Quantcast
Channel: VijayKarnataka
Viewing all articles
Browse latest Browse all 6795

ಟಿಎಸ್‌ಎಸ್‌ನಿಂದ 1.60ಲಕ್ಷ ಕ್ವಿಂ. ಅಡಕೆ ವಹಿವಾಟು

$
0
0

ಶಿರಸಿ: ಅಂತಾರಾಜ್ಯ ಅಡಕೆ ವಹಿವಾಟು ಸಹಕಾರಿ ಸಂಸ್ಥೆಯಾದ ತೋಟಗಾರ್ಸ್‌ ಕೋ-ಆಪರೇಟಿವ್‌ ಸೇಲ್‌ ಸೊಸೈಟಿ(ಟಿಎಸ್‌ಎಸ್‌) ಕಳೆದ ಆರ್ಥಿಕ ವರ್ಷದಲ್ಲಿ 1.60 ಲಕ್ಷ ಕ್ವಿಂಟಾಲ್‌ ಅಡಕೆ ವಹಿವಾಟು ನಡೆಸಿದೆ. ಸಂಸ್ಥೆಯ ಸಿಹಿ ಅಡಕೆಪುಡಿ ಮಾರಾಟ ಹನ್ನೆರಡು ರಾಜ್ಯಗಳನ್ನು ತಲುಪಿದೆ.

ಕಳೆದ ಸಾಲಿನಲ್ಲಿ ಒಟ್ಟು 630 ಕೋಟಿ ರೂ. ವಹಿವಾಟು ನಡೆದಿದೆ. ಸಂಸ್ಥೆಯ ದಲಾಲಿ ವಿಭಾಗದಲ್ಲಿ 403 ಕೋಟಿ ರೂ. ಮೌಲ್ಯದ ಅಡಕೆ ವಹಿವಾಟು ಮಾಡಲಾಗಿದೆ. ಸಿದ್ದಾಪುರ ಶಾಖೆಯಲ್ಲಿ 27 ಸಾವಿರ ಕ್ವಿಂಟಾಲ್‌, ಯಲ್ಲಾಪುರ ಶಾಖೆಯಲ್ಲಿ 30 ಸಾವಿರ ಕ್ವಿಂಟಾಲ್‌ ಅಡಕೆ ಮಾರಾಟವಾಗಿದೆ. ಟಿಎಸ್‌ಎಸ್‌ ಸ್ವತಃ 70 ಸಾವಿರ ಕ್ವಿಂಟಲ್‌ ಅಡಕೆ ಖರೀದಿಸಿದ್ದು, 45 ಲಕ್ಷ ರೂ. ಲಾಭ ಗಳಿಸಿದೆ. ಸಿಹಿ ಅಡಕೆ ಪುಡಿ ವಿಭಾಗದಲ್ಲಿ 42 ಕೋಟಿ ರೂ. ವಹಿವಾಟು ನಡೆಸಿದೆ. ಇದಕ್ಕೆ 8,500 ಕ್ವಿಂಟಲ್‌ ಅಡಕೆ ಬಳಸಿದೆ. ಅಲ್ಲದೇ ಸಂಘದ ಸೂಪರ್‌ ಮಾರ್ಕೆಟ್‌ನ ಕಿರಾಣಿ ಹಾಗೂ ಕೃಷಿ ವಿಭಾಗದಲ್ಲಿ 41 ಕೋಟಿ ರೂ. ವಹಿವಾಟು ಮೂಲಕ 1.25 ಕೋಟಿ ರೂ. ಲಾಭ ಗಳಿಸಿದೆ. ಸದಸ್ಯರಿಗೆ 82 ಕೋಟಿ ರೂ. ಮತ್ತು ಪ್ರಾಥಮಿಕ ಸಹಕಾರಿ ಸಂಘಗಳಿಗೆ 10.49 ಕೋಟಿ ರೂ. ಸಾಲ ನೀಡಿದೆ. ಅಡಕೆ ಖರೀದಿದಾರರಿಗೂ 63.81 ಕೋಟಿ ರೂ. ಉದ್ರಿ ನೀಡಿದೆ.

''2015-16ನೇ ಸಾಲಿನಲ್ಲಿ 2 ಕೋಟಿ ರೂ. ನಿವ್ವಳ ಲಾಭ ಗಳಿಸಿದ್ದು ಷೇರುದಾರ ಸದಸ್ಯರಿಗೆ ಶೇ.20 ಲಾಭಾಂಶ ನೀಡಲು ಉದ್ದೇಶಿಸಿದೆ. ಸಂಸ್ಥೆಯ ಅಡಕೆ ಬೆಳೆಗಾರ ಸದಸ್ಯರ ಸಭೆ ಸೆ. 16ರಂದು ನಡೆಯಲಿದೆ,'' ಎಂದು ಸಂಸ್ಥೆ ಅಧ್ಯಕ್ಷ ಶಾಂತಾರಾಮ ಹೆಗಡೆ ಶೀಗೆಹಳ್ಳಿ ಮತ್ತು ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ ತಿಳಿಸಿದ್ದಾರೆ.



Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>