ಹೊಸದಿಲ್ಲಿ: ಜರ್ಮನಿ ಮೂಲದ ಐಷಾರಾಮಿ ಕಾರುಗಳ ಉತ್ಪಾದಕ ಆಡಿ, ನೂತನ ಮತ್ತು ಪರಿಷ್ಕೃತ ಕ್ಯೂ3 ಎಸ್‌ಯುವಿಯನ್ನು ಬುಧವಾರ ಬಿಡುಗಡೆಗೊಳಿಸಿದೆ. ಇದರ ಬೆಲೆ 34 ಲಕ್ಷ ರೂ.ಗಳಿಂದ ಆರಂಭವಾಗುತ್ತದೆ. ಸನ್ ರೂಫ್, ಎಲೆಕ್ಟ್ರಿಕ್ ಹೊಂದಾಣಿಕೆಯ ಫ್ರಂಟ್ ಸೀಟ್, ಆಟೊಮ್ಯಾಟಿಕ್ ಏರ ಕಂಡೀಶನರ್ ಇತ್ಯಾದಿ ಅನುಕೂಲಗಳನ್ನು ಇದು ಒಳಗೊಂಡಿದೆ. ಆಡಿಯ ಜನಪ್ರಿಯ ಮಾದರಿ ಇದಾಗಿದ್ದು, ಇದೀಗ ಹೊಸ ಫೀಚರ್‌ಗಳನ್ನು ಒಳಗೊಂಡಿದೆ. ಹೊಸತನದ ಎಂಜಿನ್ ಆಯ್ಕೆಯನ್ನು ನೀಡಿದೆ. ಗ್ರಾಹಕರಿಗೆ ಹೆಚ್ಚು ಹೊಸತನ ಒದಗಿಸುತ್ತದೆ ಎಂದು ಆಡಿ ಇಂಡಿಯಾದ ಮುಖ್ಯಸ್ಥ ರಹಿಲ್ ಅನ್ಸಾರಿ ತಿಳಿಸಿದ್ದಾರೆ.
↧
ಆಡಿಯಿಂದ ಹೊಸ ಕ್ಯೂ3 ಬಿಡುಗಡೆ
↧