Quantcast
Channel: VijayKarnataka
Viewing all articles
Browse latest Browse all 6795

ನಿರುತ್ತರ: ಉತ್ತರದೊಳಗಿನ ನಿರುತ್ತರ

$
0
0

- ಶರಣು ಹುಲ್ಲೂರು

ಪ್ರೀತಿಯನ್ನು ಸಂಜೆಯ ಆಕಾಶಕ್ಕೆ ಹೋಲಿಸುತ್ತಾನೆ ಆಂಗ್ಲ ಲೇಖಕ ಎರಿಕ್‌ ಫ್ರಾಂಕ್‌. ಬಣ್ಣ ಬದಲಿಸುವ ಚಾಳಿ ಈ ಪ್ರೀತಿಗಿರುವುದೇ ಆಕಾಶದ ಹೋಲಿಕೆಗೆ ಕಾರಣ ಅನ್ನುತ್ತಾನೆ ಆತ. ಹೀಗೆ ಬಣ್ಣ ಬದಲಿಸುವ ಪ್ರೀತಿಯನ್ನು ಹುಡುಕಲು ಹೋಗುವ ಕಥಾ ನಾಯಕಿ ಹಂಸ (ಭಾವನಾ)ಳ ಬದುಕು ಕೊನೆಗೆ ಆಕೆಯನ್ನೇ ನಿರುತ್ತರಳನ್ನಾಗಿ ನಿಲ್ಲಿಸುತ್ತದೆ. ಪ್ರೇಮದ ತೀವ್ರ ಹುಡುಕಾಟದಲ್ಲಿರುವ ಆಕೆ ಏನೆಲ್ಲ ಸಂಕಷ್ಟಗಳನ್ನು ಎದುರಿಸುತ್ತಾಳೋ ಅದೆಲ್ಲವೂ 'ನಿರುತ್ತರ' ಎಂಬ ಈ ಚಿತ್ರದಲ್ಲಿದೆ.

ಇದು ವಿಕ್ರಮ್‌ ಹತ್ವಾರ್‌ ಕತೆಯನ್ನು ಆಧರಿಸಿದ ಚಿತ್ರ. ಸಂಬಂಧಗಳ ಸೂಕ್ಷ್ಮತೆಯೇ ಕತೆಯ ಜೀವಾಳ. ಅಂತಹ ಮನುಷ್ಯ ಸಂಬಂಧವನ್ನು ಸಂಗೀತದ ಜತೆ ಬೆರೆಸಿ ಚಿತ್ರ ಮಾಡಿದ್ದಾರೆ ನಿರ್ದೇಶಕ ಅಪೂರ್ವ ಕಾಸರವಳ್ಳಿ. ಸಂಗೀತಕ್ಕೆ ಮನುಷ್ಯ ಭಾವನೆ ಬೇಗ ಬೆರೆಯುವುದರಿಂದ 'ನಿರುತ್ತರ' ವಿಭಿನ್ನ ಪ್ರಯೋಗವಾಗಿ ಕಾಣುತ್ತದೆ. ನಾವೀಗ ಸಾಂಗತ್ಯದ ಬದುಕನ್ನು ಒಪ್ಪಿಕೊಂಡಿದ್ದರಿಂದ ಕತೆಯು ಅಚ್ಚರಿಯಾಗಿ ಕಾಡದು.

