾಗ ಕೋಲಾಪುರ ಮೂಲದ ವೇಗದ ರೈಲು ಡಿಕ್ಕಿ ಹೊಡೆದಿತ್ತು:

ನಡೆದು ಹೋಗುತ್ತಿದ್ಧಾಗ ಘಟನೆ:

ಪ್ರಾಥಮಿಕ ಮಾಹಿತಿಯ ಪ್ರಕಾರ, ಕುರ್ಲಾ ಹಾಗೂ ವಿದ್ಯಾವಿಹಾರ್ ನಿಲ್ದಾಣಗಳ ನಡುವೆ ರೈಲ್ವೆ ಕಂಬಿಗಳ ಸುರಕ್ಷತೆಯನ್ನು ಗಮನಿಸಿಕೊಂಡು ಕಾರ್ಮಿಕರು ನಡೆದು ಹೋಗುತ್ತಿದ್ದಾಗ ಘಟನೆ ನಡೆದಿದೆ. ಕರ್ಜತ್‌-ಸಿಎಸ್‌ಟಿ ಸ್ಥಳೀಯ ರೈಲಿಗೆ ಕಾರ್ಮಿಕರು ಸಿಲುಕಿದ್ದರು ಎಂದು ಸೆಂಟ್ರಲ್‌ ರೈಲ್ವೆ ವಿಭಾಗದ ರೈಲ್ವೆ ಪೊಲೀಸ್ ಉಪ ಆಯುಕ್ತೆ ರೂಪಾಲಿ ಅಂಬುರೆ ತಿಳಿಸಿದ್ದಾರೆ.

ಘಟನೆ ನಡೆದ ಕೂಡಲೇ ಸಂತ್ರಸ್ತರನ್ನು ಸಮೀಪದ ರಾಜ್‌ವಾಡಿ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲಿ ಅವರು ಸಾವನ್ನಪ್ಪಿರುವುದಾಗಿ ತಿಳಿಸಲಾಯಿತು ಎಂದು ಹಿರಿಯ ರೈಲ್ವೆ ಅಧಿಕಾರಿ ಹೇಳಿದ್ದಾರೆ.

ಘಟನೆಯ ಹಿಂದಿನ ಕಾರಣ ಪತ್ತೆಗೆ ತನಿಖೆ ನಡೆಸಲಾಗುವುದು. ಕತ್ತಲೆ, ಮಂಜಿನ ಕಾರಣದಿಂದ ಕಾರ್ಮಿಕರಿಗೆ ರೈಲು ಆಗಮಿಸಿದ್ದು ಕಾಣಿಸದೇ ಇರಬಹುದು' ಎಂದು ತಿಳಿಸಿರುವ ಅವರು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ ಎಂದಿದ್ದಾರೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>