Quantcast
Channel: VijayKarnataka
Viewing all articles
Browse latest Browse all 6795

ಶಾರೂಖ್‌ಗೆ 2.5 ಕೋಟಿ ರೂ. ಫ್ಲಾಟ್‌ ಗಿಫ್ಟ್‌ ಕೊಟ್ಟ ಪ.ಬಂಗಾಳ ಸರಕಾರ

$
0
0

ಕೋಲ್ಕತಾ: ಯಾವುದೇ ಶುಲ್ಕ ಪಡೆಯದೆ ಬಂಗಾಳದ ಪ್ರವಾಸೋದ್ಯಮದ ಪ್ರಚಾರ ಅಭಿಯಾನದ ಶೂಟಿಂಗ್‌ನಲ್ಲಿ ತೊಡಗಿಸಿಕೊಂಡ ಬಾಲಿವುಡ್‌ ನಟ ಶಾರೂಖ್‌ಖಾನ್‌ಗೆ ಐಷಾರಾಮಿ ಅಪಾರ್ಟ್‌ಮೆಂಟ್‌ ಉಡುಗೊರೆಯಾಗಿ ಸಿಗಲಿದೆ.

ಕೋಲ್ಕೋತಾದ ರಜರ್‌ಹಟ್‌ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಆ ಸುಂದರಾದ ಫ್ಲಾಟ್‌ ಇದ್ದು, ಅದನ್ನು ಶಾರೂಖ್‌ ಕೊಡುಗೆಗೆ ಪ್ರತಿಯಾಗಿ ವಿಶ್ವಾಸಪೂರ್ವಕವಾಗಿ ನೀಡಲಾಗಿದೆಯಂತೆ.

ಐಷಾರಾಮಿ ಫ್ಲಾಟ್‌:

ವರದಿಯೊಂದರ ಪ್ರಕಾರ, ಶಾರುಖ್ ಖಾನ್‌ಗೆ ಉಡುಗೊರೆಯಾಗಿ ಸಿಕ್ಕಿರುವ ಅಪಾರ್ಟ್‌ಮೆಂಟ್‌ 4,000 ಚದರ ಅಡಿ ಅಳತೆ ಹೊಂದಿದ್ದು, ಪ್ರತಿಷ್ಟಿತ ಸೃಷ್ಟಿ ಗ್ರೂಪ್‌ ನಿರ್ಮಿಸಿದೆ. ಪರಿಸರ ಪ್ರವಾಸೋದ್ಯಮ ಪಾರ್ಕ್ ಬಳಿ ಇರುವ ಈ ಕಟ್ಟಡದ ಬಳಿ 5 ಸ್ಟಾರ್ ಹೋಟೆಲ್, ಐಷಾರಾಮಿ ಮನೆಗಳು, ವಾಣಿಜ್ಯ ಸಂಕೀರ್ಣಗಳು, ವಿಶ್ವದರ್ಜೆಯ ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಹೆಲಿಪ್ಯಾಡ್‌ ಮುಂತಾದ ಸೌಲಭ್ಯಗಳು ಇರಲಿವೆ. ಇಲ್ಲಿ ಅಳವಡಿಸಿರುವ ಅತ್ಯಾಧುನಿಕ ಭದ್ರತಾ ವ್ಯವಸ್ಥೆಗಳನ್ನು ಇಸ್ರೇಲ್ ಮತ್ತು ಅಮೇರಿಕಾದಿಂದ ಆಮದು ಮಾಡಿಕೊಳ್ಳಲಾಗಿದೆ.

ಶಾರೂಖ್‌ ಖಾನ್‌ ಮೂಲತಃ ಒಬ್ಬ ವೃತ್ತಿಪರ ನಟನಾಗಿದ್ದರೂ ಪ್ರವಾಸೋದ್ಯಮ ಅಭಿಯಾನದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಕ್ಕೆ ಪ್ರತಿಯಾಗಿ ಬಿಡಿಕಾಸೂ ಸ್ವೀಕರಿಸಿಲ್ಲ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಬ್ರತ್ಯಾ ಬಸು ಅವರು 2015ರ ಸೆಪ್ಟೆಂಬರ್ 30ರಂದು ಮಾಧ್ಯಮಗಳಿಗೆ ತಿಳಿಸಿದ್ದರು. ಅಲ್ಲದೆ, ಅವರ ಈ ನಡೆಯನ್ನು ಮೆಚ್ಚಿ ಏನಾದರೂ ಉಡುಗೊರೆ ಕೊಡುವ ಬಗ್ಗೆ ಸುಳಿವು ನೀಡಿದ್ದರು.

ನಾನು ಸ್ವೀಕರಿಸಲ್ಲ:

'ದಿಲ್ವಾಲೆ' ಸಿನಿಮಾ ಬಿಡುಗಡೆ ವೇಳೆ ಉಡುಗೊರೆ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದ ಶಾರೂಖ್‌, ನೀವು ಹೇಳುತ್ತಿರುವ ಫ್ಲಾಟ್ ಬಗ್ಗೆ ನನಗೆ ಮಾಹಿತಿ ಸಿಕ್ಕಿಲ್ಲ. ಒಂದು ವೇಳೆ ತಮ್ಮ ಪ್ರೀತಿಯ ಧ್ಯೋತಕವಾಗಿ ಎಂದು ಯಾರಾದರೂ ಹೇಳಿದರೂ ಕೂಡ ನಾನದನ್ನು ಸ್ವೀಕರಿಸಲಾರೆ. ನನಗೆ ಪ್ರೀತಿ ಇಲ್ಲ ಅಂತಲ್ಲ. ಆದರೆ ಬಂಗಾಳ ಸೇರಿದಂತೆ ದೇಶದ ಎಲ್ಲೆಡೆ ನಾನು ಸಲ್ಲಿಸಬೇಕಾದ ಕರ್ತವ್ಯ ಅದಾಗಿರುವುದರಿಂದ ಸ್ವೀಕರಿಸಲ್ಲ ಎಂದು ಹೇಳಿದ್ದಾರೆ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


BIG NEWS : ಶಾಲೆಗಳ ಪ್ರಥಮ ಮಾನ್ಯತೆ, ಮಾನ್ಯತೆ ನವೀಕರಣದ ಕುರಿತು ‘ಶಿಕ್ಷಣ ಇಲಾಖೆ’ಯಿಂದ...


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!