Quantcast
Channel: VijayKarnataka
Viewing all articles
Browse latest Browse all 6795

ಬೆಂಗಾಲ್ ಟೈಗರ್: ಸೇಮ್ ಓಲ್ಡ್ ಬೋರಿಂಗ್ ಟೈಗರ್

$
0
0

* ಎಚ್. ಮಹೇಶ್
ರವಿತೇಜಾ ಸಿನಿಮಾಗಳಲ್ಲಿ ಪಂಚಿಂಗ್ ಡೈಲಾಗ್, ಪವರ್‌ಫುಲ್ ಫೈಟ್ಸ್, ಗ್ಲಾಮರ್ ನಾಯಕಿ, ಕಿಲ ಕಿಲ ಎಂದು ನಗಿಸಲು ಒಂದಷ್ಟು ಕಾಮಿಡಿಯನ್ಸ್ ಇರುತ್ತಾರೆ. ಇದು ರವಿತೇಜಾ ಫಾರ್ಮುಲಾ. ಬಹು ನಿರೀಕ್ಷೆಯ ಬೆಂಗಾಲಿ ಟೈಗರ್ ಚಿತ್ರ ಕೂಡ ಅದೇ ಫಾರ್ಮೂಲದಲ್ಲೇ ಮೂಡಿ ಬಂದಿದೆ. ಸೇಮ್ ಓಲ್ಡ್ ರಿವೇಂಜ್ ಸ್ಟೋರಿ. ಅದೇ ಫ್ಲಾಶ್ ಬ್ಯಾಕ್ , ಇಂತಹ ಚಿತ್ರಗಳು ತೆಲುಗಿನಲ್ಲೇ ಸಾಕಷ್ಟು ಬಂದಿವೆ.

ಕಿಕ್ 2 ಚಿತ್ರದ ನಂತರ ರವಿತೇಜಗೆ ಬ್ರೇಕ್ ಬೇಕಿತ್ತು. ಬೆಂಗಾಲಿ ಟೈಗರ್ ಚಿತ್ರದ ಮೂಲಕ ಸಿಗಬಹುದು ಎಂಬ ನಿರೀಕ್ಷೆ ಸುಳ್ಳಾಗಿದೆ.

ಆಕಾಶ್ ನಾರಾಯಣ್ ( ರವಿತೇಜ) ಹೋಮ್ ಮಿನಿಸ್ಟರ್ ಮಗಳು ಶಾರದಾ ( ರಾಶಿ ಖನ್ನಾ)ಳ ಮನ ಗೆಲ್ಲುತ್ತಾನೆ. ಅವಳನ್ನು ನಾನಾ ರೀತಿಯಲ್ಲಿ ಇಂಪ್ರೆಸ್ ಮಾಡುತ್ತಾನೆ. ಹೋಂ ಮಿನಿಸ್ಟರ್ ತನ್ನ ಬರ್ತ್ ಡೇ ದಿನ ಇಬ್ಬರಿಗೂ ಮದುವೆ ಮಾಡಿಸುವೆ ಎಂದು ಅನೌನ್ಸ್ ಮಾಡುತ್ತಾನೆ. ಆದರೆ ಆಕಾಶ್ ಒಪ್ಪುವುದಿಲ್ಲ. ಅದಕ್ಕೆ ಕಾರಣ ನಾನು ಚೀಫ್ ಮಿನಿಸ್ಟರ್ ( ಬೊಮ್ಮನ್ ಇರಾನಿ ) ಮಗಳು ಮೀರಾ ( ತಮನ್ನಾ)ಳನ್ನು ಲವ್ ಮಾಡುತ್ತಿರುವುದಾಗಿ ಹೇಳುತ್ತಾನೆ. ಇದರಿಂದ ಏನೆಲ್ಲಾ ಅನಾಹುತ ಆಗುತ್ತದೆ, ಅವನು ಯಾಕೆ ಚೀಫ್ ಮಿನಿಸ್ಟರ್ ಮಗಳನ್ನೇ ಮದುವೆ ಆಗಲು ಹೋಗುತ್ತಾನೆ ಎಂಬುದೇ ಚಿತ್ರದ ಕತೆ.

