ಸಂಪತ್ತು, ಉತ್ತಮ ಆರೋಗ್ಯ ಮತ್ತು ಮನಶಾಂತಿಗೆ ವಾಸ್ತುವಿನಲ್ಲಿ ಹಲವಾರು ಸೂತ್ರಗಳಿವೆ. ಇವುಗಳು ಲೇಔಟ್, ವಸತಿ ಪ್ರಾಪರ್ಟಿ ಮತ್ತು ವಾಣಿಜ್ಯ ಪ್ರಾಪರ್ಟಿಗಳಿಗೂ ಅನ್ವಯವಾಗುತ್ತವೆ. ಇವುಗಳನ್ನು ಅನುಸರಿಸಿದರೆ ಆಗ ಸುಖ ಜೀವನ, ವ್ಯವಹಾರ ನಿಮ್ಮದಾಗುತ್ತದೆ. ನಿರ್ಮಾಣ ಹಂತದಲ್ಲೇ ಅಳವಡಿಸಿಕೊಳ್ಳಬೇಕಾದ ವಾಸ್ತು ನಿಯಮಗಳು ಇಂತಿವೆ. - ಕ್ಯಾಶ್ ಲಾಕರ್ ದಕ್ಷಿಣ ಅಥವಾ ಅಗ್ನೇಯದ ಗೋಢೆಯಲ್ಲಿರಲಿ. ಅದರ ಬಾಗಿಲನ್ನು ಉತ್ತರ ದಿಕ್ಕಿಗೆ ತೆರೆಯುವಂತಿರಬೇಕು. - ಈ ಮೇಲೆ ಹೇಳಿದ ದಿಕ್ಕನ್ನು ಬಿಟ್ಟು ಬೇರೆಲ್ಲೂ ಕ್ಯಾಶ್ ಲಾಕರ್ ಇಡುವುದು ಸೂಕ್ತವಲ್ಲ. - ಬೀಮ್ ಕೆಳಗಡೆ ಲಾಕರ್ ಇರಬಾರದು. ಹಾಗಿದ್ದರೆ ಹಣಕಾಸು ತೊಂದರೆ ಎದುರಾಗುತ್ತದೆ. - ಲಾಕರ್ ಎದುರು ಕನ್ನಡಿ ಇಟ್ಟರೆ ಅದರ ಪ್ರತಿಬಿಂಬದಂತೆ ಸಂಪತ್ತು ದುಪ್ಪಟ್ಟಾಗುತ್ತದೆ ಎಂದು ಹೇಳಲಾಗುತ್ತದೆ. - ಮನೆ ಅಥವಾ ಕಚೇರಿಯ ಈಶಾನ್ಯ ಭಾಗವನ್ನು ಯಾವಾಗಲೂ ತೆರೆದು ಮತ್ತು ಸಂತೆಯಿಲ್ಲದಂತೆ ಇಡಿ. - ಈ ದಿಕ್ಕಿನಲ್ಲಿ ಸ್ಟೇರ್‌ಕೇಸ್ ಇರುವುದು ಬೇಡ. ಹಾಗಿದ್ದರೆ ಅದು ಸಂಪತ್ತು ಸಂಗ್ರಹಕ್ಕೆ ಅಡ್ಡಿಯುಂಟು ಮಾಡುತ್ತದೆ. - ನಲ್ಲಿಯಲ್ಲಿ ನೀರು ಸೋರಬಾರದು. ಅದು ಹಣ ವ್ಯರ್ಥವಾಗಲು ದಾರಿ ಮಾಡಿಕೊಡುತ್ತದೆ. - ನೈರುತ್ಯ ಭಾಗದಲ್ಲಿರುವ ಈಜುಕೊಳ ಅಥವಾ ಸಂಪು ಯಾವ ಕಾರಣಕ್ಕೂ ನೆಲದಿಂದ ತಗ್ಗಿನಲ್ಲಿರುವುದು ಬೇಡ. - ಇದು ಮನೆ, ಕಚೇರಿ ಅಥವಾ ಇತರ ಕಟ್ಟಡಕ್ಕೂ ಅನ್ವಯವಾಗುತ್ತದೆ. - ಆವರಣ ಗೋಡೆಯ ಈಶಾನ್ಯ ಮೂಲೆ ಯಾವ ಕಾರಣಕ್ಕೂ ತಿರುವಾಗಿರಬಾರದು. - ಈಶಾನ್ಯ ಭಾಗದ ಮೇಲ್ಛಾವಣಿ ಆಗ್ನೇಯ ಮತ್ತು ನೈರುತ್ಯ ಭಾಗಕ್ಕೆ ಹೋಲಿಸಿದರೆ ಸ್ವಲ್ಪ ಇಳಿಜಾರು ಆಗಿರಬೇಕು.
↧
ಮನಃಶಾಂತಿಗೆ ವಾಸ್ತು ನಿಯಮ
↧