'ದೀಪಾವಳಿ ಎಲ್ಲರನ್ನೂ ಒಂದುಗೂಡಿಸುತ್ತಿದ್ದು, ವಿಶ್ವದ ಎಲ್ಲೆಡೆ ಇದನ್ನು ಆಚರಿಸಲಾಗುತ್ತಿದೆ. ವಿಶ್ವದ ನಾಯಕರೂ ಈ ಹಬ್ಬವನ್ನು ಆಚರಿಸುತ್ತಿದ್ದು, ಫೋಟೋಗಳನ್ನು ವಿವಿಧ ಸಾಮಾಜಿಕ ಜಾಲತಾಣಗಳ ಮೂಲಕ ಹಂಚಿಕೊಳ್ಳುತ್ತಿದ್ದಾರೆ. ಆ ಮೂಲಕ ಕತ್ತಲಿನಿಂದ ಬೆಳಕಿನೆಡೆಗೆ ಸಾಗುವ ಈ ಹಬ್ಬವನ್ನು ಅರ್ಥಪೂರ್ಣವಾಗಿಸಲಾಗುತ್ತಿದೆ, ಎಂದ ಪ್ರಧಾನಿ ಮಕ್ಕಳು ಪಟಾಕಿ ಹೊಡೆಯುತ್ತಿದ್ದರೆ, ಪೋಷಕರು ಜತೆಗಿದ್ದು, ಗಮನಿಸಬೇಕೆಂದು ಕರೆ ನೀಡಿದರು.
ಸೈನಿಕರ ಸ್ಮರಣೆ:
'ಗಡಿ ಭದ್ರತಾ ಪಡೆ, ಸಿಆರ್‌ಪಿಎಫ್ ಮುಂತಾದ ಸೇನಾ ಪಡೆಗಳು ಕರ್ತವ್ಯದಲ್ಲಿದ್ದು, ನಮ್ಮನ್ನು ಕಾಯುತ್ತಿವೆ. ಸೈನಿಕರ ತ್ಯಾಗ, ಬಲಿದಾನದಿಂದಲೇ ನಾವು ಸಂತೋಷದಿಂದ ದೀಪಾವಳಿ ಆಚರಿಸಲು ಸಾಧ್ಯವಾಗುತ್ತಿರುವುದು. ದೇಶದ ಜನತೆ ಸೈನಿಕರಿಗೆ ಸಂದೇಶ ನೀಡುವ ಮೂಲಕ, ಅವರೊಂದಿಗಿದ್ದೇವೆ ಎಂಬ ಭಾವ ಮೂಡಿಸುವಲ್ಲಿ ಯಶಸ್ವಿಯಾಗಿದ್ದಾರೆ,' ಎಂದರು.
ಜತೆಗೆ ಗುರು ನಾನಕ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಮೋದಿ, 'ಸಬ್ ಕೇ ಸಾತ್, ಸಬ್ ಕೇ ವಿಕಾಸ್' ಮಂತ್ರವನ್ನು ಪುನರುಚ್ಛರಿಸಿದ್ದಾರೆ.
ಸರ್ದಾರ ಪಟೇಲ್ ಹುಟ್ಟಹಬ್ಬ ಹಾಗೂ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಪುಣ್ಯತಿಥಿಯಾದ ಅ.31ರಂದು ಮೋದಿ, ದೇಶದ ಇಬ್ಬರು ಮಹಾನ್ ನಾಯಕರನ್ನು ಸ್ಮರಿಸಿದರು.
'ಎಲ್ಲರೂ ಒಗ್ಗಟ್ಟಾಗಿ, ದೇಶವನ್ನು ರಕ್ಷಿಸಬೇಕು,' ಎಂದು ಕರೆ ನೀಡಿರುವ ಪ್ರಧಾನಿ, 'ದೇಶದಲ್ಲಿ ಎಲ್ಲರನ್ನೂ ಒಂದುಗೂಡಿಸಲು ಸರ್ದಾರ್ ಪಟೇಲ್ ಶ್ರಮಿಸಿದ್ದು, ನಾವು ಮಹಾನ್ ದೇಶವನ್ನಾಗಿಸಲು ಶ್ರಮಿಸಬೇಕು,' ಎಂದರು.
ಬಯಲು ಮುಕ್ತ ಶೌಚ:
ಟಹರಿಯಾಣದಲ್ಲಿ ಏಳು ಜಿಲ್ಲೆಗಳನ್ನು ಬಯಲು ಮುಕ್ತ ಶೌಚಾಲಯವೆಂದು ಘೋಷಿಸಿದ್ದು, ಗುಜರಾತ್‌ನಲ್ಲಿ 150 ನಗರ ಪಾಲಿಕೆಗಳು ಬಯಲು ಮುಕ್ತ ಶೌಚಾಲಯಗಳಾಗಿವೆ. ಈ ವಿಚಾರದಲ್ಲಿ ಈ ರಾಜ್ಯಗಳ ಶ್ರಮ ಶ್ಲಾಘನೀಯ,' ಎಂದರು.
ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಜನಪ್ರಿಯ 25ನೇ ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮದಲ್ಲಿ ದೇಶದ ಜನರನ್ನು ಉದ್ದೇಶಿಸಿ ಮಾತನಾಡುತ್ತಿದ್ದು, ಸಮಸ್ತರಿಗೂ ದೀಪಾವಳಿ ಶುಭಾಶಯವನ್ನು ಹೇಳಿದ್ದಾರೆ.