ಪ್ರತಿಯೊಂದು ರಾಶಿಗೂ ಪ್ರತ್ಯೇಕ ಅಧಿಪತಿಗಳು. ತತ್ ಸಂಬಂಧಿತವಾದ ಬಣ್ಣಗಳು. ಈ ಹಿನ್ನೆಲೆಯಲ್ಲೇ ಯಾವ ರಾಶಿಯವರು ಯಾವ ಬಣ್ಣದ ಅಲಂಕಾರ ಮಾಡಿಕೊಂಡರೆ ಸಕಾರಾತ್ಮಕವಾಗಿರುತ್ತದೆ ಎಂದು ನಿರ್ಧರಿಸಬಹುದು. * ಮಂಡಗದ್ದೆ ಪ್ರಕಾಶ್‌ಬಾಬು ಬಣ್ಣ ಹೋಳಿ ಹಬ್ಬಕ್ಕಷ್ಟೇ ಸೀಮಿತವಲ್ಲ. ಬಣ್ಣ ವ್ಯಕ್ತಿಯ ಆರೋಗ್ಯ, ಗುಣ, ಸ್ವಭಾವವನ್ನು ನಿರ್ಧರಿಸುತ್ತದೆ. ಜ್ಯೋತಿಷ್ಯ ಶಾಸ್ತ್ರದ ರೀತ್ಯ ಹನ್ನೆರಡು ರಾಶಿಗಳಿವೆ. ಪ್ರತಿಯೊಂದು ರಾಶಿಗೂ ಪ್ರತ್ಯೇಕ ಅಧಿಪತಿಗಳು. ತತ್ ಸಂಬಂಧಿತವಾದ ಬಣ್ಣಗಳು. ಈ ಹಿನ್ನೆಲೆಯಲ್ಲೇ ಯಾವ ರಾಶಿಯವರು ಯಾವ ಬಣ್ಣದ ಅಲಂಕಾರ ಮಾಡಿಕೊಂಡರೆ ವೈಂಬ್ರೆಂಟ್ ಆಗಿರುತ್ತದೆ, ಸಕಾರಾತ್ಮಕವಾಗಿ ಪರಿಣಾಮ ಬೀರುತ್ತದೆ ಎಂದು ನಿರ್ಧರಿಸಬಹುದು. ಮೇಷ : ಕಿತ್ತಳೆ ಮಿಶ್ರಿತ ಕೆಂಪು, ತಿಳಿಗೆಂಪು, ರಕ್ತಗೆಂಪು ವರ್ಣಗಳು ಸೂಕ್ತವಾಗಿವೆ. ಹಾಗಾಗಿ ಈ ರಾಶಿಯವರು ಗೃಹಾಲಂಕಾರ, ಅಲಂಕಾರಗಳಲ್ಲಿ ಈ ವರ್ಣಗಳನ್ನು ಬಳಸುವುದರಿಂದ ಶಾಂತಿ, ಸಮಾಧಾನ ಹೊಂದುತ್ತಾರೆ. ವೃಷಭ : ಬಿಳಿ ಹಾಗು ಹಸಿರು ಬಣ್ಣ ಪ್ರಿಯರು. ಅಲಂಕಾರದಲ್ಲಿ ಅದೇ ವರ್ಣಿಕೆ ಬಳಸಿದರೆ ಕುಟುಂಬ ಸೌಹಾರ್ಧತೆ ಹೆಚ್ಚುತ್ತದೆ. ಮಿಥುನ : ಗೃಹಾಲಂಕಾರಕ್ಕೆ ಹಸಿರು ಬಣ್ಣದ ಶೇಡ್‌ಗಳನ್ನು ಬಳಸುವುದು ಒಳ್ಳೆಯದು. ಇದರಿಂದಾಗಿ ಮನಸ್ಸು ಶಾಂತವಾಗುತ್ತದೆ. ಕಿರಿ ಕಿರಿ ದೂರವಾಗಿ ಪಾಸಿಟೀವ್ ವೈಬ್ರೇಷನ್ ಹೆಚ್ಚುತ್ತದೆ. ಕಟಕ : ಬಿಳಿ, ನೇರಳೆ, ರಜತ, ಕಪ್ಪೆಚಿಪ್ಪಿನ ಬಣ್ಣಗಳು ಚೆನ್ನಾಗಿ ಆಗಿ ಬರುತ್ತವೆ. ಹಾಗಾಗಿ ಗೃಹಾಲಂಕಾರ ವಸ್ತುಗಳಲ್ಲಿ ಈ ವರ್ಣಗಳನ್ನು ಬಳಸುವುದು ಒಳ್ಳೆಯದು. ಅಂಜಿಕೆ ಇವರ ಸ್ವಭಾವವಾಗಿರುವುದರಿಂದ ಕಪ್ಪು ಬಣ್ಣಗಳ ಬಳಕೆ ಕಡಿಮೆ ಮಾಡುವುದು ಒಳ್ಳೆಯದು. ಸಿಂಹ : ಬಂಗಾರದ ಕೆಂಪು, ಕಿತ್ತಳೆ ಬಣ್ಣಗಳು ಉತ್ತಮವಾಗಿರುತ್ತವೆ. ಆ ಬಣ್ಣಗಳು ಇವರ ಕ್ರಿಯೇಟಿವಿಟಿಯನ್ನು ಹೆಚ್ಚಿಸುತ್ತವೆ. ಕಾಂಬಿನೇಷನ್ ಆಗಿ ನೇರಳೆ ವರ್ಣವನ್ನು ಬಳಸಬಹುದು. ಅಲಂಕಾರಿಕ ವಸ್ತುಗಳಲ್ಲಿ ಈ ಬಣ್ಣಗಳ ಬಳಕೆಯಿಂದ ಹೆಚ್ಚು ಲವಲವಿಕೆಯಿಂದ ಇರುತ್ತಾರೆ. ಕನ್ಯಾ : ನೀಲಿ ಬಣ್ಣ ಸೂಕ್ತ. ಇದರಿಂದಾಗಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ನೆಮ್ಮದಿಯ ಜೀವನ ನಿಮ್ಮದಾಗುತ್ತದೆ. ತುಲಾ : ವಿಲಾಸ ಭೋಗ ಪ್ರಿಯರು. ಹಾಗಾಗಿ ಗೃಹಾಲಂಕಾರದಲ್ಲಿ ತಿಳಿಗೆಂಪು, ಕಿತ್ತಳೆ ಮಿಶ್ರಿತ ಕೆಂಪು ಹಾಗೂ ಗಾಢವಾದ ಕೆಂಪು ಬಳಸುವುದು ಒಳ್ಳೆಯದು. ವೃಶ್ಚಿಕ : ಕೆಂಪು ಗುಲಾಬಿ ಇವರಿಗೆ ಇಷ್ಟ. ಗಾಢವಾದ ಕೆಂಪು, ಕಂದು ಮಿಶ್ರಿತ ಕೆಂಪು ಇರುವ ವಸ್ತುಗಳನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ. ಅಂತಹ ವಸ್ತುಗಳನ್ನು ಮನೆಯಲ್ಲಿ ಇಡುವುದರಿಂದ ಇವರ ವ್ಯಕ್ತಿತ್ವ ಹೆಚ್ಚುತ್ತದೆ. ಧನಸ್ಸು : ಹಳದಿ ವರ್ಣ ಪ್ರಿಯರು. ಗುರುವಿನ ಬಣ್ಣವೂ ಅದೇ ಆಗಿದೆ. ಈ ವರ್ಣದಿಂದ ಅಲಂಕಾರ ಮಾಡುವುದರಲ್ಲಿ ಹೆಚ್ಚು ಸಕಾರಾತ್ಮಕ ಪರಿಣಾಮಗಳನ್ನು ಕಾಣುತ್ತಾರೆ. ಮಕರ : ನೀಲ, ಕೃಷ್ಣ ನೀಲಿ, ಹಳದಿ ಮಿಶ್ರಿತ ನೀಲಿ ಬಣ್ಣಗಳನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ. ಹಾಗಾಗಿ ಈ ಬಣ್ಣಗಳಿರುವ ವಸ್ತುಗಳಿಂದ ಮಾಡುವ ಅಲಂಕಾರವು ಹೆಚ್ಚು ಶೋಭೆ ತರುತ್ತದೆ. ಕುಂಭ : ಗೋಸುಂಬೆಗಳಂತೆ ಇವರು ಸಮಯಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವ ಗುಣವುಳ್ಳವರು. ಚಿನ್ನದ ಬಣ್ಣ, ಹಳದಿ ಮಿಶ್ರಿತ ಕೆಂಪು ಬಣ್ಣದ ಅಲಂಕಾರವನ್ನು ಹೆಚ್ಚಾಗಿ ಇಷ್ಟ ಪಡುತ್ತಾರೆ. ಮೀನ : ಪೀತವರ್ಣ ಪ್ರಿಯರು. ಮನೆಗೆ ಬಳಸುವ ರಂಗೋಲಿ, ಗೃಹಾಲಂಕಾರ ಸಾಮಗ್ರಿ, ಬಳಸುವ ಧಿರಿಸು ಎಲ್ಲದರಲ್ಲೂ ಹಳದಿ ಶೇಡ್ ಅನ್ನು ಇಷ್ಟ ಪಡುತ್ತಾರೆ.
↧
ರಾಶಿಗೆ ತಕ್ಕಂತೆ ಬಣ್ಣದ ಅಲಂಕಾರ
↧