Quantcast
Channel: VijayKarnataka
Viewing all articles
Browse latest Browse all 6795

ಟ್ರಕ್ ನಿರ್ವಾಹಕರಿಗೆ ಓಲಾ ಮಾದರಿಯಲ್ಲಿ ಬ್ಲ್ಯಾಕ್‌ಬಕ್

$
0
0

ಟ್ರಕ್‌ ಅಥವಾ ಲಾರಿ ನಿರ್ವಾಹಕರಿಗೆ ಆ್ಯಪ್‌ ಆಧಾರಿತ ಸೇವೆ ಒದಗಿಸುವ ಬೆಂಗಳೂರು ಮೂಲದ ಬ್ಲ್ಯಾಕ್‌ಬಕ್‌ ಆರಂಭವಾದ ಒಂದೇ ವರ್ಷದಲ್ಲಿ ಫ್ಲಿಪ್‌ಕಾರ್ಟ್‌ ಸೇರಿದಂತೆ ದಿಗ್ಗಜ ಕಂಪನಿಗಳಿಂದ ನೂರಾರು ಕೋಟಿ ರೂ. ಬಂಡವಾಳ ಹೂಡಿಕೆಯನ್ನು ಆಕರ್ಷಿಸುವಲ್ಲಿ ಸಫಲವಾಗಿದೆ.

-----

* ಕೇಶವ ಪ್ರಸಾದ್‌ ಬಿ ಕಿದೂರು ಬೆಂಗಳೂರು

ಓಲಾ, ಉಬರ್‌ ಮುಂತಾದ ಆ್ಯಪ್‌ ಆಧಾರಿತ ಟ್ಯಾಕ್ಸಿ ಕ್ಯಾಬ್‌ಗಳ ಸೇವೆಯನ್ನು ನೀವು ಪಡೆದಿರಬಹುದು. ಇದೀಗ ಲಾಜಿಸ್ಟಿಕ್ಸ್‌ ವಲಯದಲ್ಲಿ ಕೂಡ ಟ್ರಕ್‌ ಆಪರೇಟರ್‌ಗಳಿಗೆ ಇಂತಹುದೇ ಆ್ಯಪ್‌ ಆಧಾರಿತ ಸ್ಟಾರ್ಟಪ್‌ ಅಸ್ತಿತ್ವಕ್ಕೆ ಬಂದಿದೆ.

ಓಲಾದಂತೆಯೇ ಬೆಂಗಳೂರು ಮೂಲದ ಈ ಬ್ಲ್ಯಾಕ್‌ಬಕ್‌ ಎಂಬ ಹೊಸ ಸ್ಟಾರ್ಟಪ್‌ ಯಶಸ್ಸಿನತ್ತ ಸಾಗುತ್ತಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಆರಂಭವಾದ ಬ್ಲ್ಯಾಕ್‌ಬಕ್‌, ಡಿಸೆಂಬರ್‌ನಲ್ಲಿ 10,000 ಟ್ರಕ್‌ಗಳ ಜಾಲವನ್ನು ಹೊಂದಿತ್ತು. ಈಗ ಅದರ ಸಂಖ್ಯೆ 50,000ಕ್ಕೆ ಏರಿದೆ.

