Quantcast
Channel: VijayKarnataka
Viewing all articles
Browse latest Browse all 6795

ಹಾಕಿ ಇಂಡಿಯಾ ಲೀಗ್‌: ಮುಂಬಯಿ ಸೆಮೀಸ್ ಆಸೆ ಜೀವಂತ

$
0
0

ಮುಂಬಯಿ: ಗಮನಾರ್ಹ ಪ್ರದರ್ಶನ ತೋರಿದ ದಬಾಂಗ್ ಮುಂಬಯಿ ತಂಡ ಇಲ್ಲಿ ನಡೆದ ಹಾಕಿ ಇಂಡಿಯಾ ಲೀಗ್‌ನ ರೌಂಡ್ ರಾಬಿನ್ ಮಾದರಿಯ ಕೊನೆ ಲೀಗ್ ಪಂದ್ಯದಲ್ಲಿ ಉತ್ತರ ಪ್ರದೇಶ ವಿಜಾರ್ಡ್ಸ್ ವಿರುದ್ಧ ಗೆದ್ದು ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ.

ಮಂಗಳವಾರ ನಡೆದ ಅಂತಿಮ ಲೀಗ್ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಮುಂಬಯಿ ಮೂರು ಆಕರ್ಷಕ ಫೀಲ್ಡ್ ಗೋಲು ಬಾರಿಸಿ ಲೀಗ್ ನಿಯಮದನ್ವಯ 6-3 ಗೋಲುಗಳ ಅಂತರದಿಂದ ಪ್ರವಾಸಿ ಉತ್ತರ ಪ್ರದೇಶ ವಿಜಾರ್ಡ್ಸ್‌ಗೆ ಸೋಲುಣಿಸಿತು. ಗುಜ್ರಂತ್ ಸಿಂಗ್(14ನೇ ನಿಮಿಷ), ಫ್ಲೊರಿಯಾನ್ ಫುಚ್(42ನೇ ನಿಮಿಷ) ಮತ್ತು ಯೂಸುಫ್ ಅಫಾನ್(59ನೇ ನಿಮಿಷ) ತಲಾ ಒಂದು ಗೋಲು ತಂದಿಟ್ಟು ಜಯದ ರೂವಾರಿಯೆನಿಸಿದರು.

ಈ ಸೋಲಿನೊಂದಿಗೆ ಸೆಮಿಫೈನಲ್ ಸ್ಪರ್ಧೆಯಿಂದ ಹೊರಬಿದ್ದ ಉತ್ತರ ಪ್ರದೇಶ ವಿಜಾರ್ಡ್ಸ್ ಪರ ವಿ.ಆರ್. ರಘುನಾಥನ್(19ನೇ ನಿಮಿಷ ) ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಬಾರಿಸಿದರೆ, ಚಿಂಗಲೆನ್ಸನ ಸಿಂಗ್ 30ನೇ ನಿಮಿಷದಲ್ಲಿ ಫೀಲ್ಡ್ ಗೋಲು ಬಾರಿಸಿದರು.

ಈ ಜಯದ ಮೂಲಕ ಆಡಿದ 10 ಪಂದ್ಯಗಳಿಂದ 25 ಅಂಕ ಸಂಪಾದಿಸಿದ ಮುಂಬಯಿ ಉಪಾಂತ್ಯದ ಆಸೆಯನ್ನು ಜೀವಂತವಾಗಿರಿಸಿಕೊಂಡಿತು. ಇಷ್ಟೇ ಅಂಕ ಹೊಂದಿರುವ ಕಳಿಂಗ ಲ್ಯಾನ್ಸರ್ಸ್ ಬುಧವಾರ ಡೆಲ್ಲಿ ವೇವ್ ರೈಡರ್ಸ್ ವಿರುದ್ಧ ಕೊನೆಯ ಲೀಗ್ ಪಂದ್ಯ ಆಡಲಿದ್ದು, ಈ ಫಲಿತಾಂಶದ ಆಧಾರದ ಮೇಲೆ ಇತ್ತಂಡಗಳ ಸ್ಥಾನ ನಿರ್ಧಾರವಾಗಲಿದೆ. ಲ್ಯಾನ್ಸರ್ಸ್ ಗೆದ್ದರೆ ಮುಂಬಯಿ ನೇರವಾಗಿ ಸೆಮಿಫೈನಲ್ ತಲುಪಲಿದೆ. ಒಂದು ವೇಳೆ ಡೆಲ್ಲಿ ಗೆದ್ದರೆ ಗೋಲುಗಳ ಆಧಾರದ ಮೇರೆಗೆ ಡೆಲ್ಲಿ ಮತ್ತು ಮುಂಬಯಿ ನಡುವೆ ಸ್ಪರ್ಧೆ ಏರ್ಪಡಲಿದೆ.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>