ಪತ್ರಕರ್ತರ ಜತೆ ಮಾತನಾಡಿದ ಅವರು, ಮುಖ್ಯಮಂತ್ರಿ ಅವರು ಬಯಸಿದ ತಕ್ಷಣ ಯಾವುದೇ ಕ್ಷಣದಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಳಿಸಬಹುದಾಗಿದೆ. ಈಗ ಅವರು ವೆಂಟಿಲೇಟರ್ ಇಲ್ಲದೆಯೂ ಆರಾಮವಾಗಿರುತ್ತಾರೆ. ಶ್ವಾಸಕೋಶದಲ್ಲಿ ಚೇತರಿಕೆ ಇದೆ. ಸರಾಗವಾಗಿ ಮಾತನಾಡುತ್ತಿರುವ ಅವರು ತಿನ್ನುವುದರಲ್ಲೂ ಸಹಜವಾಗಿದ್ದಾರೆ. ಹೆಚ್ಚಿನ ಪ್ರೊಟೀನ್ ಡಯಟ್ ಅವರ ದೇಹಕ್ಕೆ ಅಗತ್ಯವಿದೆ ಎಂದು ವೈದ್ಯರ ತಂಡ ಹೇಳಿದೆ.
'ನಮ್ಮ ಪ್ರಯತ್ನ ಮತ್ತು ಜನರ ಪ್ರಾರ್ಥನೆಯಿಂದ ಉತ್ತಮ ಫಲಿತಾಂಶವೇ ಬಂದಿದೆ. ಇನ್ನಷ್ಟು ಸುಧಾರಿಸಲೆಂದು ಆಸ್ಪತ್ರೆಯಲ್ಲೇ ಇರಲೆಂದು ನಾವು ಸಲಹೆ ನೀಡಿದ್ದೇವೆ. ಅವರು ಬಯಸಿದಾಗ ಆಸ್ಪತ್ರೆಯಿಂದ ಹೋಗಬಹುದಾಗಿದೆ,' ಎಂದು ವೈದ್ಯರು ಹೇಳಿದ್ದಾರೆ.
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರಲ್ಲಿ ರೋಗ ಪ್ರತಿರೋಧಕ ಶಕ್ತಿ ಬಹಳಷ್ಟು ಕಡಿಮೆ ಇರುವುದರಿಂದ ಅವರನ್ನು ಸೋಂಕು ಮುಕ್ತರನ್ನಾಗಿಸಲು ಇನ್ನೂ ತೀವ್ರ ನಿಗಾ ಘಟಕದಲ್ಲೇ ಮುಂದುವರಿಸಲಾಗುವುದು ಎಂದು ಚಿಕಿತ್ಸೆ ನೀಡುತ್ತಿರುವ ಅಪೊಲೊ ಆಸ್ಪತ್ರೆಯ ಅಧ್ಯಕ್ಷ ಡಾ. ಪ್ರತಾಪ್ ಸಿ. ರೆಡ್ಡಿ ಹೇಳಿದ್ದಾರೆ.