ಟ್ರಕ್‌ಗಳನ್ನು ಖರೀದಿಸಿದ ನಂತರ ಎಷ್ಟೋ ಮಂದಿಗೆ ಹೊಸ ಆರ್ಡರ್‌ಗಳನ್ನು ಗಳಿಸುವುದು ಹೇಗೆ ಎಂಬ ಚಿಂತೆ ಕಾಡುವುದು ಸಹಜ. ಈ ನಿಟ್ಟಿನಲ್ಲಿ ಬ್ಲ್ಯಾಕ್‌ಬಕ್‌ ಆ್ಯಪ್‌ ಅನ್ನು ಟ್ರಕ್‌ ಮಾಲೀಕ ಅಥವಾ ಚಾಲಕರು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಹಾಗೂ ಕಾರ್ಪೊರೇಟ್‌ ವಲಯದ ಕಂಪನಿಗಳು, ಮಧ್ಯಮ ಮತ್ತು ಸಣ್ಣ ಉದ್ದಿಮೆಗಳಿಂದ ಸರಕು ಸಾಗಣೆಯ ಆರ್ಡರ್‌ಗಳನ್ನು ಪಡೆಯಬಹುದು. ಇಂಥ ಮಾದರಿಯನ್ನು ಬಿ2ಬಿ (ಬಿಸಿನೆಸ್‌ ಟು ಬಿಸಿನೆಸ್‌) ಎನ್ನಲಾಗುತ್ತದೆ. ಕೇವಲ 1 ಟ್ರಕ್‌ (ಲಾರಿ) ಹೊಂದಿರುವ ಮಾಲೀಕರಿಂದ ಆರಂಭಿಸಿ 300-400 ಟ್ರಕ್‌ಗಳನ್ನು ನಡೆಸುತ್ತಿರುವವರೂ ಈ ಸ್ಟಾರ್ಟಪ್‌ ಸೇವೆ ಗಳಿಸಬಹುದು.

ಐಐಟಿ ಖರಗಪುರ್‌ನಲ್ಲಿ ಪದವಿ ಪಡೆದಿರುವ ರಾಜೇಶ್‌ ನಂತರ ಐಟಿಸಿಯಲ್ಲಿ ಸೇವೆಯಲ್ಲಿದ್ದರು. ಎರಡು ವರ್ಷಗಳ ಬಳಿಕ ಹೊಸ ಉದ್ದಿಮೆ ಸ್ಥಾಪಿಸುವ ಆಶಯದೊಂದಿಗೆ ಕೆಲಸಕ್ಕೆ ರಾಜೀನಾಮೆ ಕೊಟ್ಟರು. ಐಟಿಸಿಯಲ್ಲಿದ್ದಾಗಲೇ ಲಾಜಿಸ್ಟಿಕ್ಸ್‌ ವಲಯದಲ್ಲಿ ತಂತ್ರಜ್ಞಾನ ಬಳಕೆಯ ಸಾಧ್ಯತೆಗಳ ಬಗ್ಗೆ ಆಲೋಚಿಸಿದ್ದರು. ಬಳಿಕ ಲಾಜಿಸ್ಟಿಕ್ಸ್‌ನಲ್ಲಿ 17 ವರ್ಷ ಅನುಭವ ಇದ್ದ ರಾಮ ಸುಬ್ರಮಣಿಯಂ ಅವರ ಜತೆ ಸ್ಟಾರ್ಟಪ್‌ ಅಭಿವೃದ್ಧಿಗೆ ತೊಡಗಿಸಿಕೊಂಡರು. ಮೂರನೇ ಸಹ ಸಂಸ್ಥಾಪಕರಾಗಿ ಚಾಣಕ್ಯ ಸೇರಿಕೊಂಡರು. ಈ ಮೂವರೂ ಸೇರಿಕೊಂಡು ಬಿ2ಬಿ ಮಾದರಿಯಲ್ಲಿ ಬ್ಲ್ಯಾಕ್‌ಬಕ್‌ ಸ್ಥಾಪನೆಗೆ ನಿರ್ಧರಿಸಿದರು. 2015ರ ಜುಲೈನಲ್ಲಿ ಕಾರಾರ‍ಯರಂಭಿಸಿದ ಬ್ಲ್ಯಾಕ್‌ಬಕ್‌ನಿಂದ ಟ್ರಕ್‌ ಅಥವಾ ಲಾರಿ ಮಾಲೀಕರು, ಚಾಲಕರು ಹಲವು ಬಗೆಯ ಅನುಕೂಲ ಪಡೆಯಬಹುದು. ತಮ್ಮ ಟ್ರಕ್‌ಗಳಿಗೆ ಹೊಸ ಆರ್ಡರ್‌ಗಳನ್ನು ಈ ಆ್ಯಪ್‌ ಮೂಲಕ ಪಡೆಯಬಹುದು. ಟ್ರಕ್‌ಗಳು ಕೆಲಸವಿಲ್ಲದೆ ನಿಲ್ಲುವುದು ತಪ್ಪುತ್ತದೆ. ಮತ್ತೊಂದು ಕಡೆ ಗ್ರಾಹಕರಿಗೆ ಸ್ಪರ್ಧಾತ್ಮಕ ದರದಲ್ಲಿ ಟ್ರಕ್‌ಗಳನ್ನು ಬುಕ್‌ ಮಾಡಬಹುದು. ಹಲವು ಆಯ್ಕೆಗಳೂ ಅವರಿಗೆ ಸಿಗುತ್ತದೆ. ಪೆಪ್ಸಿಕೊ ಕಂಪನಿಯಿಂದ ಬ್ಲ್ಯಾಕ್‌ ಬಕ್‌ ಮೊದಲ ಆರ್ಡರ್‌ ಅನ್ನು ಪಡೆದಿತ್ತು.

