Bandhs are robbing us of GDP growth - I wonder if someone can calculate Bandh linked GDP loss to the country @PMOIndia Tks to Bengaluru Bandh driving was a pleasure like old times. A one hour drive took only 15 mins!!!
"ಮತ್ತೊಂದು ಬಂದ್, ಇದೀಗ 'ಬಂದಳೂರು'. ಬಂದ್‌ಗಳಿಂದ ಉತ್ಪಾದಕತೆ ಕುಂಠಿತವಾಗುತ್ತದೆ. ಎರಡೂ ರಾಜ್ಯಗಳ ರೈತರು ಪರಸ್ಪರ ಹಂಚಿಕೊಳ್ಳದಿರುವಂಥಾ ಪರಿಸ್ಥಿತಿ ತೀರಾ ಖೇದಕರ' ಎಂದು ಶಾ ಅವರು ಗುರುವಾರ ಟ್ವೀಟ್ ಮಾಡಿದ್ದರು. ಅಷ್ಟಲ್ಲದೆ, ಬೆಂಗಳೂರಿನ ಹೆಸರನ್ನು ಬಂದಳೂರು ಅಂತಲೂ ಬದಲಿಸಬೇಕು ಎಂದೂ ಸಲಹೆ ನೀಡಿದ್ದರು. ಇದು ಟ್ವಿಟರ್‌ನಲ್ಲಿ ಆಕೆಯ ವಿರುದ್ಧ ಜನರು ಹರಿಹಾಯಲು ವೇದಿಕೆಯೊದಗಿಸಿತು.
ಅವರ ವಿರುದ್ಧವೂ ಪ್ರತಿಭಟನೆ ನಡೆಸುವುದಾಗಿ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅವರೂ ಘೋಷಿಸಿದ್ದರು. ಬಳಿಕ ಟ್ವೀಟ್ ಅಳಿಸಿಹಾಕಿರುವ ಕಿರಣ್ ಮಜುಂದಾರ್ ಶಾ, "ಮಾಧ್ಯಮಗಳ ತಿರುಚುವಿಕೆಗೆ ಕಿವಿಗೊಡಬೇಡಿ. ನಾನ್ಯಾವತ್ತೂ ಕರ್ನಾಟಕದ ರೈತರ ಪರವಾಗಿ ನಿಂತಿದ್ದೇನೆ. ಹೇಳಿಕೆಯನ್ನು ತಪ್ಪಾಗಿ ವ್ಯಾಖ್ಯಾನಿಸಲಾಗಿದೆ. ಅಹಿಂಸಾತ್ಮಕ ಪರಿಹಾರಕ್ಕಾಗಿ ನಾನು ಹೇಳಿಕೆ ನೀಡಿದ್ದೆ, ಆದರೆ ಜನ ಅದನ್ನು ತಿರುಚಿದ್ದಾರೆ" ಎಂದಿದ್ದಾರೆ.
ಅಲ್ಲದೆ, "ನೀರಿನ ಬಿಕ್ಕಟ್ಟು ಎದುರಿಸುತ್ತಿರುವ ಕರ್ನಾಟಕ ರೈತರ ಪರವಾಗಿ ನಾವು ಕೂಡ ಬಂದ್ ಆಚರಿಸುತ್ತಿದ್ದೇವೆ. ಎರಡೂ ರಾಜ್ಯಗಳು ಪರಸ್ಪರ ಸೌಹಾರ್ದತೆಯಿಂದ ಪರಿಹಾರ ಕಂಡುಕೊಳ್ಳುತ್ತಾರೆಂಬ ನಿರೀಕ್ಷೆಯಿದೆ" ಎಂದೂ ಟ್ವೀಟ್ ಮಾಡಿದ್ದಾರೆ.
ಕಳೆದ ಬಾರಿ ಬಂದ್ ಆಚರಿಸಿದಾಗಲೂ ಕಿರಣ್ ಅವರು ಪ್ರಧಾನಿಯನ್ನು ಟ್ಯಾಗ್ ಮಾಡಿ "ಬಂದ್‌ಗಳು ಜಿಡಿಪಿಯನ್ನೇ ನಾಶ ಮಾಡುತ್ತಿವೆ. ಬಂದ್‌ಗೆ ಸಂಬಂಧಿಸಿ ದೇಶದ ಜಿಡಿಪಿಗಾಗುತ್ತಿರುವ ನಷ್ಟವನ್ನು ಯಾರಾದರೂ ಲೆಕ್ಕಾಚಾರ ಹಾಕಬೇಕಿದೆ" ಎಂದು ಟ್ವೀಟ್ ಮಾಡಿದ್ದರು.
ಇನ್ನೊಂದೆಡೆ, "ಬೆಂಗಳೂರು ಬಂದ್‌ಗೆ ಧನ್ಯವಾದ. ಹಳೆಯ ಕಾಲದಂತೆಯೇ ಡ್ರೈವಿಂಗ್ ಮಾಡುವುದು ತುಂಬ ಸಂತೋಷದ ಸಂಗತಿ. ಒಂದು ಗಂಟೆಯ ಪ್ರಯಾಣಕ್ಕೆ ಬೇಕಾಗಿದ್ದು ಕೇವಲ 15 ನಿಮಿಷ" ಅಂತ ಹಿಂದೆ ಟ್ವೀಟ್ ಮಾಡಿದ್ದರು.
ಬೆಂಗಳೂರು: ಕರ್ನಾಟಕ ಬಂದ್ ವಿರೋಧಿಸಿ ಟ್ವೀಟ್ ಮಾಡಿದ ಆರೋಪಕ್ಕೀಡಾಗಿರುವ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್ ಷಾ ಅವರು ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರ ತೀವ್ರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ತದನಂತರ ಟ್ವೀಟ್ ಡಿಲೀಟ್ ಮಾಡಿರುವ ಅವರು, ತಾವು ಯಾವತ್ತೂ ಕನ್ನಡಿಗ ರೈತರ ಪರವಾಗಿದ್ದು, ಹೇಳಿಕೆಯನ್ನು ವೃಥಾ ತಿರುಚಲಾಗಿದೆ ಎಂದು ಹೇಳಿದ್ದಾರೆ.