ಬೆಲಿಂಡಾ ಬೆನ್ಸಿಕ್ ಜತೆಗೂಡಿ ಆಡಲಿರುವ ಸ್ವಿಜರ್ಲೆಂಡ್‌ನ ಟೆನಿಸ್ ದಿಗ್ಗಜ ಮೆಲ್ಬೋರ್ನ್: 17 ಗ್ರ್ಯಾನ್‌ಸ್ಪ್ಯಾಮ್‌ಗಳ ಸರದಾರ ಸ್ವಿಜರ್ಲೆಂಡ್‌ನ ರೋಜರ್ ಫೆಡರರ್, ಮುಂದಿನ ವರ್ಷ ನಡೆಯುವ ಹಾಪ್‌ಮನ್ ಕಪ್‌ನಲ್ಲಿ 15 ವರ್ಷಗಳ ನಂತರ ಕಣಕ್ಕಿಳಿಯಲು ನಿರ್ಧರಿಸಿದ್ದಾರೆ. ಹಾಪ್‌ಮನ್ ಕಪ್ 2017ರ ಜ.1ರಿಂದ 7ರ ವರೆಗೆ ಆಸ್ಪ್ರೇಲಿಯಾದ ಪರ್ತ್‌ನಲ್ಲಿ ನಡೆಯಲಿದೆ. ಒಂದೂವರೆ ದಶಕದ ನಂತರ ಪ್ರತಿಷ್ಠಿತ ಟೂರ್ನಿಯಲ್ಲಿ ಭಾಗವಹಿಸಲಿರುವ ವಿಚಾರವನ್ನು ವಿಶ್ವದ ನಂ.3 ಆಟಗಾರ ಫೆಡರರ್ ಗುರುವಾರ ತಿಳಿಸಿದ್ದಾರೆ. 34ರ ಹರೆಯದ ಸ್ವಿಸ್ ತಾರೆ 2002ರಲ್ಲಿ ಕೊನೆಯ ಬಾರಿ ಹಾಪ್‌ಮನ್ ಕಪ್‌ನಲ್ಲಿ ಆಡಿದ್ದರು. ''2017ರ ಋುತುವನ್ನು ಆರಂಭಿಸಲು ಹಾಗೂ ಜ.16ರಂದು ಆರಂಭವಾಗುವ ಆಸ್ಪ್ರೇಲಿಯನ್ ಓಪನ್‌ಗೆ ಸಿದ್ಧತೆ ನಡೆಸಲು ಹಾಪ್‌ಮನ್ ಕಪ್ ಪರಿಪೂರ್ಣ ಟೂರ್ನಿ. ಮತ್ತೆ ಟೂರ್ನಿಯಲ್ಲಿ ಆಡಲಿರುವುದು ಖುಷಿ ತಂದಿದ್ದು, ಹಾಪ್‌ಮನ್ ಕಪ್‌ನಲ್ಲಿ ಆಡುವುದನ್ನು ಎದುರು ನೋಡುತ್ತಿದ್ದೇನೆ,'' ಎಂದು ಫೆಡರರ್ ಹೇಳಿದ್ದಾರೆ. ಹಾಪ್‌ಮನ್ ಕಪ್ ಪಂದ್ಯಗಳು ಮಿಶ್ರ ಡಬಲ್ಸ್ ಮಾದರಿಯಲ್ಲಿ ನಡೆಯುತ್ತವೆ. ಆದರೆ ಇಲ್ಲಿ ಒಂದು ತಂಡದಲ್ಲಿ ಒಂದೇ ದೇಶದ ಸ್ಪರ್ಧಿಗಳು ಸ್ಪರ್ಧಿಸಬೇಕಾಗುತ್ತದೆ. 2001ರಲ್ಲಿ ಫೆಡರರ್ ತಮ್ಮ 19ರ ಹರೆಯದಲ್ಲಿಸ್ವಿಸ್‌ನ ದಂತಕತೆ ಮಾರ್ಟಿನಾ ಹಿಂಗಿಸ್ ಜತೆಗೂಡಿ ಪ್ರಶಸ್ತಿ ಗೆದ್ದಿದ್ದರು. ಮುಂದಿನ ಸಾಲಿನಲ್ಲಿ ಫೆಡರರ್ ಸ್ವಿಸ್‌ನ 19ರ ಹರೆಯದ ಆಟಗಾರ್ತಿ ವಿಶ್ವದ 16ನೇ ರಾರಯಂಕ್‌ನ ಬೆಲಿಂಡಾ ಬೆನ್ಸಿಕ್ ಜತೆಗೂಡಿ ಕಣಕ್ಕಿಳಿಯಲಿದ್ದಾರೆ. ''ಹಾಪ್‌ಮನ್ ಕಪ್‌ನಲ್ಲಿ ನಿಕ್ ಕಿರಿಯೋಸ್ ಮತ್ತು ಆ್ಯಂಡಿ ಮರ್ರೆ ಆಡುವುದನ್ನು ಟಿವಿಯಲ್ಲಿ ನೋಡಿದ್ದು, ಅಲ್ಲಿನ ವಾತಾವರಣ ಅದ್ಭುತವಾಗಿರುತ್ತದೆ. ಕ್ರೀಡಾಂಗಣ ಅತ್ಯಂತ ಸುಂದರವಾಗಿ ಕಾಣುತ್ತದೆ. ಇದೀಗ ಟೂರ್ನಿಯ ಭಾಗವಾಗಲು ಇದು ಸೂಕ್ತ ಸಂದರ್ಭ ಎಂದು ಭಾವಿಸಿದ್ದೇನೆ,'' ಎಂದು ಟೆನಿಸ್ ದಿಗ್ಗಜ ಫೆಡರರ್ ಹೇಳಿದ್ದಾರೆ.
↧
ಹಾಪ್‌ಮನ್: 15 ವರ್ಷ ಬಳಿಕ ಫೆಡರರ್ ಕಣಕ್ಕೆ
↧