Quantcast
Channel: VijayKarnataka
Viewing all articles
Browse latest Browse all 6795

ದಿನಭವಿಷ್ಯ: 6 ಮಾರ್ಚ್‌ 2017

$
0
0

ಮೇಷ:- ಬಾಳಸಂಗಾತಿ, ಮಕ್ಕಳು ನಿಮಗೆ ಸಂತಸ ನೀಡಲಿದ್ದಾರೆ. ನಿಮ್ಮ ಜನಪ್ರಿಯತೆ ಹೆಚ್ಚಾಗುವ ಸಾಧ್ಯತೆಗಳಿವೆ. ವ್ಯಾಪಾರ, ವ್ಯವಹಾರಗಳು ಸುಲಲಿತವಾಗಿ ಆಗುವುದು. ಹಣಕಾಸಿನ ಚಿಂತೆ ಇಲ್ಲ. ಆರೋಗ್ಯದಲ್ಲಿ ಸುಧಾರಣೆ ಕಂಡು ಬರುವುದು.

ವೃಷಭ:- ಇಂದು ಉತ್ಸಾಹ ಮತ್ತು ಆನಂದ ಸಿಗಲಿದೆ. ಜೀವನ ಮತ್ತು ವೃತ್ತಿಯ ಆಕಾಂಕ್ಷೆಗಳು ಪೂರೈಸುವವು. ಮಗನ ಚಟುವಟಿಕೆ ನಿಮಗೆ ಸಂತಸವನ್ನುಂಟು ಮಾಡುವುದು. ಹಣದ ಮುಗ್ಗಟ್ಟು ಇರುವುದಿಲ್ಲ.

ಮಿಥುನ:- ಷೇರುಗಳಲ್ಲಿ ಹಣವನ್ನು ಹೂಡುವುದರಿಂದ ದ್ವಿಗುಣ ಲಾಭ ಪಡೆಯುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣವಿರುವುದು. ಆರೋಗ್ಯವು ಉತ್ತಮವಾಗಿದ್ದು, ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸನ್ನು ಹೊಂದುವಿರಿ.

ಕಟಕ:- ಸಂಕಲ್ಪಿಸಿದ ಯೋಜನೆಗಳಿಗೆ ಅಡೆತಡೆಯುಂಟಾಗುವುದು. ಇಂದು ಅಂದುಕೊಂಡ ಕಾರ್ಯಗಳು ವಿಳಂಬ ರೀತಿಯಿಂದ ಜರುಗುವುದು. ಯಾವುದಕ್ಕೂ ಕುಲದೇವರ ಆರಾಧನೆ ಮಾಡಿರಿ. ಆರೋಗ್ಯದ ಕಡೆ ಗಮನ ಹರಿಸುವುದು ಒಳ್ಳೆಯದು.

ಸಿಂಹ:- ದೂರ ಪ್ರಯಾಣದಲ್ಲಿ ಎಚ್ಚರಿಕೆ ಅಗತ್ಯ. ನಿರುದ್ಯೋಗಿಗಳು ಇನ್ನು ಸ್ವಲ್ಪ ದಿನ ಕಾಯುವುದು ಅನಿವಾರ‍್ಯವಾಗುವುದು. ದೈವವೇ ಮುನಿಸಿಕೊಂಡಾಗ ಮಾನವ ಮಾಡುವ ಪ್ರಯತ್ನ ಫಲಕಾರಿಯಾಗುವುದಿಲ್ಲ. ಆದಷ್ಟು ಈ ದಿನ ತಾಳ್ಮೆಯಿಂದಿರಿ.

ಕನ್ಯಾ:- ಇಂದು ಒಳ್ಳೆಯ ದಿನವನ್ನು ಕಳೆಯುವಿರಿ. ಕೆಲವು ಪ್ರಮುಖ ಕಾರ್ಯಗಳು ಕೂಡಾ ಪೂರ್ಣಗೊಳ್ಳಲಿವೆ. ಮಾನಸಿಕ ನಿರಾಳತೆಯನ್ನು ಹೊಂದುವಿರಿ. ಕೌಟುಂಬಿಕವಾಗಿ ಸಂತಸ ತರುವ ದಿನ. ಆರೋಗ್ಯ ಉತ್ತಮವಾಗಿರುವುದು.

