Quantcast
Channel: VijayKarnataka
Viewing all articles
Browse latest Browse all 6795

ಫ್ಯಾನ್: ಅಭಿಮಾನಿಗೆ ಫ್ಯಾನ್ ಕೊಟ್ಟ ಶಾರುಖ್

$
0
0

ಹಿಂದಿ ಚಿತ್ರ

* ಪದ್ಮಿನಿ ಜೈನ್ ಎಸ್
ಶಾರುಖ್ ಖಾನ್ ದ್ವಿಪಾತ್ರದಲ್ಲಿ ಕಾಣಿಸಿಕೊಂಡಿರುವ ಕಾರಣಕ್ಕೆ 'ಫ್ಯಾನ್' ಚಿತ್ರ ಕುತೂಹಲ ಮೂಡಿಸಿತ್ತು. ಅದರಲ್ಲೂ ಶಾರುಖ್ ಹುಡುಗನಾದ ಪರಿಗೆ ಬಾಲಿವುಡ್ ಅಚ್ಚರಿ ವ್ಯಕ್ತಪಡಿಸಿತ್ತು. ಪ್ರೇಕ್ಷಕರ ಕುತೂಹಲ ಮತ್ತು ಅಚ್ಚರಿಗಳನ್ನು ಸತ್ಯವಾಗಿಸಿದ್ದಾರೆ ಬಾಲಿವುಡ್ ಬಾದ್‌ಷ. ಸೂಪರ್ ಸ್ಟಾರ್ ಮೇಲಿನ ಅಭಿಮಾನದ ಕತೆಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.

ಚಿತ್ರದಲ್ಲಿ ಹೇಳಿಕೊಳ್ಳುವಂತಹ ಕತೆ ಇಲ್ಲದೇ ಇದ್ದರೂ, ಅದನ್ನು ಹೇಳಿದ ರೀತಿ ಹಿಡಿಸುತ್ತದೆ. ಹೀಗಾಗಿ ಗೌರವ್ (ಶಾರುಖ್ ಖಾನ್) ಮತ್ತು ಸೂಪರ್ ಸ್ಟಾರ್ ಆರ್ಯನ್ ಖನ್ನಾ (ಶಾರುಖ್ ಖಾನ್) ಪಾತ್ರಗಳು ಪ್ರೇಕ್ಷಕರ ಮನಸಲ್ಲಿ ಉಳಿಯುತ್ತವೆ.

ದೆಹಲಿಯಲ್ಲಿ ಬೆಳೆದ ಹುಡುಗ ಗೌರವ್. ಆತನಿಗೆ ಸೂಪರ್ ಸ್ಟಾರ್ ಆರ್ಯನ್ ಖನ್ನಾ ಅಂದರೆ ಎಲ್ಲಿಲ್ಲದ ಅಭಿಮಾನ. ಆದರೆ, ನೋಡಲು ಇವರಿಬ್ಬರೂ ಒಂದೇ ರೀತಿ ಇರುತ್ತಾರೆ. ಗೌರವ್‌ಗೆ ತನ್ನ ನೆಚ್ಚಿನ ನಟನನ್ನು ಭೇಟಿಯಾಗುವ ಆಸೆ. ಅದಕ್ಕಾಗಿ ಆರ್ಯನ್‌ನ ಪ್ರತಿಸ್ಪರ್ಧಿಯಾದ ನಟ ಸಿದ್ ಕಪೂರ್ ಜತೆ ಗೌರವ್ ಮಿಸ್ ಬಿಹೇವ್ ಮಾಡುತ್ತಾನೆ. ತಾನು ಅಂದುಕೊಂಡಂತೆ ನೆಚ್ಚಿನ ನಟನನ್ನು ಭೇಟಿ ಮಾಡುತ್ತಾನೆ. ಆದರೆ, ಆ ಸಮಯದಲ್ಲಿ ಗೌರವ್‌ಗೆ ನಿರಾಸೆ ಆಗುತ್ತದೆ. ತಾನು ಅಂದುಕೊಂಡಂತೆ ಆರ್ಯನ್ ಇಲ್ಲವೆಂದು ಗೊತ್ತಾಗಿ, ದ್ವೇಷ ಬೆಳೆಯುತ್ತದೆ. ಆರಾಧಿಸುತ್ತಿದ್ದ ನಟ, ತನಗೆ ಕ್ಷಮೆ ಕೇಳಬೇಕೆಂದು ಪಟ್ಟು ಹಿಡಿಯುತ್ತಾನೆ. ಅಲ್ಲಿಂದ ಚಿತ್ರ ಮತ್ತೊಂದು ಹಾದಿ ಹಿಡಿಯುತ್ತದೆ. ಇಬ್ಬರ ನಡುವಿನ ದ್ವೇಷ ಜಾಸ್ತಿ ಆಗುತ್ತಲೇ ಸಾಗುತ್ತದೆ. ಗೌರವ್ ಮತ್ತು ಆರ್ಯನ್ ನಡುವಿನ ಕಾಳಗವೇ ಮುಂದಿನ ಕತೆ.

