Quantcast
Channel: VijayKarnataka
Viewing all articles
Browse latest Browse all 6795

ಅಸೀಮ ಧೀರರಿಗೆ ಕೋಟಿ ನಮನ

$
0
0

ಹೊಸದಿಲ್ಲಿ: ಕಾಶ್ಮೀರದ ಉರಿ ಸೇನಾ ಮೇಲೆ ಉಗ್ರರು ನಡೆಸಿದ ದಾಳಿಗೆ ಪ್ರತೀಕಾರ ತೀರಿಸಿಕೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಸರಕಾರದ ಮೇಲೆ ಭಾರಿ ಒತ್ತಡ ನಿರ್ಮಾಣವಾಗಿತ್ತು. ನಮ್ಮ ಸೇನೆಯು ಸೂಕ್ತ ಸಮಯದಲ್ಲಿ ದಿಟ್ಟ ಉತ್ತರ ನೀಡಲಿದೆ ಎಂದು ಹೇಳುತ್ತಲೇ ಬಂದಿದ್ದ ಸರಕಾರದ ಮಾತು ಈಗ ನಿಜವಾಗಿದೆ. ರಾತ್ರಿ ಬೆಳಗಾಗುವುದರೊಳಗೆ ಪಾಕ್‌ ಗಡಿದಾಟಿ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿರುವ ಏಳು ಟೆರರ್‌ ಕ್ಯಾಂಪ್‌ಗಳನ್ನು ಧ್ವಂಸಗೊಳಿಸಿದೆ. ಈ ಕಾರ‍್ಯಚರಣೆಯಲ್ಲಿ ಪಾಲ್ಗೊಂಡಿದ್ದ ಸೇನೆಯ ಪ್ಯಾರಾ ಕಮಾಂಡೋಗಳ ಸಾಹಸಕ್ಕೀಗ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ.

ಇಂತಹ ಕೆಚ್ಚದೆಯ ಯೋಧರ ಬತ್ತಳಿಕೆಯನ್ನೇ ಸಶಸ್ತ್ರ ಪಡೆಗಳು ಹೊಂದಿವೆ. ಕಠಿಣ ತರಬೇತಿಯೊಂದಿಗೆ ಎಂತಹ ಸಂದಿಗ್ಧ ಪರಿಸ್ಥಿತಿಯನ್ನು ನೇರಾನೇರ ಹೋರಾಟದ ಮೂಲಕ ನಿಭಾಯಿಸುವ ಛಲವೇ ಇವರ ತಾಕತ್ತು. ಭೂಸೇನೆ, ವಾಯುಪಡೆ, ನೌಕಾಪಡೆಗಳು ಇಂತಹ ಪ್ರತ್ಯೇಕ ಪ್ಯಾರಾ ಕಮಾಂಡೊಗಳ ತುಕಡಿಯನ್ನೇ ಹೊಂದಿವೆ.

ಪ್ಯಾರಚೂಟ್‌ ರೆಜಿಮೆಂಟ್‌:

ಭೂ ಸೇನೆಯಲ್ಲಿರುವ ಪ್ಯಾರಚೂಟ್‌ ರೆಜಿಮೆಂಟ್‌ಅನ್ನೇ ಜನಪ್ರಿಯವಾಗಿ 'ಪ್ಯಾರಾ ಕಮಾಂಡೋಸ್‌' ಎನ್ನಲಾಗುತ್ತದೆ. ಅಂದರೆ ಈ ರೆಜಿಮೆಂಟ್‌ನಲ್ಲಿ ತರಬೇತಿ ಪಡೆಯುವ ಯೋಧರೇ ಕಮಾಂಡೊಗಳಾಗಿ ಬಡ್ತಿ ಪಡೆಯುವರು. ಉಗ್ರ ನಿಗ್ರಹ ಕಾರ‍್ಯಚರಣೆಯಲ್ಲಿ, ಭಯೋತ್ಪಾದಕರು ಜನರನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಾಗ ಅವರ ಬಿಡುಗಡೆಗಾಗಿ ಇಲ್ಲವೇ ವೈರಿ ದೇಶದಲ್ಲಿ ನಮ್ಮ ಸರಕಾರ ಸಾಧಿಸಬೇಕಾದ ಉದ್ದೇಶಿತ ಗುರಿ ಸಾಧನೆಗಾಗಿ ಇಂತಹ ಕಮಾಂಡೋಗಳನ್ನು ಬಳಸಿಕೊಂಡು ಕಾರ‍್ಯಚರಣೆ ನಡೆಸಲಾಗುತ್ತದೆ.

