ಹೊಸದಿಲ್ಲಿ: ಇ- ಕಾಮರ್ಸ್‌ಗೆ ಸಂಬಂಧಿಸಿ ದೊಡ್ಡ ಪ್ರಮಾಣದಲ್ಲಿ ಬಂದ ದೂರುಗಳನ್ನು ಇತ್ಯರ್ಥಗೊಳಿಸಲು ವಿಳಂಬ ಮಾಡಿದ ಅಧಿಕಾರಿಗಳನ್ನು ಪ್ರಧಾನಿ ನರೇಂದ್ರ ಮೋದಿ ತರಾಟೆಗೆ ತೆಗೆದುಕೊಂಡಿದ್ದಾರೆ. 10 ದಿನಗಳೊಳಗಾಗಿ ಬಂದ ದೂರುಗಳನ್ನು ಇತ್ಯರ್ಥಗೊಳಿಸಿ, ಕ್ರಮ ಕೈಗೊಂಡ ಬಗ್ಗೆ ಫಾಲೋ ಅಪ್ ವರದಿ ನೀಡುವಂತೆ ಅಧಿಕಾರಿಗಳಿಗೆ ಪ್ರಧಾನಿ ಡೆಡ್‌ಲೈನ್ ವಿಧಿಸಿದ್ದಾರೆ. ಗ್ರಾಹಕರ ದೂರು ನಿವಾರಣೆಗಳ ಆಡಳಿತ ಮತ್ತು ಸಕಾಲಿಕ ಅನುಷ್ಠಾನದ ಪ್ರಗತಿ ಬಗ್ಗೆ ಕೇಂದ್ರ ಮತ್ತು ರಾಜ್ಯಸರಕಾರದ ಅಧಿಕಾರಿಗಳ ಜತೆ ಪ್ರಧಾನಿ ಸಂವಾದ ನಡೆಸಿದರು. ಟಿಕೆಟ್ ಬುಕ್ಕಿಂಗ್, ಹೋಟೆಲ್ ರಿಜರ್ವೆಷನ್‌ಗೆ ಸಂಬಂಧಿಸಿದಂತೆ ಹೆಚ್ಚು ದೂರುಗಳು ದಾಖಲಾಗಿವೆ. ಹೀಗಾಗಿ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕಾದ ಅಗತ್ಯದ ಬಗ್ಗೆ ಅಧಿಕಾರಿಗಳು ಕಾಳಜಿ ವಹಿಸಿ ಸಮಸ್ಯೆ ಇತ್ಯರ್ಥ ಮಾಡಬೇಕು ಎಂದು ಪ್ರಧಾನಿ ಹೇಳಿದರು ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
↧
ದೂರು ನಿವಾರಣೆಗೆ 10 ದಿನಗಳ ಡೆಡ್‌ಲೈನ್
↧