Quantcast
Channel: VijayKarnataka
Viewing all articles
Browse latest Browse all 6795

ಬಿಬಿಎಂಪಿ ವ್ಯಾಪ್ತಿಯಲ್ಲಿ 2.93 ಲಕ್ಷ ಅಕ್ರಮ ಆಸ್ತಿ: ಹೈಕೋರ್ಟ್‌ಗೆ ಸರಕಾರದ ಹೇಳಿಕೆ

$
0
0

ಬೆಂಗಳೂರು: ನಿಯಮಬಾಹಿರವಾಗಿ ನಗರ,ಪಟ್ಟಣ ಪ್ರದೇಶಗಳಲ್ಲಿ ತಲೆ ಎತ್ತಿರುವ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವ ಯೋಜನೆ ಜಾರಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಕುರಿತಂತೆ ಪೂರಕ ಆಕ್ಷೇಪಣೆಗಳನ್ನು ಸಲ್ಲಿಸಿರುವ ರಾಜ್ಯ ಸರಕಾರ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 2.93ಲಕ್ಷ ಅನಧಿಕೃತ,ಅಕ್ರಮ ಆಸ್ತಿಗಳಿವೆ ಎಂದು ಹೇಳಿದೆ.

ಮಂಗಳೂರು ಅಭಿವೃದ್ಧಿ ಕುರಿತಾದ ಸಿಟಿಜನ್‌ ಫೋರಂ, ಬೆಂಗಳೂರಿನ ಜೆ.ಪಿ.ನಗರ 7 ಮತ್ತು 8ನೇ ಹಂತದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ, ನಮ್ಮ ಬೆಂಗಳೂರು ಫೌಂಡೇಷನ್‌ ಸೇರಿ ಹಲವು ಸಂಘಟನೆಗಳು ಯೋಜನೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯನ್ನು ಸಿಜೆ ಎಸ್‌.ಕೆ.ಮುಖರ್ಜಿ ಹಾಗೂ ನ್ಯಾಯಮೂರ್ತಿ ಆರ್‌.ಬಿ.ಬೂದಿಹಾಳ್‌ ಅವರಿದ್ದ ವಿಭಾಗೀಯ ಪೀಠ ಬುಧವಾರ ಕೈಗೆತ್ತಿಕೊಂಡಿತು. ನ್ಯಾಯಪೀಠ ಕೆಲ ಕಾಲ ವಾದ ಆಲಿಸಿದ ಬಳಿಕ ವಿಚಾರಣೆಯನ್ನು ಗುರುವಾರ ಮುಂದುವರಿಸುವುದಾಗಿ ಹೇಳಿ ಮುಂದೂಡಿತು.

''ಕರ್ನಾಟಕ ನಗರ ಮತ್ತು ಪಟ್ಟಣ ಯೋಜನೆ (ಅನಧಿಕೃತ ಅಭಿವೃದ್ಧಿ ಮತ್ತು ಕಟ್ಟಡ ನಿಯಂತ್ರಣ) ನಿಯಮ 2014ರ ಜಾರಿ ಕುರಿತಂತೆ ರಾಜ್ಯ ಸರಕಾರ ಬಿಬಿಎಂಪಿ ವ್ಯಾಪ್ತಿಯ ಕೆಲವು ವಾರ್ಡ್‌ಗಳಲ್ಲಿ ಪ್ರಾಯೋಗಿಕ ಸಮೀಕ್ಷೆ ನಡೆಸಿದೆ. ಆ ಪ್ರಕಾರ ಒಟ್ಟಾರೆ ಬೆಂಗಳೂರು ನಗರದಲ್ಲಿ 16.75ಲಕ್ಷ ಆಸ್ತಿಗಳಿವೆ. ಅವುಗಳಲ್ಲಿ 13.82 ಲಕ್ಷ ಆಸ್ತಿಗಳು (ಕಟ್ಟಡಗಳು ಮತ್ತು ನಿವೇಶನಗಳು ಸೇರಿ) ತೆರಿಗೆ ವ್ಯಾಪ್ತಿಗೆ ಒಳಪಟ್ಟಿವೆ. ಉಳಿದ ಶೇ.17.49ರಷ್ಟು ಅಂದರೆ 2.93ಲಕ್ಷ ಆಸ್ತಿಗಳು ತೆರಿಗೆ ವ್ಯಾಪ್ತಿಗೆ ಒಳಪಟ್ಟಿಲ್ಲ, ಹಾಗಾಗಿ ಅವುಗಳನ್ನು ಅಕ್ರಮ ಆಸ್ತಿಗಳು ಎಂದು ಪರಿಗಣಿಸಲಾಗುತ್ತಿದೆ ''ಎಂದು ಆಕ್ಷೇಪಣೆಯಲ್ಲಿ ಸರಕಾರ ವಿವರಿಸಿದೆ.