ಮಧ್ಯಂತರವರೆಗೆ ಕಾಡುವ ಕತೆ, ಆನಂತರ ಸೊರಗುತ್ತದೆ. ಒಪ್ಪಿಕೊಳ್ಳುವುದಕ್ಕೂ ಆಗದ ದೃಶ್ಯಗಳು ಬರುತ್ತವೆ. ಹೀಗಾಗಿ ಕೊಂಚ ನಿರಾಸೆ ಮೂಡುತ್ತದೆ. ಅದರಲ್ಲೂ ನಟನ ಇಮೇಜ್ ಹಾಳು ಮಾಡಲು ಕೆಳ ಮಧ್ಯಮ ವರ್ಗದ ಹುಡುಗನೊಬ್ಬ ಲಂಡನ್‌ಗೆ ಹಾರುವ ದೃಶ್ಯ ಬಾಲಿಶತನದಿಂದ ಕೂಡಿದೆ.

ಗೌರವ್ ಪಾತ್ರದಲ್ಲಿ ಶಾರುಖ್ ಸಖತ್ ಮಿಂಚಿದ್ದಾರೆ. ಈ ಯಶಸ್ಸಿನ ಕೀರ್ತಿಯು ಮೇಕಪ್ ಆರ್ಟಿಸ್ಟ್ ಗ್ರೆಗ್ ಕ್ಯಾನಮ್‌ಗೂ ಸಲ್ಲಬೇಕು. ಇವರ ಮೇಕಪ್ ಮಂತ್ರದಲ್ಲಿ ಥೇಟ್ 25ರ ವಯಸ್ಸಿನ ತರುಣನಂತೆ ಶಾರುಖ್ ಕಂಡಿದ್ದಾರೆ.

ಸೂಪರ್ ಸ್ಟಾರ್ ಮತ್ತು ಹುಡುಗನ ನಡುವಿನ ಆ್ಯಕ್ಷನ್ ಸೀನ್‌ಗಳು ಬೋರ್ ಹೊಡಿಸುತ್ತವೆ. ಕೆಲವೇ ಸೆಕೆಂಡ್‌ಗಳಲ್ಲಿ ಮುಗಿಸಬೇಕಾದ ಸಾಹಸ ದೃಶ್ಯಗಳನ್ನು ಎಳೆದಿದ್ದಾರೆ ನಿರ್ದೇಶಕರು. ಹೀಗಾಗಿ ಸಾಹಸ ಪ್ರಿಯರಿಗೆ ಕೊಂಚ ನಿರಾಸೆ ಮೂಡುತ್ತದೆ. ಅಲ್ಲದೇ, ಕಾಮಿಡಿ, ಹಾಡು, ರೊಮಾನ್ಸ್ ನಿರೀಕ್ಷಿಸುವವರಿಗೆ 'ಫ್ಯಾನ್' ರುಚಿಸುವುದು ಕಷ್ಟ. ಆರ್ಯನ್ ಮತ್ತು ಗೌರವ್ ಪಾತ್ರಗಳ ಹೊರತಾಗಿ ಉಳಿದ ಯಾವ ಕ್ಯಾರೆಕ್ಟರ್ ಮನಸ್ಸಲ್ಲಿ ಉಳಿಯುವುದಿಲ್ಲ.

ಹೇಳಲೇಬೇಕಾದ ಮತ್ತೊಂದು ಸಂಗತಿ ಅಂದರೆ, ಆರ್ಯನ್ ಪಾತ್ರವು ಶಾರುಖ್‌ರ ನಿಜ ಜೀವನದಂತೆ ಕಂಡು ಬರುತ್ತದೆ. ಹೀಗಾಗಿ ಪಾತ್ರದ ವ್ಯಂಗ್ಯವನ್ನು ಸ್ವತಃ ತಾನೇ ತೆರೆಯ ಮೇಲೆ ತೋರಿಸಿ ಅಚ್ಚರಿ ಮೂಡಿಸುತ್ತಾರೆ. ಫ್ಯಾನ್ಸ್ ಅದ್ಭುತ ಸಿನಿಮಾವೇನೂ ಅಲ್ಲ. ಬಾಲಿವುಡ್ ಬಾದ್‌ಷಾನ ಕ್ರೇಝಿ ಅಭಿಮಾನಿ ನೀವಾಗಿದ್ದರೆ ಒಂದು ಸಲ ಸಿನಿಮಾ ನೋಡಬಹುದು.


Viewing all articles
Browse latest Browse all 6795

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ಕ್ಯೂಟ್‌ ವಿಡಿಯೋ


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


Indira Canteen : ‘ಇಂದಿರಾ ಕ್ಯಾಂಟೀನ್’ನಲ್ಲಿ ಮಾಂಸ ಸೇವನೆಗೂ ಅವಕಾಶವಿದೆ : ಸಚಿವ...


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>