ಲೋಹದ ಕಾಲಕೃತಿ ರೂಪಿಸುವ ಕಲಾವಿದನಾಗಿರುವ ರಾಜ್‌ಬಹಾರ್, ಹೇಮಾ ಅವರ ಮಾಜಿ ಪತಿ ಚೈತನ್ ಉಪಾದ್ಯಾಯ್ ವಿರುದ್ಧ ಬಲವಾದ ಸಾಕ್ಷ್ಯ ನೀಡುವುದಾಗಿ ಶುಕ್ರವಾರ ಹೇಮಾಗೆ ಕರೆ ಮಾಡಿದ್ದ ಎಂದು ತಿಳಿದುಬಂದಿದೆ.
ಈ ಕರೆ ಬಂದ ನಂತರ ಹರೀಶ್ ಭಂಭಾನಿ ಜತೆ ರಾಜ್‌ಬಹಾರ್‌ನನ್ನು ಭೇಟಿ ಆಗಲು ಹೇಮಾ ಒಪ್ಪಿದ್ದರು ಎಂದು ತಿಳಿದುಬಂದಿದೆ. ಈ ಕೊಲೆಯಲ್ಲಿ ರಾಜ್‌ಬಹಾರ್ ನೇರವಾಗಿ ಭಾಗಿಯಾಗಿರುವ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ.
ಇಲ್ಲಿನ ಕಾಂದೀವಿಲಿ ನಗರದ ಮೋರಿಯಲ್ಲಿ ಎರಡು ಬಾಕ್ಸ್‌ಗಳಲ್ಲಿ ಹೇಮಾ ಉಪಾದ್ಯಾಯ್ ಹಾಗೂ ಅವರ ಪರ ವಕೀಲ ಹರೀಶ್ ಭಂಭಾನಿ ಅವರ ಶವವು ಮುಂಬಯಿನ ಮೋರಿಯೊಂದರಲ್ಲಿ ಶನಿವಾರ ಪತ್ತೆಯಾಗಿತ್ತು. ಸದ್ಯ ಶವ ಪರೀಕ್ಷೆ ವರದಿಯನ್ನು ಪೊಲೀಸರು ಎದುರು ನೋಡುತ್ತಿದ್ದಾರೆ.
ಟೆಂಪೊ ಮೂಲಕ ಶವಗಳನ್ನು ಜುಹುದಿಂದ ಕಾಂದೀವಿಲಿಗೆ ಸಾಗಿಸಿರುವ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಚಾಲಕನನ್ನು ಪೊಲೀಸರು ವಿಚಾರಣೆಗೆ ಗುರಿಪಡಿಸಿದ ನಂತರ ಹಲವು ವಿಷಯಗಳು ಬೆಳಕಿಗೆ ಬಂದಿವೆ. ಎರಡು ಬಾಕ್ಸ್‌ಗಳಲ್ಲಿ ಹಳೆಯ ಮುರಿದ ವಸ್ತುಗಳಿವೆ ಎಂದು ನನಗೆ ತಿಳಿಸಲಾಗಿತ್ತು . ಶನಿವಾರ ಮಧ್ಯಾಹ್ನ ಅವನ್ನು ಕಾಂದೀವಿ ನಾಲೆಗೆ ಎಸದುದ್ದಾಗಿ ಆತ ತಿಳಿಸಿದ್ದಾನೆ ಎನ್ನಲಾಗಿದೆ.
ಜತೆಗೆ, ದಿಲ್ಲಿಯಿಂದ ಭಾನುವಾರ ಮಧ್ಯಾಹ್ನ ನಗರಕ್ಕೆ ಆಗಮಿಸಿದ ಚೈತನ್‌ನನ್ನು ಅಪರಾಧ ವಿಭಾಗದ ಪೊಲೀಸರು ಭಾನುವಾರ ವಿಚಾರಣೆಗೆ ಒಳಪಡಿಸಿದ್ದರು.
ಚೈತನ್ ಅವರು ತಮ್ಮ ಬೆಡ್‌ರೂಮ್ ಗೋಡೆಯ ಮೇಲೆ ಅಶ್ಲೀಲ ಚಿತ್ರ ಬಿಡಿಸಿದ್ದರು ಎಂದು 2013ರಲ್ಲಿ ಹೇಮಾ ಅವರು ದೂರು ದಾಖಲಿಸಿದ್ದರು. 1998ರಲ್ಲಿ ವಿವಾಹವಾಗಿದ್ದ ಇವರಿಬ್ಬರೂ 2010ರಲ್ಲಿ ವಿಚ್ಛೇದನ ಪಡೆದಿದ್ದರು.
ಮುಂಬಯಿ: ಖ್ಯಾತ ಚಿತ್ರ ಕಲಾವಿದೆ ಹೇಮಾ ಉಪಾದ್ಯಾಯ್ ಹಾಗೂ ಅವರ ಪರ ವಕೀಲ ಹರೀಶ್ ಭಂಭಾನಿ ಕೊಲೆ ಪ್ರಕರಣದ ಪ್ರಮುಖ ಶಂಕಿತ ಆರೋಪಿ ಸಾಧು ರಾಜ್‌ಬಹಾರ್‌ನನ್ನು ವಾರಾಣಸಿಯಲ್ಲಿ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ ಪೊಲೀಸರು ಸೋಮವಾರ ಬಂಧಿಸಿದ್ದಾರೆ.