ಗ್ಲಾಮರಸ್ ಪಾತ್ರಗಳನ್ನು ದೂರ ಇಟ್ಟು ಅಭಿನಯಕ್ಕೆ ಸ್ಕೋಪ್ ಇರುವ ಪಾತ್ರಗಳತ್ತ ರಾಗಿಣಿಯ ಒಲವು ಹೆಚ್ಚಾಗಿದೆ. ಇತ್ತೀಚೆಗೆ ಹೊಸ ಚಿತ್ರದ ಫಸ್ಟ್ ಲುಕ್‌ನಲ್ಲಿ ಎಲ್ಲರ ಹೆಬ್ಬೇರಿಸಿದ್ದರು. ಗ್ಲಾಮರಸ್‌ಗೆ ಹೆಸರಾದ ನಟಿ ಡಿಗ್ಲಾಮರ್ ಪಾತ್ರಕ್ಕೂ ಸೈ ಎಂಬುದನ್ನು ತೋರಿಸಿದ್ದರು. ಈಗ ಅವರು ಮತ್ತೊಂದು ಹೆಜ್ಜೆ ಮುಂದೆ ಹೋಗಿ ಇದೇ ಚಿತ್ರಕ್ಕಾಗಿ ಸಂಕೇತ ಭಾಷೆ ಕಲಿತಿದ್ದಾರೆ. 'ಚಿತ್ರದಲ್ಲಿ ನನ್ನ ಜತೆ ಆತ್ಮೀಯವಾಗಿರುವ ಪಾತ್ರಗಳಿಗೆ ಶ್ರವಣ ಹಾಗೂ ವಾಕ್ ಸಮಸ್ಯೆ ಇರುತ್ತದೆ. ಆವರ ಜತೆಗೆ ನಾನು ಸಂಜ್ಞೆಗಳ ಮೂಲಕವೇ ಮಾತನಾಡಬೇಕು. ಹಾಗಾಗಿ ಈ ಸೈನ್ ಲಾಂಗ್ವೇಜ್ ಕಲಿಯುವುದು ಅಗತ್ಯವಾಗಿತ್ತು. ಚಿತ್ರದ ನೈಜವಾಗಿ ಮೂಡಿ ಬರಬೇಕೆಂದು ನಾವು ಶ್ರಮಪಟ್ಟು ಕೆಲಸ ಮಾಡುತ್ತಿದ್ದೇವೆ' ಎನ್ನುತ್ತಾರೆ ರಾಗಿಣಿ. ಚಿಕ್ಕಮಗಳೂರಿನ ಕಾಫಿ ಎಸ್ಟೇಟಿನ ಕೆಲಸದಾಳಾಗಿ ರಾಗಿಣಿ ನಟಿಸುತ್ತಿದ್ದಾರೆ. ಎಸ್ಟೇಟಿನ ಮಹಿಳಾ ಕೂಲಿಗಾರರ ಬದುಕನ್ನು ಚಿತ್ರ ಅನಾವರಣ ಮಾಡಲಿದೆಯಂತೆ. 'ನನಗೆ ಹಳ್ಳಿ ಹೆಂಗಸರ ಬಗ್ಗೆ ಜಾಸ್ತಿ ಗೊತ್ತಿರಲಿಲ್ಲ. ಆದರೆ ಇಲ್ಲಿಗೆ ಬಂದ ಮೇಲೆ ಅವರು ಎಷ್ಟು ಮುಗ್ಧರು ಎಂದು ಗೊತ್ತಾಯಿತು. ಅಲ್ಲದೆ ದಿನಕ್ಕೆ 14 ಗಂಟೆಗೂ ಹೆಚ್ಚು ಕಾಲ ದುಡಿಯುತ್ತಾರೆ. ಇಲ್ಲಿನ ಪರಿಸರ, ಸಂಸ್ಕೃತಿಗೆ ನಾನು ಮಾರು ಹೋಗಿದ್ದೇನೆ' ಎನ್ನುತ್ತಾರೆ ರಾಗಿಣಿ. ಸುರಿಯುತ್ತಿರುವ ಮಳೆಯಿಂದ ಚಿತ್ರೀಕರಣಕ್ಕೆ ಅಡ್ಡಿ ಉಂಟಾಗಿದೆ. ಮಳೆ ನಿಂತ ಕೂಡಲೆ ಮತ್ತೆ ಕೆಲಸ ಆರಂಭಿಸಲು ತಂಡ ಕಾಯುತ್ತಿದೆ.
↧
ಸಂಕೇತ ಭಾಷೆ ಕಲಿತ ರಾಗಿಣಿ
↧