Quantcast
Channel: VijayKarnataka
Viewing all articles
Browse latest Browse all 6795

ಭಾಷೆ, ಸಂಸ್ಕೃತಿ ಉಳಿವು ಅನಿವಾರ‍್ಯ* 3ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷೆ ಪ್ರೊ.ಪದ್ಮಾ ಶೇಖರ್‌

$
0
0

ಕೆ.ಆರ್‌.ಪೇಟೆ: ಅನ್ಯಭಾಷಿಕರ ಹಾವಳಿ ವಿಪರೀತವಾಗಿದೆ. ಹಿಂದೆ ಬೆಂಗಳೂರನ್ನು ಮಾತ್ರ ಆಕ್ರಮಿಸಿದ್ದ ಅನ್ಯಭಾಷಿಕರು ಈಗ ಎಲ್ಲೆಡೆ ವಿಸ್ತರಿಸುತ್ತಿದ್ದಾರೆ. ಇಂತಹವರಿಂದ ಸಂಸ್ಕೃತಿ ಮಾತ್ರವಲ್ಲ ಭಾಷೆಯನ್ನೂ ಉಳಿಸಬೇಕಾದ ಅನಿವಾರ‍್ಯತೆ ತುರ್ತು ಆಗಬೇಕಿದೆ...

ಇದು 3ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಸಂಸ್ಕೃತ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪದ್ಮಾ ಶೇಖರ್‌ ಅವರ ಅಭಿಮತ. ತಾಲೂಕಿನವರೇ ಆದ ಅವು ಸಮ್ಮೇಳನದ ಹಿನ್ನೆಲೆಯಲ್ಲಿ 'ವಿಜಯ ಕರ್ನಾಟಕ'ದೊಂದಿಗೆ ನೀಡಿದ ಸಂದರ್ಶನದ ವಿವರ ಹೀಗಿದೆ...

* ತಾಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ರಾಗಿ ಆಯ್ಕೆಯಾಗಿರುವುದು ಸಂತಸ ತಂದಿದೆಯೇ?

ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಹುಟ್ಟಿದ ಮನೆಯಲ್ಲಿ ಮಡಿಲು ತುಂಬಿದ ಸಂಭ್ರಮ. ಮನೆಯವರೆಲ್ಲ ಸೊಸೆಯನ್ನು ಮಗಳಂತೆ ಕಂಡು ಸಂಭ್ರಮಿಸುತ್ತಿದ್ದಾರೆ. ಸಮ್ಮೇಳನದ ಅಧ್ಯಕ್ಷ ತೆಯು ನನ್ನ ಬುದ್ದಿವಂತಿಕೆಗೆ ಒಲಿದಿದ್ದಲ್ಲ. ಎಲ್ಲರೂ ಅವರವರ ಸಾಮರ್ಥ್ಯ‌ಕ್ಕೆ ತಕ್ಕಂತೆ ಜ್ಞಾನಿಗಳೇ. ಆದರೆ ಅವಕಾಶ ನನಗೆ ಸಿಕ್ಕಿದೆ. ಸಂಭ್ರಮಿಸುತ್ತಿದ್ದೇನೆ.

* ತಾಲೂಕಿನ ಜನರು ನಿಮ್ಮನ್ನು ನಮ್ಮ ಮನೆ ಮಗಳು ಎಂದು ತಿಳಿದಿದ್ದಾರೆ. ನೀವೇಕೆ ಮೈಸೂರನ್ನು ಮಾತ್ರ ಸಂಭ್ರಮಿಸುತ್ತೀರಿ?

