Quantcast
Channel: VijayKarnataka
Viewing all articles
Browse latest Browse all 6795

ಕಹಾನಿ - 2: ತರ್ಕ, ವಿತರ್ಕಗಳ ಹೊಯ್ದಾಟ

$
0
0

ಹಿಂದಿ ಚಿತ್ರ

- ಮಹಾಂತೇಶ ಬಹಾದುಲೆ

ಈ ಮೊದಲು ಅಂದರೆ ನಾಲ್ಕು ವರ್ಷಗಳ ಹಿಂದೆ ಸುಜಾಯ್ ಘೋಷ್, ‘ಕಹಾನಿ’ ಸಿನಿಮಾ ನಿರ್ದೇಶನ ಮಾಡಿದಾಗ ಅದಕ್ಕೆ ಪ್ರಶಂಸೆಗಳ ಸುರಿಮಳೆ, ಪ್ರಶಸ್ತಿಗಳ ವರ್ಷಧಾರೆಯೇ ಆಗಿತ್ತು. ಬಹುಶಃ ಅದೇ ಹ್ಯಾಂಗ್‌ಓವರ್‌ನಲ್ಲಿ ಸುಜಯ್, ‘ಕಹಾನಿ -2: ದುರ್ಗಾ ರಾಣಿ ಸಿಂಗ್’ ಚಿತ್ರ ಮಾಡಿದಂತಿದೆ. ಏಕೆಂದರೆ ಇಲ್ಲಿ ನಿರ್ದೇಶಕನ ಕಾನ್ಫಿಡನ್ಸ್‌ಗಿಂತ ಓವರ್‌ಕಾನ್ಫಿಡನ್ಸೇ ಢಾಳಾಗಿ ಕಾಣುತ್ತದೆ.

ಮೊದಲ ಕಹಾನಿಗೂ, ಈ ಎರಡನೇ ಕಹಾನಿಗೂ ಕನೆಕ್ಷನ್ ಇಲ್ಲ. ಎರಡರದ್ದು ಸ್ವತಂತ್ರ ಕತೆಗಳೇ ಆದರೂ ಸಸ್ಪೆನ್ಸ್ ಎಂಬ ಕಾಮನ್ ಇಕ್ವೇಷನ್ ಅಂತೂ ಇದೆ. ಪಶ್ಚಿಮ ಬಂಗಾಳದ ಚಂದನ್ ನಗರದಲ್ಲಿ ನಡೆಯುವ ಸ್ಟೋರಿಯಿದು. ಅಮ್ಮ ವಿದ್ಯಾ ಸಿನ್ಹಾ (ವಿದ್ಯಾ ಬಾಲನ್) ಹಾಗೂ ಮಗಳು ಮಿನಿ ಇಬ್ಬರೇ ಇರುವ ಬೆಚ್ಚನೆಯ ಗೂಡಿನಂಥ ಮನೆ. ಮಿನಿ, ಪ್ಯಾರಲೈಸ್ಡ್ ಕಾಲುಗಳಿರುವ ವಿಕಲಚೇತನೆ. ವಿದ್ಯಾಳಿಗೆ ಆ ಮಗಳೇ ಸರ್ವಸ್ವ. ಹೇಗಾದರೂ ಮಾಡಿ ಅವಳಿಗೆ ಅಮೆರಿಕದಲ್ಲಿ ಚಿಕಿತ್ಸೆ ಕೊಡಿಸಬೇಕು, ಮಗಳು ಮೊದಲಿನಂತೆ ಸಶಕ್ತಳಾಗಿ ಓಡಾಡಬೇಕು ಎಂಬುದು ಅಮ್ಮನ ಏಕೈಕ ಆಸೆ. ಇಂಥ ವೇಳೆಯಲ್ಲಿಯೇ ಇದ್ದಕ್ಕಿದ್ದಂತೆ ಮಿನಿಯ ಕಿಡ್ನಾಪ್ ಆಗುತ್ತದೆ. ಅವಳನ್ನು ಹುಡುಕುವ ಧಾವಂತದಲ್ಲಿ ವಿದ್ಯಾ ಆ್ಯಕ್ಸಿಡೆಂಟ್ ಆಗಿ ಆಸ್ಪತ್ರೆ ಸೇರುತ್ತಾಳೆ. ಇದಕ್ಕೆ ಹಿನ್ನೆಲೆಯಾಗಿ ಮಿನಿಯ ಮತ್ತೊಂದು ಕತೆ ತೆರೆದುಕೊಳ್ಳುತ್ತದೆ.

