Quantcast
Channel: VijayKarnataka
Viewing all articles
Browse latest Browse all 6795

ಟೆನ್ಷನ್‌ ಬಿಡಿ, ಸ್ಮೈಲ್‌ ಮಾಡಿ

$
0
0

- ಹರೀಶ್‌ ಬಸವರಾಜ್‌

ಅತಿಯಾದ ಶಿಸ್ತು ಮಕ್ಕಳ ಜೀವನದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪುರುಷ ಪ್ರಧಾನ ಕುಟುಂಬದಲ್ಲಿ ಇಂತಹ ವಾತಾವರಣ ಹೆಚ್ಚಾಗಿರುತ್ತದೆ. ತಮ್ಮ ಮಕ್ಕಳನ್ನು ಚೆನ್ನಾಗಿ ಬೆಳೆಸುತ್ತೇವೆ ಎಂಬ ಭ್ರಮೆಯಲ್ಲಿ ಪೋಷಕರು ಮಕ್ಕಳ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳುತ್ತಾರೆ. ಅಪ್ಪನಿಗೆ ಹೆದರಿಕೊಂಡು ತಮ್ಮ ಅಪ್ಪ ಮಾಡಿದ್ದೆಲ್ಲ ಸರಿ ಎಂದು ಮಕ್ಕಳು ಸಹ ಹೇಳುತ್ತಿರುತ್ತಾರೆ. ಇದು ಸಾಕಷ್ಟು ಮನೆಗಳಲ್ಲಿ ನಡೆಯುವ ಕತೆ. ಇದೇ ಕತೆ 'ಸ್ಮೈಲ್‌ ಪ್ಲೀಸ್‌' ಸಿನಿಮಾದಲ್ಲಿಯೂ ನಡೆಯುತ್ತದೆ. ಆದರೆ ಆ ಕತೆಯನ್ನು ನಗಿಸುವ ಮೂಲಕ ಹೇಳಿ ನಿರ್ದೇಶಕರು ಚೆಂದವಾಗಿಸಿದ್ದಾರೆ.

ನೂರಕ್ಕೂ ಹೆಚ್ಚು ಹುಡುಗಿಯರನ್ನು ರಿಜೆಕ್ಟ್ ಮಾಡುವ ಮನು (ಗುರುನಂದನ್‌)ಗೆ ಅವನ ತಾಯಿ ಮದುವೆ ಮಾಡುವ ಸಲುವಾಗಿ ತನ್ನ ಅಣ್ಣ ಸಚ್ಚಿದಾನಂದ ಮೂರ್ತಿ (ಶ್ರೀನಿವಾಸ ಪ್ರಭು)ಯ ಮನೆಗೆ ಮಗನನ್ನು ಕಳುಹಿಸುತ್ತಾಳೆ. ಆದರೆ ಆತ ತನ್ನ ಮೂವರು ಮಕ್ಕಳನ್ನು ಅತಿಯಾದ ಶಿಸ್ತಿನಿಂದ ಬೆಳೆಸಿದ ವ್ಯಕ್ತಿ. ಆ ಮನೆಯಲ್ಲಿ ಒಂದೇ ಒಂದು ನಗುಮುಖದ ಫೋಟೊ ಸಹ ಇರುವುದಿಲ್ಲ. ಇಂಥ ಸಚ್ಚಿದಾನಂದನಿಗೆ ಸದಾನಂದ (ರಂಗಾಯಣ ರಘು) ಎಂಬ ತಮ್ಮ. ಅವನು ಅವರ ಅಣ್ಣನಿಗೆ ತದ್ವಿರುದ್ಧ. ಮನೆಯಲ್ಲಿರುವ ಎಲ್ಲರೂ ಅವರ ಮನೆ ಯಜಮಾನ ಸಚ್ಚಿದಾನಂದ ಮಾಡಿದ್ದು ಸರಿ ಎನ್ನುವ ಕ್ಯಾಟಗರಿಗೆ ಸೇರಿದವರು. ಆದರೆ ಯಾವಾಗಲೂ ನಗನಗುತ್ತಾ ಇರಬೇಕು ಎಂದು ಜಾಲಿಯಾಗಿ ಲೈಫ್‌ ಲೀಡ್‌ ಮಾಡುತ್ತಿರುವ ಮನು ಈ ಮನೆಗೆ ಬಂದ ಮೇಲೆ ಇಡೀ ಮನೆಯ ಚಿತ್ರಣವನ್ನೇ ಬದಲಿಸಲು ಹೊರಡುತ್ತಾನೆ. ಆದರೆ ಲೈಫ್‌ನಲ್ಲಿ ಸೀರಿಯಸ್‌ ಆಗಿ ಇರಬೇಕು ಎಂದು ಎಲ್ಲರೂ ಹೇಳುವಾಗ ಮನು ಮಾತ್ರ ಯಾವಾಗಲೂ ನಗು ನಗುತ್ತಿರಬೇಕು ಎಂದು ಏಕೆ ಹೇಳುತ್ತಾನೆ ಎಂಬುದನ್ನು ಸಿನಿಮಾ ನೋಡಿಯೇ ತಿಳಿಯಬೇಕು.