ತುಲಾ:- ದುಂದುವೆಚ್ಚ ಕಡಿಮೆ ಮಾಡುವುದು ಒಳ್ಳೆಯದು. ಹಣದ ವ್ಯವಹಾರ ಗುಪ್ತವಾಗಿರಲಿ. ಹಿರಿಯರ ಸಂಗಡ ನಡೆದ ಮಾತುಕತೆಯಂತೆ ನಡೆದುಕೊಂಡಿಲ್ಲ ಎನ್ನುವ ಅರಿವು ನಿಮ್ಮದಾಗುವುದು. ಆದಷ್ಟು ಹಿರಿಯರಿಗೆ ಸಲ್ಲಬೇಕಾದ ಹಣ ಪಾವತಿಸಿರಿ.

ವೃಶ್ಚಿಕ:- ನಿಮ್ಮ ಅದೃಷ್ಟವು ಮನೆ ಬಾಗಿಲಿಗೆ ಬಂದು ಹಿಂದೆ ಹೋಗುತ್ತಿರುವುದು ನಿಮಗೆ ಹಿನ್ನಡೆ ಉಂಟಾಗುವ ಸಂಭವವಿದೆ. ಹಮ್ಮಿಕೊಂಡ ಕೆಲಸಗಳು ಇಂದು ಪೂರ್ಣಗೊಳ್ಳದೆ ಇರುವುದರಿಂದ ಅಧಿಕ ಖರ್ಚಿನ ಪ್ರಸಂಗ ತೋರುವುದು.

ಧನಸ್ಸು:- ಸಂಪಾದನೆಗಿಂತ ವೆಚ್ಚ ಹೆಚ್ಚಾಗುವುದು. ಮಾನಹಾನಿಯಾಗುವ ಸಂಭವವಿದೆ. ಮತ್ತೊಬ್ಬರ ವಿಚಾರದಲ್ಲಿ ಮಧ್ಯಸ್ಥಿಕೆ ಮಾಡದಿರಿ. ಈ ದಿನ ಆದಷ್ಟು ಮೌನಿಗಳಾಗಿ ಮತ್ತು ತಾಳ್ಮೆಯಿಂದ ಕಳೆಯಿರಿ.

ಮಕರ:- ನಿಮ್ಮ ಅದೃಷ್ಟವನ್ನು ಮುಂದೆ ತಳ್ಳಲು ಇಂದು ಒಳ್ಳೆಯ ದಿನವಲ್ಲ. ನಿಮಗೆ ಬರಬೇಕಾಗಿದ್ದ ಸವಲತ್ತುಗಳನ್ನು ಹಕ್ಕಿನಿಂದ ಕೇಳಿ ಪಡೆಯುವಿರಿ. ಕೌಟುಂಬಿಕವಾಗಿ ಸಂತಸದ ಕ್ಷ ಣಗಳನ್ನು ಅನುಭವಿಸುವಿರಿ. ಆರ್ಥಿಕ ಸ್ಥಿತಿ ಉತ್ತಮವಿರುವುದು.

ಕುಂಭ:- ವ್ಯವಹಾರಕ್ಕೆ ನಿರೀಕ್ಷಿಸುತ್ತಿರುವ ಉತ್ತೇಜನ ದೊರೆಯಲಿದೆ. ಹಳೆಯ ಕಂಪನಿಯ ಬಾಸು ಉತ್ತಮ ಸಹಕಾರವನ್ನು ನೀಡುವರು. ನಿಮ್ಮ ಹಣಕಾಸು ಪರಿಸ್ಥಿತಿ ಉತ್ತಮಗೊಳ್ಳುವುದು. ಆರೋಗ್ಯವೂ ಉತ್ತಮವಾಗಿರುವುದು.

ಮೀನ:- ಹಮ್ಮಿಕೊಂಡ ಕಾರ್ಯಗಳು ಗುರುವಿನ ಅನುಗ್ರಹದಿಂದ ಯಶಸ್ಸಿನತ್ತ ಸಾಗುವುದು. ಸಂಗಾತಿಯು ಸಣ್ಣಪುಟ್ಟ ಕಾರಣಗಳಿಗೆ ಕೋಪಗೊಳ್ಳುವುದನ್ನು ತಪ್ಪಿಸಲು ನೀವು ಬುದ್ಧಿಯನ್ನು ಖರ್ಚು ಮಾಡಬೇಕಾಗುವುದು. ಸಂಜೆ ವೇಳೆ ರಾಜಿ ಆಗುವಿರಿ.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>