ವಾಸ್ತು ಶಾಸ್ತ್ರದ ಪ್ರಕಾರ ಮನೆಗೆ ಅನ್ವಯವಾಗುವ ವಾಸ್ತು ನಿಯಮ ಮನೆ ಮಂದಿಯ ಆರೋಗ್ಯದ ಮೇಲೆ ತನ್ನದೇ ಆದ ಪರಿಣಾಮ ಬೀರುತ್ತದೆ. ಹೀಗಾಗಿ ಆರೋಗ್ಯ ಕಾಪಾಡಿಕೊಳ್ಳಲು ಕೆಲವೊಂದು ವಾಸ್ತು ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಈ ಮೂಲಕ ರೋಗಗಳನ್ನು ತಡೆದು ಆರೋಗ್ಯಕರ ಜೀವನ ನಡೆಸಬಹುದು. ಅದಕ್ಕಾಗಿ ಇಲ್ಲಿದೆ ಒಂದಿಷ್ಟು ಸಲಹೆ. - ಯಾವಾಗಲೂ ರಾತ್ರಿ ನಿದ್ರಿಸುವಾಗ ದಕ್ಷಿಣ ದಿಕ್ಕಿನ ಕಡೆಗೇ ತಲೆ ಹಾಕಿ ಮಲಗಿ. - ಸ್ಟೇರ್ ಕೇಸ್ ಮನೆಯ ಮಧ್ಯ ಭಾಗದಲ್ಲಿರದೆ ಯಾವಾಗಲೂ ಮೂಲೆಯಲ್ಲಿರಲಿ. -ಬ್ರಹ್ಮಸ್ಥಾನ ಎಂದು ಪರಿಗಣಿಸಲ್ಪಟ್ಟಿರುವ ಮನೆಯ ಕೇಂದ್ರ ಭಾಗದಲ್ಲಿ ಭಾರವಾದ ಪೀಠೋಪಕರಣ ಹಾಕಬೇಡಿ. - ರೇಖಿ ಶಕ್ತಿ ತುಂಬಿರುವ ಹರಳನ್ನು ಬ್ರಹ್ಮ ಸ್ಥಾನದಲ್ಲಿಡುವುದರಿಂದ ಮನೆಗೆ ಎನರ್ಜಿ ತುಂಬಬಹುದು. - ಅಗ್ನಿ ಧಾತುವಿನ ಅಸಮತೋಲನವೇ ಸದಸ್ಯರ ಆರೋಗ್ಯವನ್ನು ಏರುಪೇರು ಮಾಡುವ ಪ್ರಮುಖ ಮೂಲ. - ಮನೆಯು ದಕ್ಷಿಣಕ್ಕೆ ಮುಖ ಮಾಡಿದ್ದರೆ ದಕ್ಷಿಣದ ಗೋಡೆ ಮತ್ತು ಗೇಟು ಯಾವಾಗಲೂ ಮುಚ್ಚಿರಲಿ. - ಆಗ್ನೇಯ ಭಾಗದಲ್ಲಿ ದಿನ ನಿತ್ಯ ದೀಪ ಹಚ್ಚುವುದರಿಂದ ಉತ್ತಮ ಆರೋಗ್ಯ ಲಭ್ಯವಾಗುತ್ತದೆ. - ಮನೆಯಲ್ಲಿ ಆಂಜನೇಯನ ವಿಗ್ರಹವನ್ನು ದಕ್ಷಿಣದಲ್ಲಿಡಬೇಕು. ಇದರಿಂದ ಆರೋಗ್ಯ ವೃದ್ಧಿಯಾಗುತ್ತದೆ.
↧
ಉತ್ತಮ ಆರೋಗ್ಯಕ್ಕೆ ವಾಸ್ತು
↧