ಇಂತಹ ಕತೆಗಳುಳ್ಳ ಸಿನಿಮಾಗಳು ಸಾಕಷ್ಟು ಬಂದಿದ್ದರೂ 'ಸ್ಮೈಲ್‌ ಪ್ಲೀಸ್‌' ಸಿನಿಮಾ ತನ್ನ ಲವಲವಿಕೆಯ ಚಿತ್ರಕತೆ, ನೈಜ ಸಂಭಾಷಣೆಯಿಂದ ಗಮನ ಸೆಳೆಯುತ್ತದೆ. ಸಂಭಾಷಣೆ ಮತ್ತು ಚಿತ್ರಕತೆಯನ್ನು ರಚಿಸಿ ಸಿನಿಮಾವನ್ನು ಚೆಂದಗಾಣಿಸುವಲ್ಲಿ ನಿರ್ದೇಶಕ ರಘು ಸಮರ್ಥ ಮೊದಲ ಪ್ರಯತ್ನದಲ್ಲೇ ಸಮರ್ಥವಾಗಿ ಗೆದ್ದಿದ್ದಾರೆ. ಕನ್ನಡಕ್ಕೆ ಮತ್ತೊಬ್ಬ ಪ್ರತಿಭಾವಂತ ನಿರ್ದೇಶಕ ಮತ್ತು ಸಂಭಾಷಣೆಕಾರ ಈ ಸಿನಿಮಾ ಮೂಲಕ ಸಿಕ್ಕಿದ್ದಾರೆ ಎನ್ನಬಹದು. ಇನ್ನು ನಾಯಕ ಗುರುನಂದನ್‌ ಬಹಳ ನೈಜವಾಗಿ ನಟಿಸುವ ಮೂಲಕ ನೋಡುಗನಿಗೆ ಬಹಳ ಹತ್ತಿರವಾಗುತ್ತಾರೆ. ನಾಯಕಿ ಕಾವ್ಯಾ ಶೆಟ್ಟಿ ಕಣ್ಣಲ್ಲೇ ಸೆಳೆಯುತ್ತಾರೆ. ಮತ್ತೋರ್ವ ನಾಯಕಿ ನೇಹಾ ಪಾಟೀಲ್‌ ಅಭಿನಯ ಕೂಡ ಗಮನ ಸೆಳೆಯುತ್ತದೆ. ಶ್ರೀನಿವಾಸ್‌ಪ್ರಭು, ರಂಗಾಯಣ ರಘು, ಅರುಣಾ ಬಾಲರಾಜ್‌ ಸೇರಿದಂತೆ ಎಲ್ಲ ನಟರೂ ತಮ್ಮ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಅನೂಪ್‌ ಸೀಳಿನ್‌ ಅವರ ಸಂಯೋಜನೆಯಲ್ಲಿ ಒಂದು ಹಾಡು ಗುನುಗುವಂತಿದೆ. ಜೆ.ಎಸ್‌. ವಾಲಿಯವರ ಕ್ಯಾಮೆರಾ ಕಣ್ಣು ಮಲೆನಾಡನ್ನು ಅಂದವಾಗಿ ಸೆರೆಹಿಡಿದಿದೆ. ಒಟ್ಟಿನಲ್ಲಿ ಈ ವಾರಾಂತ್ಯಕ್ಕೆ ಇಡೀ ಕುಟುಂಬದ ಜತೆ 'ಸ್ಮೈಲ್‌ ಪ್ಲೀಸ್‌' ಸಿನಿಮಾ ನೋಡಬಹುದು. ಅಷ್ಟೇ ಅಲ್ಲದೆ ತಮ್ಮ ಮಕ್ಕಳಿಗೆ ಒಳ್ಳೆಯ ಬದುಕು ಕಟ್ಟಿಕೊಡುತ್ತೇವೆ ಎನ್ನುವ ಭರದಲ್ಲಿ ಮಕ್ಕಳ ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳದೆ ಅವರ ಜೀವನದ ಬಗ್ಗೆ ತಾವೇ ನಿರ್ಧಾರ ತೆಗೆದುಕೊಳ್ಳುವ ಅಪ್ಪಂದಿರು ಈ ಸಿನಿಮಾವನ್ನು ನೋಡಲೇಬೇಕು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>