ಬೆಂಗಳೂರು: ಕೆ.ಎಲ್ ರಾಹುಲ್ ಮತ್ತು ಕರುಣ್ ನಾಯರ್ 4ನೇ ವಿಕೆಟ್‌ಗೆ ಶತಕದ ಜತೆಯಾಟವಾಡುವುದರೊಂದಿಗೆ ಭಾರತ ಪರ ಟೆಸ್ಟ್‌ನಲ್ಲಿ ಶತಕದ ಜತೆಯಾಟದಲ್ಲಿ ಪಾಲ್ಗೊಂಡ ಕರ್ನಾಟಕದ 3ನೇ ಜೋಡಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. 17 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್‌ನಲ್ಲಿ ಕನ್ನಡಿಗರಿಬ್ಬರು ಶತಕದ ಜತೆಯಾಟದಲ್ಲಿ ಭಾಗಿಯಾಗಿದ್ದು ಇದೇ ಮೊದಲು. ಅಂಕಿ ಅಂಶ: ಚನ್ನಗಿರಿ ಕೇಶವಮೂರ್ತಿ
1999ರಲ್ಲಿ ಹ್ಯಾಮಿಲ್ಟನ್‌ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕನ್ನಡಿಗರಾದ ರಾಹುಲ್ ದ್ರಾವಿಡ್ ಮತ್ತು ಜಾವಗಲ್ ಶ್ರೀನಾಥ್ 8ನೇ ವಿಕೆಟ್‌ಗೆ 144 ರನ್ ಸೇರಿಸಿದ್ದರು. ಇದಕ್ಕೂ ಮೊದಲು ಒಂದು ಬಾರಿ ಮಾತ್ರ ರಾಜ್ಯದ ಆಟಗಾರರಿಬ್ಬರು ಭಾರತ ಪರ ಟೆಸ್ಟ್‌ನಲ್ಲಿ ಶತಕದ ಜತೆಯಾಟವಾಡಿದ್ದರು. 1975-76ನೇ ಸಾಲಿನಲ್ಲಿ ನ್ಯೂಜಿಲೆಂಡ್ ವಿರುದ್ಧ ವೆಲಿಂಗ್ಟನ್‌ನಲ್ಲಿ ನಡೆದ ಟೆಸ್ಟ್‌ನಲ್ಲಿ ಈಗಿನ ಕೆಎಸ್‌ಸಿಎ ಕಾರ್ಯದರ್ಶಿ ಬ್ರಿಜೇಶ್ ಪಟೇಲ್ ಹಾಗೂ ವಿಕೆಟ್ ಕೀಪರ್ ಸೈಯದ್ ಕಿರ್ಮಾನಿ 7ನೇ ವಿಕೆಟ್‌ಗೆ 116 ರನ್ ಕಲೆ ಹಾಕಿದ್ದರು.
↧
17 ವರ್ಷಗಳ ನಂತರ ಕನ್ನಡಿಗರ ಪರಾಕ್ರಮ
↧