Quantcast
Channel: VijayKarnataka
Viewing all articles
Browse latest Browse all 6795

ಹಬ್ಬದಲ್ಲಿ ಹುಡುಗರ ಸಂಭ್ರಮ

$
0
0

* ಪದ್ಮಿನಿ ಜೈನ್‌ ಎಸ್‌.

ಹಬ್ಬ ಅಂದರೆ ಅದು ಹುಡುಗಿಯರ ವಿಷಯ, 'ಇಟ್ಸ್‌ ನಾಟ್‌ ಅವರ್‌ ಕಫ್‌ ಆಫ್‌ ಟಿ' ಎಂದು ಭಾವಿಸುವ ಹುಡುಗರೇ ಹೆಚ್ಚು. ಪೂಜೆ ಪುನಸ್ಕಾರ, ಟ್ರಡಿಷನಲ್‌ ವೇರ್‌, ಹಬ್ಬದ ಅಡುಗೆ ಯಾವುದಕ್ಕೂ ಹುಡುಗರು ತಲೆ ಹಾಕುವವರಲ್ಲ. ಮನೆ ಮಂದಿಯೆಲ್ಲ ಜತೆಯಾಗಿ ಹಬ್ಬ ಆಚರಿಸುವಾಗ ತಾವು ಗೆಳೆಯರ ಜತೆಗೆ ಊರು ಸುತ್ತಲು ಹೋಗುತ್ತಾರೆ. ಆದರೆ ಈ ಬಾರಿಯ ಯುಗಾದಿ ಹಾಗಾಗುವುದು ಬೇಡ. ಹಬ್ಬದಲ್ಲಿ ನೀವೂ ಇನ್ವಾಲ್‌ ಆಗಿ ಮನೆ ಮಂದಿಗೆಲ್ಲ ಸಪ್ರೈಸ್‌ ಕೊಡಲು ಇಲ್ಲಿದೆ ಕೆಲವು ಟಿಫ್ಸ್‌.

ಗೆಟ್‌ ಟುಗೆದರ್‌: ಈ ಬಾರಿ ಯುಗಾದಿ ಹಬ್ಬ ವೀಕೆಂಡಲ್ಲಿ ಬಂದಿರುವುದರಿಂದ ನಿಮ್ಮ ಫ್ರೆಂಡ್ಸ್‌ ಗ್ಯಾಂಗನ್ನು ಮನೆಗೆ ಆಹ್ವಾನಿಸಬಹುದು. ಗೆಳೆಯರ ಜತೆ ಹಬ್ಬ ಆಚರಿಸುವ ಮಜವೇ ಬೇರೆ. ಮನೆಯ ತುಂಬ ಮಕ್ಕಳು ಓಡಾಡುವುದನ್ನು ಕಂಡು ಪೇರೆಂಟ್ಸ್‌ ಖುಷಿಯೂ ಡಬಲ್‌ ಆಗುತ್ತದೆ.

ಎಥ್ನಿಕ್‌ ವೇರ್‌ ಆರಿಸಿ: ಸಾಂಪ್ರದಾಯಿಕ ಉಡುಗೆಗಳು ಇದ್ದರಷ್ಟೇ ಹಬ್ಬದ ವಾತಾವರಣ ಸೃಷ್ಟಿಯಾಗುವುದು. ಬಿಳಿ ಪಂಚೆ, ತುಂಬು ತೋಳಿನ ಶರ್ಟ್‌ಗಳು, ಹೆಗಲ ಮೇಲೊಂದು ಶಲ್ಯ ನಿಮ್ಮನ್ನು ಎಂದಿಗಿಂತ ಸ್ಪೆಷಲ್‌ ಆಗಿ ತೋರಿಸುತ್ತವೆ. ಅದಿಲ್ಲವಾದರೆ ಶೇರ್ವಾನಿನಿಯೂ ಓಕೆ.

