Quantcast
Channel: VijayKarnataka
Viewing all articles
Browse latest Browse all 6795

ಶಾರ್ಪ್ ಶೂಟರ್: ಹುಸಿಯಾಗದ ಶಾರ್ಪ್ ಶೂಟರ್ ಗುರಿ

$
0
0

ಕನ್ನಡ ಚಿತ್ರ


* ಪದ್ಮಾ ಶಿವಮೊಗ್ಗ ಕಳೆದ ವಾರವಷ್ಟೇ ಮಿಂಚಾಗಿ ಬಂದಿದ್ದ ನಟ ದಿಗಂತ್ ಈ ವಾರ ಶಾರ್ಪ್ ಶೂಟರ್ ಆಗಿ ನಿಂತಿದ್ದಾರೆ. ಮಿಂಚಾಗಿ ನೀ ಬರಲು ಚಿತ್ರದ ಜೈ ಈ ಚಿತ್ರದಲ್ಲಿ ಜೆಕೆ. ಗೌಸ್ ಪೀರ್ ನಿರ್ದೇಶನದ ಈ ಚಿತ್ರ ಮೇಕಿಂಗ್‌ನಿಂದ ಗಮನ ಸೆಳೆಯುತ್ತದೆ.

ಕತ್ತಲಲ್ಲೂ ಗುರಿ ಇಡಬಲ್ಲ ಸಾಮರ್ಥ್ಯ ಇರೋ ನಾಯಕ (ದಿಗಂತ್)ನಿಗೆ ಒಂದು ದೈಹಿಕ ದೌರ್ಬಲ್ಯವಿದ್ದರೆ, ಬುಲೆಟ್ ಹೊಡೆದಂತೆ ವಾದ ಮಾಡುವ ಲಾಯರ್ ಆದ ನಾಯಕಿ (ಸಂಗೀತ)ಗೆ ಮಾನಸಿಕ ದೌರ್ಬಲ್ಯ. ದಿಗಂತ್‌ಗೆ ಈ ತೊಂದರೆ ವಂಶಪಾರಂಪರ್ಯದ ಕೊಡುಗೆಯಾದರೆ, ಸಂಗೀತಾಗೆ ಚಿಕ್ಕವಳಿದ್ದಾಗ ನಡೆದ ಕೊಲೆ ಕಾರಣಕ್ಕೆ ಶುರುವಾಗಿರುತ್ತದೆ.

ನಾಯಕ, ನಾಯಕಿ ಅಕಸ್ಮಾತ್ ಸನ್ನಿವೇಶಗಳಲ್ಲಿ ಪದೇ ಪದೇ ಇಬ್ಬರೂ ಭೇಟಿಯಾಗುತ್ತಾರೆ. ಕೆಲ ಸಂದರ್ಭಗಳಲ್ಲಿ ನಾಯಕಿಯನ್ನು ನಾಯಕ ಬಚಾವ್ ಮಾಡುತ್ತಾನೆ. ಪ್ರೀತಿ ಹುಟ್ಟುತ್ತದೆ. ಸಂಗೀತ ತನಗೆ ನೈಟೋಫೋಬಿಯಾ (ರಾತ್ರಿ ಹೊತ್ತು ಭಯ ಕಾಣಿಸಿಕೊಳ್ಳುವುದು) ತೊಂದರೆ ಇದೆ ಎಂದು ಹೇಳಿಬಿಡುತ್ತಾಳೆ. ಆದರೆ, ನಾಯಕ ತನಗಿರುವ ಸಮಸ್ಯೆಯನ್ನು ಹೇಳಿಕೊಳ್ಳುವುದಿಲ್ಲ. ಮದುವೆಯಾಗಲು ನಿರ್ಧರಿಸುತ್ತಾರೆ. ಈ ಮಧ್ಯೆ ಅಕಸ್ಮಾತ್ ಒಬ್ಬ ರೌಡಿಯ ಕೊಲೆ ಆಪಾದನೆ ಶಾರ್ಪ್ ಶೂಟರ್ ಎನಿಸಿಕೊಂಡ ದಿಗಂತ್ ಮೇಲೆ ಬರುತ್ತದೆ. ಆ ರೌಡಿಗೂ ಸಂಗೀತಳ ಬದುಕಿಗೂ ಸಂಬಂಧವಿರುತ್ತದೆ. ಕೊಲೆಯ ನಂತರ ರೌಡಿಯ ತಮ್ಮ ಮತ್ತು ಪೋಲಿಸರು ದಿಗಂತ್ ಹಿಂದೆ ಬೀಳುತ್ತಾರೆ. ದಿಗಂತ್‌ಗಿರುವ ಸಮಸ್ಯೆ ಏನು? ಅವನನ್ನು ಸಂಗೀತ ಹೇಗೆ ಆಪಾದನೆಯಿಂದ ಪಾರು ಮಾಡುತ್ತಾಳೆ? ರೌಡಿ ತಮ್ಮನನ್ನು ನಾಯಕ ಹೇಗೆ ಎದುರಿಸುತ್ತಾನೆ? ಅನ್ನೋದನ್ನು ಚಿತ್ರದಲ್ಲಿ ನೋಡಬೇಕು.