ಉತ್ತರ: ಬದುಕು ಕಟ್ಟಿಕೊಳ್ಳಲು ಮೂಲ ನೆಲೆಯನ್ನು ಬಿಟ್ಟು ಬಂದಿದ್ದೀನಿ. ಹಾಗೆಂದು ಮೂಲಸೆಲೆ ಬತ್ತಿದೆ ಅಂತಲ್ಲ. ಒಂದೆಡೆ ನೆಲೆ ನಿಂತರೆ ಸಾಧನೆಗೆ ಕಷ್ಟವಾಗುತ್ತದೆ. ಆದರೆ ಮೂಲನೆಲೆಯನ್ನು ಹಾಗೆಯೇ ಉಳಿಸಿಕೊಂಡು ಬಂದಿದ್ದೇನೆ. 26 ವರ್ಷಗಳಿಂದ ತ್ರಿವೇಣಿ ಸಂಗಮದ ಉಳಿವಿಗೆ ಶ್ರಮವಹಿಸಿದ್ದೇನೆ. ಯಶಸ್ವಿಯೂ ಆಗಿದ್ದೇನೆ. ಆಗ ಪ್ರಯತ್ನ ಮಾಡದಿದ್ದರೆ ಅಲ್ಲಿನ ಜಾಗವೆಲ್ಲಾ ಬೇರೆಯವರ ಪಾಲಾಗುತ್ತಿತ್ತು. ಈಗ ಅಲ್ಲಿ ಕುಂಭಮೇಳ ನಡೆದಿದೆ. ಕೋಟ್ಯಂತರ ರೂ.ಗಳ ಸಂಪರ್ಕ ಸೇತುವೆಯಾಗಿದೆ. ಯಾತ್ರಿ ನಿವಾಸಿ ನಿರ್ಮಾಣವಾಗುತ್ತಿದೆ. ಇದೆಲ್ಲಾ ಸಾಧನೆಯಲ್ಲವೇ?.

* ನಿಮ್ಮ ಸಾಹಿತ್ಯ ಕೃಷಿ ಕ್ನನಡದಲ್ಲಿ, ಬೋಧನೆ ಪ್ರಾಕೃತದಲ್ಲಿ, ಸಂಸ್ಕೃತ ವಿವಿಯಲ್ಲಿ ಕುಲಪತಿ ಹುದ್ದೆಗೆ ಮೂರನ್ನು ಹೇಗೆ ನಿಭಾಯಿಸುತ್ತೀರಿ?

ಉತ್ತರ: ಕುಲಪತಿ ಹುದ್ದೆಗೆ ಭಾಷೆ ಮುಖ್ಯವಲ್ಲ. ಆಡಳಿತವನ್ನು ನಡೆಸಲು ಬೇಕಾದ್ದು ಬುದ್ದಿವಂತಿಕೆ. ಆದರೆ ಆಡಳಿತವನ್ನು ನಡೆಸಲು ಪೂರಕವಾಗಿ ಸಂವಹನ ಭಾಷೆ ಅರಿವಿರಬೇಕು. ನನ್ನ ಮಾತೃಭಾಷೆ ತೆಲುಗು, ಮಾಧ್ಯಮ ಭಾಷೆ ಕನ್ನಡ, ಉದರ ಭಾಷೆ ಪ್ರಾಕೃತ, ಸಂಶೋಧನೆಯ ಸಂದರ್ಭದಲ್ಲಿ ಅಧ್ಯಯನಕ್ಕೆ ನೆರವಾಗಲು ಸಂಸ್ಕೃತ ಕಲಿತೆ. ಹೀಗಾಗಿ ನನಗೆ ತೊಂದರೆಯಾಗದು.

* ಪ್ರಶ್ನೆ: ಸ್ತ್ರೀ ಸಾಹಿತ್ಯದ ಬಗ್ಗೆ ನಿಮ್ಮ ಒಲವು?