ಮಕ್ಕಳ ಲೈಂಗಿಕ ಶೋಷಣೆಯಂಥ ಎಳೆಯೊಂದಿಗೆ ಈ ಕಹಾನಿ ತಳುಕು ಹಾಕಿಕೊಂಡಿದೆಯಾದರೂ, ಅದರ ಸುತ್ತಲೂ ಸಮಾಜದ ನಾನಾ ಮುಖಗಳ ದರ್ಶನವೂ ಆಗುತ್ತದೆ. ಪ್ರಮೋಷನ್ನಿಗಾಗಿ ಹಪಹಪಿಸುವ ಪೊಲೀಸ್ ಸಿಬ್ಬಂದಿ, ಅವರನ್ನು ದುಡ್ಡಿನ ಬಲದಿಂದ ತಮ್ಮ ಕೈಯಲ್ಲಿ ಇಟ್ಟುಕೊಳ್ಳುವ ಶ್ರೀಮಂತರು, ಹಣಕ್ಕಾಗಿ ಏನನ್ನಾದರೂ ಮಾಡಲು ಮುಂದಾಗುವ ಸಮಾಜ ವಿದ್ರೋಹಿಗಳು, ನಕಲಿ ಪಾಸ್‌ಪೋರ್ಟ್ ದಂಧೆಯ ಜಾಲ... ಹೀಗೆ ನಾನಾ ಉಪಕಹಾನಿಗಳ ಸಾಲು.

ವಿದ್ಯಾ ಬಾಲನ್ ಮನೋಜ್ಞ ಅಭಿನಯವೇ ಇಡೀ ಸಿನಿಮಾದ ಜೀವಾಳ. ಈ ಚಿತ್ರ ಅವರ ಪ್ರತಿಭೆಗೆ ಮತ್ತೊಂದು ಕನ್ನಡಿ ಹಿಡಿದಂತಿದೆ. ಮೇಕಪ್ ಇಲ್ಲದೆ ನಟನೆಯಿಂದಲೇ ಗಮನ ಸೆಳೆಯುತ್ತಾರೆ. ಮೊಗದಲ್ಲಿ ಭಾವನೆಗಳನ್ನು ವ್ಯಕ್ತಪಡಿಸುವ ರೀತಿ, ಧ್ವನಿಯಲ್ಲಿನ ಏರಿಳಿತಗಳು, ಸಂದರ್ಭ ಹಾಗೂ ಪಾತ್ರಕ್ಕೆ ಎಷ್ಟು ಬೇಕೋ ಅಷ್ಟೇ ಪವರ್ ತುಂಬುವ ಚಾಣಾಕ್ಷತೆ ಇಷ್ಟವಾಗುತ್ತವೆ. ಪೊಲೀಸ್ ಅಧಿಕಾರಿಯಾಗಿ ಅರ್ಜುನ್ ರಾಂಪಾಲ್ ಕ್ಯಾರೆಕ್ಟರ್‌ಗೆ ನ್ಯಾಯ ಒದಗಿಸಿದ್ದಾರೆ. ಉಳಿದ ಪಾತ್ರಧಾರಿಗಳದ್ದು ಸಹಜ ಅಭಿನಯನವೆ. ಇಲ್ಲಿ ಡೈರೆಕ್ಟರ್ ಹೆಚ್ಚು ಮಾರ್ಕ್ಸ್ ಪಡೆಯುತ್ತಾರೆ. ಸಿನಿಮಾಕ್ಕೆ ಮತ್ತೊಂದು ಪಿಲ್ಲರ್ ಆದವರು ಆರ್ಟ್ ಡೈರೆಕ್ಟರ್. ಕತೆಗೆ ಸಪೋರ್ಟಿವ್ ಆಗಿ ಹೇಗೆ ಒಬ್ಬ ಕಲಾ ನಿರ್ದೇಶಕ ಕೈಚಳಕ ತೋರಬಲ್ಲ ಎಂಬುದನ್ನು ತೋರಿಸಿದ್ದಾರೆ. ಹಾಡು, ಕುಣಿತಗಳಿಗೆ ಅವಕಾಶ ಇಲ್ಲದಿದ್ದರೂ, ದೃಶ್ಯಗಳಿಗೆ ಪೂರಕವಾಗಿ ಹಿನ್ನೆಲೆ ಸಂಗೀತ ಇದೆ. ಕ್ಯಾಮೆರಾ ವರ್ಕ್ ಕೂಡ ಫೈನ್.

