ಮ್ಯಾಂಚೆಸ್ಟರ್ (ಯುಕೆ): ಐವೊರಿ ಕೋಸ್ಟ್‌ನ ಉದಯೋನ್ಮುಖ ಸೆಂಟರ್ ಬ್ಯಾಕ್ ಆಟಗಾರ ಎರಿಕ್ ಬೈಲಿ, ಅವರನ್ನು ಇಂಗ್ಲಿಷ್ ಪ್ರೀಮಿಯರ್ ಲೀಗ್‌ನ ದೈತ್ಯ ತಂಡ ಮ್ಯಾಂಚೆಸ್ಟರ್ ಯುನೈಟೆಡ್ 290 ಕೋಟಿ ರೂ.ಗಳ ಭಾರಿ ಮೊತ್ತ ನೀಡಿ ಖರೀದಿ ಮಾಡಿದೆ. ಸ್ಪೇನ್‌ನ ವಿಲ್ಲಾರಿಯಲ್ ಕ್ಲಬ್ ಪರ ಆಡಿದ ಅನುಭವ ಹೊಂದಿರುವ 22 ವರ್ಷದ ಯುವ ಆಟಗಾರ, 2015ರ ಸಾಲಿನ ಆಫ್ರಿಕಾ ಕಪ್ ಗೆದ್ದ ಅನುಭವ ಹೊಂದಿದ್ದಾರೆ. ಆದ್ದರಿಂದಲೇ ಮ್ಯಾಂಚೆಸ್ಟರ್ ಯುನೈಟೆಡ್ ತಂಡ ಸಾಲಿನ ಮೊದಲ ಖರೀದಿಯಲ್ಲಿ 4 ವರ್ಷಗಳ ಅವಧಿಗೆ ಭಾರಿ ಮೊತ್ತ ನೀಡಿ ಬೈಲಿ ಅವರನ್ನು ಖರೀದಿಸಿದೆ. 17ನೇ ವಯಸ್ಸಿಗೆ ಸ್ಪೇನ್‌ಗೆ ತೆರಳಿದ ಬೈಲಿ ಆರಂಭದಲ್ಲಿ ಎಸ್ಪಾನಿಯಲ್ ಎಫ್‌ಸಿ ತಂಡವನ್ನು ಪ್ರತಿನಿಧಿಸಿದರು. ಬಳಿಕ ಅವರ ಪ್ರತಿಭೆ ಮನಗಂಡ ವಿಲ್ಲಾರಿಯಲ್ ತಂಡ ತನ್ನ ತೆಕ್ಕೆಗೆ ಹಾಕಿಕೊಂಡಿತ್ತು. ಅಲ್ಲದೆ ಬೈಲಿ ಆಟದ ಬಲದಿಂದ ವಿಲ್ಲಾರಿಯಲ್ 38 ಲೀಗ್ ಪಂದ್ಯಗಳಲ್ಲಿ ಕೇವಲ 35 ಗೋಲ್‌ಗಳನ್ನು ಮಾತ್ರವೇ ಬಿಟ್ಟುಕೊಟ್ಟದ್ದು ವಿಷೇಶ. ಅಲ್ಲದೆ ತಂಡವು ಯುರೊಪಾ ಲೀಗ್‌ನಲ್ಲಿ ಸೆಮಿಫೈನಲ್ ತಲುಪಿದ ಸಾಧನೆ ಕೂಡ ಮಾಡಿತ್ತು. ''ಎರಿಕ್ ಯುವ ಮತ್ತು ಡಿಫೆನ್ಸ್ ವಿಭಾಗದಲ್ಲಿ ಪ್ರತಿಭಾನ್ವಿತ ಅಟಗಾರ. ಅಷ್ಟೇ ಅಲ್ಲದೆ ಉತ್ತಮ ರೀತಿಯಲ್ಲಿ ಬೆಳೆದುಬಂದಿದ್ದಾರೆ. ಒಬ್ಬ ಶ್ರೇಷ್ಠ ಆಟಗಾರನಾಗಲು ಬೇಕಾದ ಎಲ್ಲಾ ಸಾಮರ್ಥ್ಯ ಅವರಲ್ಲಿದೆ,'' ಎಂದು ಮ್ಯಾಂಚೆಸ್ಟರ್ ಯುನೈಟೆಡ್‌ನ ನೂತನ ಮ್ಯಾನೇಜರ್ ಜೋಸ್ ಮುರಿನೊ ಹೇಳಿದ್ದಾರೆ.
↧
ಫುಟ್ಬಾಲ್: ಬೈಲಿಗೆ ರೂ.290 ಕೋಟಿ ಬೆಲೆ
↧