ಉತ್ತರ: ಸ್ತ್ರೀ ಸಾಹಿತ್ಯ ಇರಲಿ. ಸ್ತ್ರೀ ಸಂವೇದನೆ ಪುರುಷ ಸಂವೇದನೆಗಿಂತ ಹೊರತಾದದ್ದು, ಭಿನ್ನವಾದದ್ದು, ವಿಶಿಷ್ಟವಾದದ್ದು. ಜೀವನದ ಜೊತೆಯಲ್ಲಿ ಸ್ತ್ರೀಯದು ಹೊಕ್ಕಳು-ಬಳ್ಳಿಯ ಸಂಬಂಧ. ಪುರುಷರ ಪ್ರಪಂಚ ಹೊರ ಪ್ರಪಂಚ. ಸ್ತ್ರೀಯರದು ಒಳ ಹಾಗೂ ಹೊರಪ್ರಪಂಚ ಎರಡು ಕೂಡಾ. ಸ್ತ್ರೀ ಸಾಹಿತ್ಯ ಎಂದಿಗೂ ವಸ್ತುನಿಷ್ಠತೆಯಿಂದ ದೂರವಿರಲಾರದು. ಸ್ತ್ರೀ ಬರವಣಿಗೆಯಲ್ಲಿ ಪ್ರಾಮಾಣಿಕತೆ ಹೆಚ್ಚು. ಕಲ್ಪನೆಗೆ ಕಡಿಮೆ ಆದ್ಯತೆ. ಆದ್ದರಿಂದ ಮಹಿಳಾ ಸಾಹಿತ್ಯವನ್ನು ಬೇರೆಯೇ ನೆಲೆಯಲ್ಲಿ ಅಥೈರ್‍ಸಬೇಕು, ಗ್ರಹಿಸಬೇಕು.

* ಸ್ತ್ರೀಯರ ಸಾಮಾಜಿಕ ಸ್ಥಾನಮಾನಗಳ ಬಗ್ಗೆ ತೃಪ್ತಿ ಇದೆಯೆ?

ಉತ್ತರ: ತೃಪ್ತಿ ಇದೆ-ತೃಪ್ತಿ ಇಲ್ಲ ಎನ್ನುವ ಹಾಗಿದೆ. ಆರ್ಥಿಕ ಪ್ರಾಬಲ್ಯದಲ್ಲಿ ಹಣವಿದ್ದರೆ ಸುಂದರವಾದ ಬದುಕು ಕಟ್ಟಿಕೊಳ್ಳುತ್ತೇವೆ ಎಂಬ ಭ್ರಮೆಯಿದೆ. ಯವುದೇ ಕಾರಣಕ್ಕೂ ಆರ್ಥಿಕ ನೆಲೆಯಲ್ಲಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯವಿಲ್ಲ. ಜೀವನ ಮನಸ್ಥಿತಿಗೆ ಸಂಬಂಧಿಸಿದ್ದು. ಈ ಸತ್ಯ ಅರ್ಥಮಾಡಿಕೊಂಡು ಸಿಗುವ ಸ್ಥಾನಮಾನಗಳನ್ನು ಹಂಚಿಕೊಳ್ಳುವ ಮನಸ್ಥಿತಿ ಕಡಿಮೆ ಇದೆ.

* ಪ್ರಶ್ನೆ: ಕನ್ನಡ ಉಳಿಸಲು ಇಷ್ಟೊಂದು ಸಂಘಗಳ ಅವಶ್ಯಕತೆಯಿದೆಯೇ?

ಉತ್ತರ: ಖಂಡಿತಾ ಇದೆ. ಅನ್ಯಭಾಷಿಕರ ಹಾವಳಿ ವಿಪರೀತವಾಗಿದೆ. ಹಿಂದೆ ಬೆಂಗಳೂರನ್ನು ಮಾತ್ರ ಆಕ್ರಮಿಸಿದ್ದ ಅನ್ಯಭಾಷಿಕರ ಹಾವಳಿ ಈಗ ಎಲ್ಲೆಡೆ ಹಬ್ಬಿದೆ. ಇಂತಹವರಿಂದ ಸಂಸ್ಕೃತಿ ಮಾತ್ರ ಅಲ್ಲ ಭಾಷೆಯನ್ನೂ ಉಳಿಸಬೇಕಾಗಿದೆ. ಹೀಗಾಗಿ ಇದನ್ನು ನಿಯಂತ್ರಿಸಲು ಕನ್ನಡಪರ ಸಂಘಟನೆಗಳ ಅವಶ್ಯಕತೆಯಿದೆ.