ಮ್ಯೂಜಿಸಿಯನ್‌ ಅಚಿಂತ್‌ (ಕಿರಣ್‌), ಡಾಕ್ಯುಮೆಂಟರಿ ಮೇಕರ್‌ ಶ್ರಾವ್ಯ (ಐಂದ್ರಿತಾ ರೇ), ಕನಸಗಿತ್ತಿ ಗೃಹಿಣಿ ಹಂಸ (ಭಾವನಾ) ಮತ್ತು ಸಾಫ್ಟ್‌ವೇರ್‌ ಎಂಜಿನಿಯರ್‌ ಪ್ರದೀಪ್‌ (ರಾಹುಲ್‌ ಬೋಸ್‌) ಈ ನಾಲ್ವರ ನಡುವೆ ಸಾಗುವ ಕತೆಯಲ್ಲಿ ಬದುಕಿನ ಬಹುತೇಕ ಮಜಲುಗಳಿವೆ. ಆಧುನಿಕ ಜಗತ್ತಿನ ಹಪಾಹಪಿತನವೂ ಅದರಲ್ಲಿ ಮಿಳಿತವಾಗಿದೆ. ಈ ಭಾವ ತೀವ್ರತೆ ಸಿನಿಮಾದ ಮೊದಲರ್ಧ ಕಾಣುವುದೇ ಇಲ್ಲ. ಅಸಲಿಯಾಗಿ ಕತೆ ತೆರೆದುಕೊಳ್ಳುವುದೇ ದ್ವಿತಿಯಾರ್ಧದಲ್ಲಿ. ಅಲ್ಲಿಯವರೆಗೂ ಸಂಗೀತಕ್ಕೆ ಸಂಬಂಧಿಸಿದ ಡಾಕ್ಯುಮೆಂಟರಿ ಅನ್ನುವ ಫೀಲ್‌ ಈ ಚಿತ್ರ ಕೊಡುತ್ತದೆ. ನಿರ್ದೇಶಕ ಅಪೂರ್ವ, ತಂದೆಯ (ಗಿರೀಶ್‌ ಕಾಸರವಳ್ಳಿ) ಕಲಾತ್ಮಕ ಸಿನಿಮಾಗಳನ್ನು ನೋಡಿಕೊಂಡು ಬೆಳೆದವರು. ವ್ಯಾಪಾರಿ ಚಿತ್ರಗಳ ರೀತಿಯಲ್ಲಿ ಆಲೋಚನೆ ಮಾಡಿದವರು. ಹಾಗಾಗಿಯೇ ಎರಡೂ ಅಭಿರುಚಿಗಳು ಈ ಚಿತ್ರದಲ್ಲಿವೆ.

ವ್ಯಾಪಾರಿ ಸಿನಿಮಾದ ಅಂಶಗಳ ಜತೆಗೆ ಅಲ್ಲಲ್ಲಿ ರೂಪಕಗಳನ್ನು ಕಟ್ಟಿಕೊಡುತ್ತಾರೆ ನಿರ್ದೇಶಕರು. ಮರಕ್ಕೂ ಹೆಣ್ಣಿನ ಜನ್ಮಕ್ಕೂ ಹೋಲಿಕೆ ಮಾಡಿದ ರೀತಿ ಚೆನ್ನಾಗಿದೆ. ಪ್ರೀತಿಯ ಹುಡುಕಾಟದಲ್ಲಿ ಸೋಲುವ ಹಂಸ ಮತ್ತೆ ಒಂಟಿಯಾಗುತ್ತಾಳೆ. ಆಗ ಅವಳು ನಡೆವ ದಾರಿಯುದ್ದಕ್ಕೂ ಸಾಕಷ್ಟು ದೃಶ್ಯ ರೂಪಕಗಳು ಕಾಣುತ್ತವೆ. ಆ ನೋಟವು ಗಮನ ಸೆಳೆಯುತ್ತದೆ. ಪ್ರತಿ ದೃಶ್ಯಕ್ಕೂ ರಸುಲ್‌ ಪೂಕುಟ್ಟಿ ಅವರ ಧ್ವನಿ ಸಂಯೋಜನೆ ಸಾಥ್‌ ನೀಡುತ್ತದೆ. ನೀಲಾದ್ರಿ ಕುಮಾರ್‌ರ ಸಂಗೀತ ಸಿನಿಮಾದ ನಿಜ ನಾಯಕ.

ಪಾತ್ರವೇ ತಾವಾಗಿದ್ದಾರೆ ಭಾವನಾ. ಐಂದ್ರಿತಾ ರೇ ಅವರನ್ನು ಆ ಪಾತ್ರದಲ್ಲಿ ಒಪ್ಪಿಕೊಳ್ಳಲು ಸಮಯ ಬೇಕಾಗುತ್ತದೆ. ಕಿರಣ್‌ ಶ್ರೀನಿವಾಸ್‌ ಮತ್ತು ರಾಹುಲ್‌ ಬೋಸ್‌ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಎಚ್‌.ಎಂ. ರಾಮಚಂದ್ರ ಅವರ ಸಿನಿಮಾಟೋಗ್ರಫಿ ಕೂಡ ಸಿನಿಮಾಗೆ ಮತ್ತಷ್ಟು ಚಂದ ತಂದಿಟ್ಟಿದೆ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>