ಈಗ ಬ್ಲ್ಯಾಕ್‌ಬಕ್‌ ಸೇವೆಯನ್ನು ಹಿಂದುಸ್ತಾನ್‌ ಯುನಿಲಿವರ್‌, ಜ್ಯೋತಿ ಲ್ಯಾಬೊರೇಟರೀಸ್‌, ಹಿಂದುಸ್ತಾನ್‌ ಕೋಕಾಕೋಲಾ ಬೆವರೀಜಸ್‌, ಅಮುಲ್‌, ಏಷ್ಯನ್‌ ಪೇಂಟ್ಸ್‌, ಐಟಿಸಿ, ಮ್ಯಾರಿಕೊ ಆ್ಯಂಡ್‌ ಬ್ರಿಟಾನಿಯಾ ಮುಂತಾದ ಕಾರ್ಪೊರೇಟ್‌ ವಲಯದ ದಿಗ್ಗಜ ಕಂಪನಿಗಳೂ ಪಡೆಯುತ್ತಿವೆ.

ಫ್ಲಿಪ್‌ಕಾರ್ಟ್‌ ಹೂಡಿಕೆ:

ಬ್ಲ್ಯಾಕ್‌ಬಕ್‌ ಈಗಾಗಲೇ 167 ಕೋಟಿ ರೂ.ಗೂ ಹೆಚ್ಚು ಬಂಡವಾಳವನ್ನು ಹೂಡಿಕೆದಾರರಿಂದ ಗಳಿಸಿದೆ. ಫ್ಲಿಪ್‌ಕಾರ್ಟ್‌, ಟೈಗರ್‌ ಗ್ಲೋಬಲ್‌, ಡಿಎಸ್‌ಟಿ ಗ್ಲೋಬಲ್‌ ಮುಂತಾದ ಕಂಪನಿಗಳು ಹೂಡಿವೆ. ದೇಶದ 220 ನಗರ, ಪಟ್ಟಣಗಳಲ್ಲಿ ತನ್ನ ವಹಿವಾಟನ್ನು ವಿಸ್ತರಿಸಿದೆ. ಟ್ರಕ್‌ ಅಥವಾ ಲಾರಿ ಮಾಲೀಕರು ಬ್ಲ್ಯಾಕ್‌ಬಕ್‌ ಆ್ಯಪ್‌ ಅನ್ನು ಡೌನ್‌ಲೋಡ್‌ ಮಾಡಿಕೊಂಡು ಲಾಗಿನ್‌ ಆಗಿ ನೋಂದಣಿ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಆರ್ಡರ್‌ಗಳ ಜತೆಗೆ ಇಂಡಿಯನ್‌ ಆಯಿಲ್‌ (ಐಒಸಿ) ಪೆಟ್ರೋಲ್‌ ಬಂಕ್‌ಗಳಲ್ಲಿ ರಿಯಾಯಿತಿ ದರದಲ್ಲಿ ಡೀಸೆಲ್‌ ಕೂಡ ಪಡೆಯಬಹುದು ಎನ್ನುತ್ತಾರೆ ಕಂಪನಿಯ ಮುಖ್ಯಸ್ಥ ರಾಜೇಶ್‌.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>