Quantcast
Channel: VijayKarnataka
Viewing all articles
Browse latest Browse all 6795

ದಿಲ್ಲಿ: ವೈಮಾನಿಕ ಇಂಧನ ಮೇಲಿನ ತೆರಿಗೆ ಶೇ.25ರಿಂದ 1ಕ್ಕೆ ಇಳಿಕೆ

$
0
0

ಹೊಸದಿಲ್ಲಿ: ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ದಿಲ್ಲಿ ಸರಕಾರ ತನ್ನ ಬಜೆಟ್‌ನಲ್ಲಿ ವೈಮಾನಿಕ ಇಂಧನದ(ಎಟಿಎಫ್‌) ಮೇಲಿನ ತೆರಿಗೆ ದರವನ್ನು ಶೇ.25ರಿಂದ ಶೇ.1ಕ್ಕೆ ಕಡಿತಗೊಳಿಸಿದೆ. ಕೇಂದ್ರ ಸರಕಾರದ ಪ್ರಾದೇಶಿಕ ವಿಮಾನಯಾನ ಸಂಪರ್ಕ ಯೋಜನೆಗೆ ಆಪ್‌ ಸರಕಾರದ ಈ ಕ್ರಮ ಸಹಕಾರಿಯಾಗಲಿದೆ.

'ಪ್ರಾದೇಶಿಕ ಸಂಪರ್ಕ ವ್ಯವಸ್ಥೆಯ ಎಲ್ಲ ವಿಮಾನಗಳಿಗೂ ಎಟಿಎಫ್‌ ಮೇಲಿನ ತೆರಿಗೆ ಕಡಿತವು ಅನ್ವಯವಾಗಲಿದೆ,' ಎಂದು ದಿಲ್ಲಿ ಹಣಕಾಸು ಸಚಿವ ಮನಿಶ್‌ ಸಿಸೋದಿಯಾ ಹೇಳಿದ್ದಾರೆ.

'ಇದೊಂದು ಮಹತ್ವದ ಸುಧಾರಣೆ. ಪ್ರವಾಸೋದ್ಯಮವನ್ನು ಉತ್ತೇಜಿಸಲು ಆಪ್‌ ಸರಕಾರದ ಈ ಕ್ರಮ ಪೂರಕವಾಗಲಿದೆ,' ಎಂದು ವಿಮಾನಯಾನ ವಲಯದ ತಜ್ಞ ಕಪಿಲ್‌ ಕೌಲ್‌ ಅಭಿಪ್ರಾಯಪಟ್ಟಿದ್ದಾರೆ.

'ಸರಕಾರದ ಕ್ರಮದಿಂದಾಗಿ ದಿಲ್ಲಿಯಿಂದ ಹೊರಡುವ ವಿಮಾನಗಳಲ್ಲಿ ಪ್ರಯಾಣ ದರ ಶೇ.10-15ರಷ್ಟು ಇಳಿಕೆಯಾಗಲಿದೆ. ಈ ಕ್ರಮವನ್ನು ಮುಂಬಯಿ ಮತ್ತು ಚೆನ್ನೈ ನಗರಗಳಿಗೂ ಅಲ್ಲಿನ ರಾಜ್ಯ ಸರಕಾರಗಳು ಅನುಸರಿಸುವ ಸಾಧ್ಯತೆ ಇದೆ,' ಎನ್ನುತ್ತಾರೆ ವಿಶ್ಲೇಷಕರು.

'ದಿಲ್ಲಿ ಎನ್ನುವುದು ಬಹುತೇಕ ಹೆಚ್ಚು ಪ್ರಯಾಣಿಕ ದಟ್ಟಣೆಯ ಸ್ಥಳ. ಸ್ಥಳೀಯ ವಿಮಾನಯಾನ ಕಂಪನಿಗಳಿಗೆ ಆಪ್‌ ಸರಕಾರದ ನಿರ್ಧಾರದಿಂದ ಅನುಕೂಲವಾಗಲಿದೆ,' ಎನ್ನುತ್ತಾರೆ ಐಐಎಫ್‌ಎಲ್‌ನ ಸಂಜೀವ್‌ ಭಾಸಿನ್‌. ದೇಶದ ವಿಮಾನ ಪ್ರಯಾಣಿಕರ ದಟ್ಟಣೆ ವಿಷಯದಲ್ಲಿ ಮುಂಬಯಿ ಮತ್ತು ದಿಲ್ಲಿ ನಡುವಿನ ಮಾರ್ಗದಲ್ಲಿಯೇ ಶೇ.66ರಿಂದ 66ರಷ್ಟಿದೆ.

ಹೊಸ ತೆರಿಗೆಗಳಿಲ್ಲದ ಆಪ್‌ ಬಜೆಟ್‌

ದೇಶದ ರಾಜಧಾನಿ ನಗರ ದಿಲ್ಲಿಗೆ 48 ಸಾವಿರ ಕೋಟಿ ರೂ.ಗಳ ರಾಜ್ಯ ಬಜೆಟ್‌ ಅನ್ನು ಆಪ್‌ ಸರಕಾರವು ಬುಧವಾರ ಮಂಡಿಸಿದೆ. ಸಾರಿಗೆ, ಆರೋಗ್ಯ, ನೀರು ಸರಬರಾಜು, ಶಿಕ್ಷಣ(ಬಜೆಟ್‌ನ ಶೇ.24 ಭಾಗ), ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ತಮ್ಮ ಮೂರನೇ ಬಜೆಟ್‌ನಲ್ಲಿ ಆಪ್‌ ಸರಕಾರವು ಯಾವುದೇ ಹೊಸ ತೆರಿಗೆಯನ್ನು ಪ್ರಸ್ತಾಪಿಸಿಲ್ಲ.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>