1952ರಲ್ಲಿ ಮರುಹುಟ್ಟು : 1945ರಲ್ಲಿಯೇ ಬ್ರಿಟಿಷ್‌ ಭಾರತೀಯ ಸೇನೆಯಲ್ಲಿ ಪ್ಯಾರಾಚೂಟ್‌ ರೆಜಿಮೆಂಟ್‌ ಇತ್ತು. ಆದರೆ ಎರಡನೇ ಮಹಾಯುದ್ಧದ ನಂತರ ಇದನ್ನು ವಿಸರ್ಜಿಸಲಾಗಿತ್ತು. ಪುನಃ 1952ರಲ್ಲಿ ಪ್ಯಾರಾಚೂಟ್‌ ರೆಜಿಮೆಂಟ್‌ ರಚಿಸಿ, ಅದರಲ್ಲಿ ಏಳು ವಿಶೇಷ ಪಡೆಗಳನ್ನು, ಆರು ಹೆಲಿಕಾಪ್ಟರ್‌ಗಳು, ಎರಡು ಪ್ರಾದೇಶಿಕ ಸೇನಾ ತುಕಡಿಗಳು ಮತ್ತು ಒಂದು ರಾಷ್ಟ್ರೀಯ ರೈಫಲ್ಸ್‌ ಬೆಟಾಲಿಯನ್‌ನ್ನು ಸೇರ್ಪಡೆಗೊಳಿಸಿ ಸದೃಢಗೊಳಿಸಲಾಗಿತ್ತು.

ಈ ಹಿಂದೆಯೂ ಕಾರ‍್ಯಚರಣೆ ಕೈಗೊಂಡಿದ್ದರು...

1971ರ ಇಂಡೋ-ಪಾಕ್‌ ಸಮರ, ಖಲಿಸ್ತಾನ ಉಗ್ರರ ವಿರುದ್ಧ ಕೈಗೊಳ್ಳಲಾಗಿದ್ದ ಆಪರೇಷನ್‌ ಬ್ಲೂಸ್ಟಾರ್‌, ಎಲ್‌ಟಿಟಿಇ ಉಗ್ರರ ವಿರುದ್ಧ ಶ್ರೀಲಂಕಾದಲ್ಲಿ ನಡೆಸಲಾದ ಆಪರೇಷನ್‌ ಪವನ್‌ ಕಾರ‍್ಯಚರಣೆಯಲ್ಲಿ ಪ್ಯಾರಾ ಕಮಾಂಡೋಗಳ ಪಾತ್ರ ದೊಡ್ಡದು. ಆಪರೇಷನ್‌ ಬ್ಲೂಸ್ಟಾರ್‌ ವೇಳೆ ಅಮೃತಸರದ ಸ್ವರ್ಣ ಮಂದಿರದೊಳಗೆ ನುಗ್ಗಿಅಲ್ಲಿ ಅಡಗಿದ್ದ ಖಲಿಸ್ತಾನ ಉಗ್ರರನ್ನು ಸೆದೆಬಡಿಯಲಾಗಿತ್ತು.

1999ರ ಕಾರ್ಗಿಲ್‌ ಸಮರದ ವೇಳೆ ಪ್ಯಾರಾಚೂಟ್‌ ರೆಜಿಮೆಂಟ್‌ನ 9 ಬೆಟಾಲಿಯನ್‌ಗಳನ್ನು ಕಾರ್ಗಿಲ್‌ ಪರ್ವತ ಪ್ರದೇಶಕ್ಕೆ ಕಳುಹಿಸಲಾಗಿತ್ತು. ಪಾಕ್‌ ಪಡೆಗಳನ್ನು ಹಿಮ್ಮೆಟ್ಟಿಸಿ ಭಾರತ ವಿಜಯದ ನಗೆ ಬೀರಿತ್ತು. ಜಮ್ಮು-ಕಾಶ್ಮೀರ, ಈಶಾನ್ಯ ರಾಜ್ಯಗಳಲ್ಲಿ ಉಗ್ರ ನಿಗ್ರಹ ಕಾರ‍್ಯಚರಣೆಯಲ್ಲೂ ಪ್ಯಾರಾ ಕಮಾಂಡೊಗಳನ್ನು ಬಳಸಿಕೊಳ್ಳಲಾಗುತ್ತಿದೆ. ಈ ಹಿಂದೆ ಕೊರಿಯಾ (1950-54) ಮತ್ತು ಗಾಜಾಪಟ್ಟಿ (1956-58)ಯಲ್ಲಿ ಶಾಂತಿ ಪಾಲನ ಕಾರ‍್ಯಚರಣೆಯಲ್ಲೂ ಈ ಕಮಾಂಡೊಗಳನ್ನು ಭಾರತ ಕಳುಹಿಸಿಕೊಟ್ಟಿತ್ತು.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>