ಇವೆಲ್ಲವುಗಳ ನಡುವೆಯೇ ನಿರ್ದೇಶಕ ಒಂದಿಷ್ಟು ಪಾತ್ರ ಹಾಗೂ ವಿಷಯಗಳಿಗೆ ತಾರ್ಕಿಕ ಅಂತ್ಯಗಳನ್ನೇ ಕೊಟ್ಟಿಲ್ಲ. ಇದು ಪ್ರೇಕ್ಷಕರಿಗೆ ಕೊಂಚ ನಿರಾಶೆ ಉಂಟುಮಾಡುತ್ತದೆ. ಹೀಗಾಗಿ ಕತೆ ಅಲ್ಲಲ್ಲಿ ತನ್ನ ಹಿಡಿತ ಬಿಟ್ಟುಕೊಟ್ಟಿದೆ. ವಿದ್ಯಾಳ ಬದುಕಿನಲ್ಲಿ ಅವಳ ಜತೆ ಮದುವೆಯಾಗಲು ಇಚ್ಛೆ ಪಡುವ ಯುವಕನೊಬ್ಬನ ಎಂಟ್ರಿ ಆಗುತ್ತದೆ. ನಂತರ ಆತನ ಕಹಾನಿ ಏನಾಗುತ್ತದೆ ಅಂತ ಗೊತ್ತೇ ಆಗುವುದಿಲ್ಲಘಿ. ಇಷ್ಟಕ್ಕೂ ಪ್ರತಿಷ್ಠಿತ ಮನೆತನವೊಂದರಲ್ಲಿ ಬಾಲಕಿಯ ಲೈಂಗಿಕ ಶೋಷಣೆ ಆಗುವ, ಅದಕ್ಕೆ ಮನೆಯ ಸದಸ್ಯೆಯ ಬೆಂಬಲ ಇರುವಂಥ ವಿಷಯಗಳು ಅಪಥ್ಯ ಎನಿಸುತ್ತವೆ. ‘ಆಕೆ ವಿದ್ಯಾ ಅಲ್ಲ, ನನ್ನ ಮೊದಲ ಪತ್ನಿ’ ಎಂದು ಪೊಲೀಸ್ ಅಧಿಕಾರಿ ಹೇಳುತ್ತಾನೆ. ಹಾಗಾದರೆ ಅವರಿಬ್ಬರೂ ಬೇರೆ ಬೇರೆ ಏಕೆ ಆದರು ಎಂಬುದರ ವಿವರಣೆ ಇಲ್ಲಘಿ. ದುರ್ಗಾ ರಾಣಿ ಸಿಂಗ್ ಹಿನ್ನೆಲೆ ಏನು... ಇಂಥ ಅನೇಕ ವಿಷಯಗಳು ಪ್ರೇಕ್ಷಕನನ್ನು ತರ್ಕ, ವಿತರ್ಕಗಳ ಹೊಯ್ದಾಟದಲ್ಲಿ ಮುಳುಗಿಸಿಬಿಡುತ್ತವೆ. ಅಲ್ಲಲ್ಲಿ ಸ್ಪಷ್ಟತೆಯ ಕೊರತೆ ಖಂಡಿತ ಕಾಡುತ್ತದೆ.

ಈ ಚಿತ್ರ ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ನೆರಳಿನಡಿ ಸುಳಿದಾಡಿದ್ದರಿಂದ ಪ್ರೇಕ್ಷಕರಲ್ಲಿ ಒಂದಿಷ್ಟು ಕುತೂಹಲ ಮೂಡಿಸುವ, ಕತೆಯಲ್ಲಿ ಕೌತುಕ ಕಟ್ಟಿಕೊಡುವ ಪ್ರಯತ್ನ ಒಂದು ಹಂತಕ್ಕೆ ಓಕೆ ಅನಿಸುತ್ತದೆ. ಇವೆಲ್ಲವುಗಳನ್ನು ಹೊರತುಪಡಿಸಿ ಇಡಿಯಾಗಿ ಚಿತ್ರವನ್ನು ಪ್ರಸೆಂಟ್ ಮಾಡಿದ ರೀತಿ ಚೆನ್ನಾಗಿದೆ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ನಾಳೆ ಮೈಸೂರು ನಗರದ ಈ  ಭಾಗದಲ್ಲಿ ವಿದ್ಯುತ್ ವ್ಯತ್ಯಯ


ಬಟ್ಟೆ ಕಳಚಿ ಸೆಕ್ಸ್ ಗೆ ಕರೆದ ಮಂಗಳಮುಖಿಯರು


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>