ನಿರ್ದೇಶಕ ಗೌಸ್ ಪೀರ್ ತಮ್ಮ ಚಾಣಾಕ್ಷ ಸಂಭಾಷಣೆ ಮತ್ತು ಮೇಕಿಂಗ್‌ನಿಂದ ಮೆಚ್ಚುಗೆ ಗಳಿಸುತ್ತಾರೆ. ಆದರೆ, 'ನೋ ಫೀಲಿಂಗ್ಸ್ ಬಟ್ ಬ್ಯೂಟಿಫುಲ್' ಎನ್ನುವಂತಿದೆ ಚಿತ್ರ. ನಾಯಕನನ್ನೂ ಒಳಗೊಂಡಂತೆ, ಎಲ್ಲವನ್ನೂ ಹಾಸ್ಯವಾಗಿ ಪರಿಗಣಿಸಿದ್ದಾರೆ. ಎಮೋಷನ್ಸ್‌ಗೆ ಜಾಗ ಇಲ್ಲ. ಕೆಲ ದೃಶ್ಯಗಳು ಸ್ವಲ್ಪ ಎಳೆದಂತೆನಿಸುತ್ತದೆ. ಲೊಕೇಷನ್, ಛಾಯಾಗ್ರಹಣ ಸೂಪರ್ ಆಗಿದೆ. ಸಂಕಲನ ಇದಕ್ಕೆ ಪ್ಲಸ್ ಪಾಯಿಂಟ್. ದಿಗಂತ್‌ರ ಸಿಕ್ಸ್ ಪ್ಯಾಕ್ ಕಸರತ್ತು ಫಲ ಕೊಟ್ಟಿದೆ. ಆ್ಯಕ್ಷನ್‌ಗೆ ತಾವು ಫಿಟ್ ಅನ್ನೋದನ್ನು ನಿರೂಪಿಸಿದ್ದಾರೆ. ನಟನೆ ಮತ್ತು ಅಪಿಯರೆನ್ಸ್‌ನಲ್ಲಿ ಮಿಂಚಿದ್ದಾರೆ. ನಾಯಕಿ ಸಂಗೀತ ಚೌಹಾಣ್‌ಗೆ ಇದು ಮೊದಲ ಚಿತ್ರ. ಆದರೆ, ಎಲ್ಲೂ ಹಾಗೆನ್ನಿಸದ ರೀತಿಯಲ್ಲಿ ನಟಿಸಿ ದಿಗಂತ್‌ಗೆ ಪರ್ಫೆಕ್ಟ್ ಜೋಡಿಯಾಗಿದ್ದಾರೆ. ಹಾಡುಗಳ ಚಿತ್ರೀಕರಣ ಸೊಗಸಾಗಿದೆ. ಫೈಟಿಂಗ್ ದೃಶ್ಯಗಳು ಗುಡ್. ಪ್ರಮುಖ ಪಾತ್ರ ಸಿಕ್ಕಿದ್ದರೂ ನಟನೆಯಲ್ಲಿ ಚಿಕ್ಕಣ್ಣ ಸಪ್ಪೆ ಎನಿಸುತ್ತಾರೆ. ವಿಲನ್ ರೋಲ್‌ನಲ್ಲಿ ಲೋಕಿ ಮಸಲ್ ಮ್ಯಾನ್ ಆಗಿ ಮಿಂಚಿದ್ದಾರೆ. ಉಳಿದ ನಟರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರವನ್ನು ಒಮ್ಮೆ ನೋಡಲು ಅಡ್ಡಿಯಿಲ್ಲ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>