ನಿರ್ದೇಶಕ ಸಂಪತ್ ನಂದಿ ಅದೇ ತೆಲುಗು ಚಿತ್ರಗಳ ಸಿದ್ಧ ಸೂತ್ರಕ್ಕೆ ಗಂಟು ಬಿದ್ದಿದ್ದಾರೆ. ಚಿತ್ರದ ಮೊದಲಾರ್ಧ ವೇಗವಾಗಿ ಚಲಿಸುತ್ತದೆ. ಕತೆಯಲ್ಲಿ ಹೊಸತನ ಇಲ್ಲದ ಕಾರಣ ಮುಂದೆ ಏನಾಗಬಲ್ಲದು ಎಂದು ಪ್ರೇಕ್ಷಕ ಸುಲಭವಾಗಿ ಊಹಿಸಬಹುದು. ರವಿತೇಜ ತನ್ನ ಡೈಲಾಗ್ ಹಾಗೂ ಫೈಟ್‌ಗಳಿಂದ ಮಾಸ್ ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ತಮನ್ನಾ ಜತೆ ಮಳೆಯಲ್ಲಿ ಕುಣಿಯುವ ಹಾಡಿಗಂತೂ ಪ್ರೇಕ್ಷಕ ಚಪ್ಪಾಳೆ ತಟ್ಟುತ್ತಾನೆ. ಆದರೆ ತಮನ್ನಾಗೆ ಹೇಳಿಕೊಳ್ಳುವಂತಹ ಪಾತ್ರ ಸಿಕ್ಕಿಲ್ಲ. ಮತ್ತೊಬ್ಬ ನಾಯಕಿ ರಾಶಿ ಖನ್ನಾ ಬಿಕಿನಿ ತೊಟ್ಟಿದ್ದಾರೆ. ಇಬ್ಬರೂ ಬರೀ ಗ್ಲಾಮರ್ ಗೊಂಬೆ. ಬ್ರಹ್ಮಾನಂದಂ ಹಾಗೂ ಪೋಸಾನಿ ಕೃಷ್ಣರ ಕಾಮಿಡಿ ದೃಶ್ಯ ಬೋರ್ ಆಗುವುದನ್ನು ಸ್ವಲ್ಪ ಮಟ್ಟಿಗೆ ತಡೆಯುತ್ತದೆ. ಲಾಜಿಕ್ ಇಲ್ಲದ ಲವ್ ಸ್ಟೋರಿ, ಫೈಟ್‌ಗಳು ಇದೊಂದು ಸಾಮಾನ್ಯ ಚಿತ್ರ ಎಂದು ಬಿಂಬಿಸುತ್ತವೆ.

ಕೊರಿಯಾಗ್ರಫಿ ಶ್ರೀಮಂತವಾಗಿದೆ. ತಾಂತ್ರಿಕ ಗುಣಮಟ್ಟ ಕಾಯ್ದುಕೊಂಡಿದೆ. ಕತೆ, ಚಿತ್ರಕತೆಯಲ್ಲಿ ಹೊಸತಿಲ್ಲ. ರವಿತೇಜ ಚಿತ್ರಗಳನ್ನು ಇಷ್ಟ ಪಡುವ ಪ್ರೇಕ್ಷಕ ಒಂದ್ಸಾರಿ ಚಿತ್ರ ನೋಡಿ ಬೋರಿಂಗ್ ಟೈಗರ್ ಎಂದುಕೊಳ್ಳಬಹುದು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ಗುರು ರಾಘವೇಂದ್ರರ ದಿನದ ಭವಿಷ್ಯ ಹಾಗೂ ರಾಶಿ ಫಲ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>