* ಪ್ರಶ್ನೆ: ಡಬ್ಬಿಂಗ್‌ ಕುರಿತು ನಿಮ್ಮ ಅಭಿಪ್ರಾಯ?

ಉತ್ತರ: ಡಬ್ಬಿಂಗ್‌ಗೆ ನನ್ನ ಸಂಪೂರ್ಣ ವಿರೋಧವಿದೆ. ನಮ್ಮ ಭಾಷೆಗೆ ಬೇರೆಡೆ ನೆಲೆಯಿಲ್ಲ ಎಂದ ಮೇಲೆ ಆ ಭಾಷೆಯ ಜನರನ್ನು ನಮ್ಮ ಭಾಷೆಯ ಮುಖಾಂತರ ಏಕೆ ವೈಭವೀಕರಿಸಬೇಕು. ಭಾಷೆಯ ಗಾಂಭೀರ್ಯತೆ ಹಾಗೂ ಸೊಗಡು ಡಬ್ಬಿಂಗ್‌ನಿಂದ ಖಂಡಿತ ನಾಶವಾಗುತ್ತದೆ.

* ಪ್ರಶ್ನೆ: ಜಾತ್ರೆಯನ್ನು ನೆನಪಿಸುವ ಸಮ್ಮೇಳನಗಳ ಅವಶ್ಯಕತೆಯಿದೆಯೆ?

ಖಂಡಿತ ಇದೆ. ಭಾಷೆಯು ಒಂದು ಅಭಿವ್ಯಕ್ತಿ ಮಾಧ್ಯಮ. ಅಭಿವ್ಯಕ್ತಿ ಮಾಧ್ಯಮದ ವಿಸ್ತಾರವನ್ನು ಗ್ರಹಿಲಾಗುವುದಿಲ್ಲ. ಸಮ್ಮೇಳನಗಳ ಮೂಲಕ ಇಂತಹ ವಿಷಯಗಳಿಗೆ ಜಾಗ ಸಿಗುತ್ತದೆ. ಹಲವಾರು ವಿಷಯಗಳು ಚರ್ಚೆಯಾಗುತ್ತವೆ. ಆಯಾ ಭಾಗಗಳ ಪ್ರತಿಭೆಗೆ ವೇದಿಕೆ ಸಿಗುತ್ತದೆ. ಪರಸ್ಪರ ಪರಿಚಯವಾಗುತ್ತದೆ. ಇದು ಒಳ್ಳೆಯದಲ್ಲವೇ

* ಪ್ರಶ್ನೆ: ಕನ್ನಡ ಭಾಷೆಯ ಉಳಿವಿಗೆ ನಿಮ್ಮ ಸಲಹೆ.

ಉತ್ತರ: ಒಂದೇ ಮಾತಿನಲ್ಲಿ ಹೇಳುತ್ತೇನೆ. ಎಲ್ಲರೂ ಅವರವರ ಮನೆಯಲ್ಲಿ ಮುಂದಿನ ಪೀಳಿಗೆಯ ಮಕ್ಕಳಿಗೆ ಉತ್ತಮವಾಗಿ ಕನ್ನಡವನ್ನು ಕಲಿಸಿದರೆ ಖಂಡಿತ ಭಾಷೆ ಉಳಿಯುತ್ತದೆ. ಕನ್ನಡವನ್ನು ಅಳಿಸಲು ಯಾರಿಂದಲೂ ಸಾಧ್ಯವಿಲ್ಲ.



Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!