ಟೆಂಪಲ್‌ ವಿಸಿಟ್‌: ದೇವರ ಮೇಲೆ ನಂಬಿಕೆ ಇರುವ ಹುಡುಗರು ಇದನ್ನು ಮಾಡಬಹುದು. ಒಂದೋ ಮನೆಯವರ ಜತೆಗೆ, ಇಲ್ಲ ಗೆಳೆಯರ ಜತೆಗೆ ಹೋಗಬಹುದು. ಏನಿಲ್ಲವಾದರೂ ನಿಮ್ಮ ದಿನಚರಿಯ ಈ ಸಣ್ಣ ಚೇಂಜ್‌ ಹೊಸ ಹುರುಪು ತುಂಬುತ್ತದೆ.

ಕಿಚನ್‌ಗೂ ಎಂಟ್ರಿ ಕೊಡಿ: ಹಬ್ಬದ ದಿನ ಅಮ್ಮ ಅಡುಗೆ ಮನೆಯಲ್ಲಿ ಒದ್ದಾಡುವಾಗ ಅಲ್ಲಿಗೊಮ್ಮೆ ವಿಸಿಟ್‌ ಕೊಡಿ. 'ನಾನೇನಾದ್ರೂ ಹೆಲ್ಪ್‌ ಮಾಡ್ಲಾ' ಎಂದು ಕೇಳಿ ನೋಡಿ. ಅಷ್ಟೇ ಸಾಕು, ಅವರ ಮುಖ ಅರಳುತ್ತದೆ.

ದಿನಸಿನೂ ತರಬಹುದು: ಹೇಗೋ ಹೊರಗಡೆ ಓಡಾಡಿಕೊಂಡಿ ಇರುತ್ತೀರಿ. ದಿನಸಿ ತರಲು, ಹಬ್ಬದ ಸಾಮಾನು ಸಾಗಿಸಲು ಅಪ್ಪನಿಗೆ ನೆರವಾದರೆ ತಪ್ಪೇನು!

ಡಿಸೈನ್‌ ಮಾಡಿ: ಮನೆಯ ಇಂಟೀರಿಯರ್‌ ಡಿಸೈನ್‌ ಮೂಲಕ ಹಬ್ಬಕ್ಕೆ ಸ್ಪೆಷಲ್‌ ಟಚ್‌ ನೀಡಬಹುದು. ನೀವೆಷ್ಟು ಕ್ರಿಯೇಟಿವ್‌ ಎಂದು ಮನೆ ಮಂದಿಗೆಲ್ಲ ತೋರಿಸಲು ಈ ಯುಗಾದಿ ಬೆಸ್ಟ್‌ ಟೈಮ್‌. ತೋರಣ, ದೀಪ, ಬಣ್ಣದ ಬಲ್ಬ್ಗಳಿಂದ ಮನೆಯ ಅಂದ ಹೆಚ್ಚಿಸಿ.

ಸ್ಪೆಷಲ್‌ ಟಿಫ್ಸ್‌

*ಹಬ್ಬದ ದಿನ ಆದಷ್ಟು ಮನೆಯಲ್ಲಿ ಟೈಮ್‌ ಸ್ಪೆಂಡ್‌ ಮಾಡಿ.

*ಎಥ್ನಿಕ್‌ ವೇರ್‌ನ ಫೀಲ್‌ ಅನುಭವಿಸಿ.

*ಅತಿಥಿ ಸತ್ಕಾರದ ಜವಾಬ್ದಾರಿ ಹೊತ್ತುಕೊಳ್ಳಬಹುದು.

*ಹಬ್ಬದ ಕೆಲ ಸ್ಪೆಷಲ್‌ ಮೂಮೆಂಟ್‌ನ ಕ್ಯಾಂಡಿಡ್‌ ಪೋಟೋಗ್ರಾಫಿ ಮಾಡಬಹುದು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ


BIG NEWS : ಶಾಲೆಗಳ ಪ್ರಥಮ ಮಾನ್ಯತೆ, ಮಾನ್ಯತೆ ನವೀಕರಣದ ಕುರಿತು ‘ಶಿಕ್ಷಣ ಇಲಾಖೆ’ಯಿಂದ...


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>