Quantcast
Channel: VijayKarnataka
Viewing all articles
Browse latest Browse all 6795

ಪುತ್ರನಲ್ಲಿ ಅಪ್ಪನ ಛಾಯೆ

$
0
0

ಮನೋರಂಜನ್ ಹಾವ-ಭಾವ ರವಿಚಂದ್ರನ್ ಅವರಂತೆಯೇ ಇದೆ. ಕುದುರೆ ಸವಾರಿ ಮಾಡುವಾಗಲಂತೂ ಮನೋರಂಜನ್ ಥೇಟ್ ಅಪ್ಪನಂತೆಯೇ ಕಾಣಿಸುತ್ತಾರೆ' ಎನ್ನುತ್ತಾರೆ ನಟಿ ಶಾನ್ವಿ ಶ್ರೀವಾತ್ಸವ್. ಮನೋರಂಜನ್ ಜತೆ ಅವರು ನಾಯಕಿಯಾಗಿ ನಟಿಸುತ್ತಿರುವ ಸಿನಿಮಾಗೆ ಭರದಿಂದ ಚಿತ್ರೀಕರಣ ನಡೆದಿದೆ. ಹಾಗೆ ನೋಡಿದರೆ ಈ ಸಿನಿಮಾಗೆ ತಾವು ನಾಯಕಿಯಾಗಿ ಆಯ್ಕೆಯಾಗಿದ್ದೇ ಒಂದು ಸೋಜಿಗ ಎನ್ನುತ್ತಾರವರು. 'ಇಂಥದ್ದೊಂದು ಅವಕಾಶವನ್ನು ನಾನು ನಿರೀಕ್ಷಿಸಿರಲೇ ಇಲ್ಲ. ನಿರ್ದೇಶಕರು ಚಿತ್ರದ ಕತೆ ಹಾಗೂ ನನ್ನ ಪಾತ್ರದ ಬಗ್ಗೆ ಸಂಪೂರ್ಣ ಮಾಹಿತಿ ಸಿಗುವ ಮುನ್ನವೇ ಪಾತ್ರಕ್ಕೆ ಓಕೆ ಎಂದಿದ್ದೆ. ಅದು ಏಕೆ ಹಾಗೆ ಮಾಡಿದೆನೋ, ನೆನಪು ಮಾಡಿಕೊಂಡರೆ ಈಗಲೂ ಸೋಜಿಗವೆನಿಸುತ್ತದೆ' ಎನ್ನುವ ಶಾನ್ವಿ ಚಿತ್ರೀಕರಣವನ್ನು ಸಖತ್ ಎಂಜಾಯ್ ಮಾಡುತ್ತಿದ್ದಾರಂತೆ. ಸದ್ಯದಲ್ಲೇ ಹಾಡಿನ ಚಿತ್ರೀಕರಣಕ್ಕಾಗಿ ಚಿತ್ರತಂಡ ಇಟಲಿಗೆ ಹಾರಲಿದೆ.

**

ಶಿವಣ್ಣ-ವಿಜಯ್ ಸಿನಿಮಾ

ಶಿವರಾಜಕುಮಾರ್ ಮತ್ತು ವಿಜಯ್ ಅಭಿನಯದ ಚಿತ್ರವೊಂದು ಸದ್ಯದಲ್ಲೇ ಸೆಟ್ಟೇರಲಿದೆ. ಚಿತ್ರದಲ್ಲಿ ಇವರಿಬ್ಬರ ಜತೆ ಜಗ್ಗೇಶ್ ಪುತ್ರ ಗುರು ಕೂಡ ಇರುತ್ತಾರೆ ಎನ್ನುವುದು ವಿಶೇಷ. ಮೊನ್ನೆಯಷ್ಟೇ ಶಿವರಾಜ್ ಮತ್ತು ಶ್ರೀಮುರಳಿ ಅಭಿನಯದ ಚಿತ್ರವೊಂದರ ಬಗ್ಗೆ ಭರ್ಜರಿ ಸುದ್ದಿಯಾಗಿತ್ತು. ಇದೀಗ ಮತ್ತೊಂದು ದೊಡ್ಡ ಚಿತ್ರದ ಸರದಿ. ಈಗಾಗಲೇ ಚಿತ್ರದ ಕುರಿತು ಮಾತಕತೆ ಮುಗಿದಿದ್ದು ಆಗಸ್ಟ್ ವೇಳೆಗ ಚಿತ್ರೀಕರಣ ಆರಂಭವಾಗಲಿದೆಯಂತೆ. ಚಿತ್ರಕ್ಕೆ 'ಲೀಡರ್' ಎಂದು ಹೆಸರು ಇಡಲಾಗಿದೆ. ಈ ಹಿಂದೆ 'ರೋಸ್' ಚಿತ್ರವನ್ನು ನಿರ್ದೇಶಿಸಿದ್ದ ಸಹನಾ ಮೂರ್ತಿ 'ಲೀಡರ್' ನಿರ್ದೇಶಿಸಲಿದ್ದಾರೆ. ಚಿತ್ರದಲ್ಲಿ ವಿಜಯ್ ಹಾಗೂ ಗುರು ಪಕ್ಕಾ ಮಾಸ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಚಿತ್ರದಲ್ಲಿನ ಶಿವರಾಜ್ ಪಾತ್ರ 'ಸರ್ಕಾರ್' ಹಿಂದಿ ಚಿತ್ರದಲ್ಲಿನ ಅಮಿತಾಭ್ ಬಚ್ಚನ್ ಪಾತ್ರವನ್ನು ಹೋಲುತ್ತದೆ ಎನ್ನಲಾಗಿದೆ. -


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>