ಸರ್ವೇ ಮಾಡಲಾಗದು: ಆದರೆ, ಸರಕಾರ ತನ್ನ ಆಕ್ಷೇಪಣೆಯಲ್ಲಿ ಬಿಬಿಎಂಪಿಯಲ್ಲಿ ಭಾರಿ ಸಂಖ್ಯೆಯ ಅಕ್ರಮ ಆಸ್ತಿಗಳು ಇರುವುದರಿಂದ ಸಮೀಕ್ಷೆ ನಡೆಸಲು ಸಾಧ್ಯವಿಲ್ಲ ಎಂದು ಹೇಳಿದೆ. ಅಕ್ರಮ ಕಟ್ಟಡಗಳ ಅಂಕಿ ಅಂಶಗಳಿಗೂ, ಈ ಹೇಳಿಕೆಗೂ ಒಂದಕ್ಕೊಂದು ತಾಳೆ ಇಲ್ಲ.

ಅಲ್ಲದೆ, ಸರಕಾರ ಒಟ್ಟಾರೆ ಪಾಲಿಕೆ ವ್ಯಾಪ್ತಿಯಲ್ಲಿ 10.19ಲಕ್ಷ ಆಸ್ತಿಗಳು, ಅಂದರೆ ಶೇ.73.74ರಷ್ಟು ವಸತಿ ಉದ್ದೇಶಕ್ಕೆ ಒಳಕೆಯಾಗುತ್ತಿವೆ.ಉಳಿದ 1.34 ಆಸ್ತಿಗಳು (ಶೇ. 9.69ರಷ್ಟು) ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿವೆ. 61ಸಾವಿರ ಆಸ್ತಿಗಳು (ಶೇ.4.61) ಮಿಶ್ರ ಬಳಕೆಯಾಗುತ್ತಿವೆ. ಶೇ.12.16ರಷ್ಟು ಅಂದರೆ 1.68ಲಕ್ಷ ಖಾಲಿ ನಿವೇಶನಗಳಿದ್ದು, ಅವರು ತೆರಿಗೆ ಪಾವತಿ ಮಾಡುತ್ತಿದ್ದಾರೆ ಎಂದೂ ಹೇಳಿದೆ.

''ಸ್ಯಾಂಪಲ್‌ ಸರ್ವೇ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿ ಶೇ.52.50ರಷ್ಟು ವಸತಿ ಕಟ್ಟಡಗಳನ್ನು ನಿಯಮಗಳನ್ನು ಉಲ್ಲಂಘಿಸಿ ನಿರ್ಮಿಸಲಾಗಿದೆ. ಶೇ.0 ಯಿಂದ 50ರವರೆಗೆ ನಿಯಮ ಉಲ್ಲಂಘನೆ ಆಗಿರುವ ಕಟ್ಟಡಗಳ ಪ್ರಮಾಣ ಶೇ.52.5ರಷ್ಟಿದೆ. ಅದೇ ರೀತಿ ಶೇ.50ಕ್ಕೂ ಅಧಿಕ ನಿಯಮಗಳನ್ನು ಉಲ್ಲಂಘಿಸಿರುವ ಕಟ್ಟಡಗಳ ಪ್ರಮಾಣ ಶೇ.47.5ರಷ್ಟಿದೆ.ಅದೇ ರೀತಿ ವಾಣಿಜ್ಯ ಕಟ್ಟಡಗಳಲ್ಲೂ ಸಹ ಶೇ.8.75ಕ್ಕೂ ಅಧಿಕ ಕಟ್ಟಡಗಳಲ್ಲಿ ಶೇ.25ಕ್ಕೂ ಹೆಚ್ಚೂ ನಿಯಮ ಉಲ್ಲಂಘನೆ ಮಾಡಲಾಗಿದೆ''ಎಂದೂ ಸರಕಾರ ಹೇಳಿದೆ.

