ಬೆಂಗಳೂರು: ವಿಧಾನಮಂಡಲದ ಜಂಟಿ ಅಧಿವೇಶನ ಫೆ.29ರ ಮಧ್ಯಾಹ್ನ 12ಗಂಟೆಗೆ ಆರಂಭವಾಗಲಿದೆ.
ವರ್ಷಾರಂಭದಲ್ಲಿ ನಡೆಯಲಿರುವ ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲ ವಜುಭಾಯಿ ವಾಲಾ ಅವರು ಭಾಷಣ ಮಾಡಲಿದ್ದಾರೆ. ರಾಜ್ಯ ಸರಕಾರದ ಹಿಂದಿನ ವರ್ಷದ ಸಾಧನೆ, ಮುಂದಿನ ಒಂದು ವರ್ಷದಲ್ಲಿ ಕೈಗೊಳ್ಳುವ ಯೋಜನೆಗಳ ದಿಕ್ಸೂಚಿ ಭಾಷಣವನ್ನು ರಾಜ್ಯಪಾಲರು ಉಭಯಸದನಗಳ ಸದಸ್ಯರ ಮುಂದೆ ಮಂಡಿಸಲಿದ್ದಾರೆ.
ಫೆ.29ರಿಂದ ಮಾ.5ರ ವರೆಗೆ ಕಲಾಪ ನಡೆಯಲಿದೆ ಎಂದು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಸ್.ವೈ. ಕುಳಗೇರಿ ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ. ಮಾ.5ರ ಶನಿವಾರ ಕಲಾಪ ನಡೆಯಲಿರುವುದು ಈ ಬಾರಿಯ ವಿಶೇಷ.
↧
ಫೆ.29ರಿಂದ ವಿಧಾನಮಂಡಲ ಜಂಟಿ ಅಧಿವೇಶನ
↧