ಅರ್ಜಿದಾರರ ಪರ ವಕೀಲೆ ಜೋಯ್ನಾ ಕೊತಾರಿ, ''ಬೆಂಗಳೂರಿನಲ್ಲಿ ಒಂದು ಪ್ರಾಯೋಗಿಕ ಸಮೀಕ್ಷೆಯನ್ನು ಮುಂದಿಟ್ಟುಕೊಂಡು ಸರಕಾರ, ಇಡೀ ರಾಜ್ಯದ ಅನಧಿಕೃತ ಕಟ್ಟಡಗಳನ್ನು ಸಕ್ರಮಗೊಳಿಸಲು ಹೊರಟಿರುವುದು ಸರಿಯಲ್ಲ. ಇದು ನಿಯಮಬಾಹಿರ ಕ್ರಮ. ಇದರಿಂದ ನಿಯಮ ಪಾಲಿಸಿ ಕಟ್ಟಡಗಳನ್ನು ನಿರ್ಮಿಸಿರುವವರಿಗೆ ತೊಂದರೆ ಆಗಲಿದೆ ''ಎಂದು ನ್ಯಾಯಪೀಠಕ್ಕೆ ವಿವರಿಸಿದರು.

ನಮ್ಮ ಬೆಂಗಳೂರು ಫೌಂಡೇಷನ್‌ ಪರ ವಾದ ಮಂಡಿಸಿದ ಹಿರಿಯ ವಕೀಲ ಸಜ್ಜನ್‌ ಪೂವಯ್ಯ ''ಅನಧಿಕೃತವಾಗಿ ನಿರ್ಮಿಸಿರುವ ಮನೆಗಳನ್ನು ಸಕ್ರಮಗೊಳಿಸುವುದು ಸರಿಯಾದ ಕ್ರಮವಲ್ಲ. ಇದರಿಂದ ಸರಕಾರವೇ ಅಕ್ರಮವನ್ನು ಪೋಷಿಸಿದಂತಾಗುತ್ತದೆ ''ಎಂದರು.

ಶೇ.25 ನಿಯಮ ಉಲ್ಲಂಘನೆ ಮಾಡಿರುವ ವಾಣಿಜ್ಯ ಕಟ್ಟಡಗಳು ಮತ್ತು ಶೇ.50ರಷ್ಟು ನಿಯಮ ಪಾಲಿಸದಿರುವ ಅಕ್ರಮ ವಸತಿ ಕಟ್ಟಡಗಳನ್ನು ಸಕ್ರಮಗೊಳಿಸಲು ಸರಕಾರ 2015ರ ಫೆಬ್ರವರಿಯಲ್ಲಿ ಅಧಿಸೂಚನೆ ಹೊರಡಿಸಿದೆ. ಆದರೆ ಯೋಜನೆಯಡಿ ಸ್ವೀಕರಿಸುವ ಅರ್ಜಿಗಳ ಮುಂದಿನ ಪ್ರಕ್ರಿಯೆ ನಡೆಸಬಾರದು ಎಂದು ಹೈಕೋರ್ಟ್‌ 2015ರ ಮಾ.19ರಂದು ಮಧ್ಯಾಂತರ ಆದೇಶ ಹೊರಡಿಸಿದೆ. ಸರಕಾರ ಆ ತಡೆಯಾಜ್ಞೆ ತೆರವುಗೊಳಿಸುವಂತೆ ನ್ಯಾಯಾಲಯವನ್ನು ಕೋರಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>