Quantcast
Channel: VijayKarnataka
Viewing all articles
Browse latest Browse all 6795

ಏನೀ ಸ್ನೇಹ 'ಅನುಬಂಧ?'

$
0
0

ಸ್ನೇಹ ಎಂಬುದು ಎಂದೆಂದಿಗೂ ಬಿಡಿಸಲಾರದ ನಂಟು. ವ್ಯಕ್ತಿಯೋರ್ವನ ಜೀವನದ ಎಲ್ಲಾ ಹಂತಗಳಲ್ಲೂ ಸ್ನೇಹಿತರ ಪಾತ್ರ ಪ್ರಮುಖವಾದದ್ದು. ಸ್ನೇಹಿತರ ಮುಂದೆ ಮನಸ್ಸು ಹಕ್ಕಿಯಾಗುತ್ತದೆ. ಮನಸ್ಸಿನಲ್ಲಿರುವ ಭಾವನೆಗಳೆಲ್ಲಾ ಹೊರಗೆ ಬರುತ್ತದೆ. ಅದಕ್ಕೇ ನಾವು ಯಾವುದೇ ವಿಷಯವನ್ನು ಸ್ನೇಹಿತರ ಜೊತೆಗೆ ಹಂಚಿಕೊಳ್ಳಲು ಹಿಂಜರಿಯುವುದಿಲ್ಲ. ಹೆತ್ತವರ ಮುಂದೆ ಹೇಳಿಕೊಳ್ಳಲಾಗದ ವಿಷಯಗಳೂ ಕೆಲವೊಮ್ಮೆ ಸ್ನೇಹಿತರ ಮುಂದೆ ಮುಚ್ಚುಮರೆಯಿಲ್ಲದೆ ಹೊರಗೆ ಬರುತ್ತದೆ.

ಆದರೆ ಎಲ್ಲರಿಗೂ ಎಲ್ಲರೂ ಸ್ನೇಹಿತರಾಗುವುದಿಲ್ಲ. ಆದರೂ ಆ ಸ್ನೇಹ ಸಂಬಂಧ ಹೆಚ್ಚು ದಿನ ಉಳಿಯುವುದಿಲ್ಲ. ಕೆಲವರು ಹೆಚ್ಚು ಮಾತನಾಡುವ ವ್ಯಕ್ತಿಗಳ ಸ್ನೇಹ ಮಾಡಲು ಇಚ್ಛಿಸಿದರೆ, ಇನ್ನು ಕೆಲವರಿಗೆ ಮಿತಭಾಷಿಗಳ ಸ್ನೇಹ ಇಷ್ಟವಾಗುತ್ತದೆ. ಕೆಲವರು ಬಹು ಬೇಗನೆ ಸ್ನೇಹಿತರಾದರೆ, ಕೆಲವರು ಎಷ್ಟೇ ಹತ್ತಿರವಾಗಿದ್ದರೂ ಸ್ನೇಹದ ಕೈ ಚಾಚಿರುವುದಿಲ್ಲ. ಕೆಲವು ಸ್ನೇಹಿತರು ಎಂತಹ ಆಪತ್ಕಾಲದಲ್ಲೂ ನಿಮ್ಮ ನೆರವಿಗೆ ಧಾವಿಸುತ್ತಾರೆ, ಇನ್ನು ಕೆಲವರು ಎಷ್ಟೇ ನೆರವು ಯಾಚಿಸಿದರೂ ಕಲ್ಲು ಹೃದಯದವರಂತೆ ವರ್ತಿಸುವವರೂ ಇದ್ದಾರೆ. ಸ್ನೇಹದ ಈ ಭಿನ್ನ ಆಯಾಮಗಳಿಗೆ ಆ ವ್ಯಕ್ತಿಗಳ ರಾಶಿಯೂ ಕಾರಣವಾಗುತ್ತದೆ. ರಾಶಿಗಳನ್ನು ನೋಡಿಯೇ ನೀವು ಎಂಥ ಸ್ನೇಹಿತರು ಅಥವಾ ನಿಮ್ಮ ಸ್ನೇಹಿತರು ಎಂಥವರು ಎಂಬುದನ್ನು ನೋಡಬಹುದು ಹಾಗೂ ಯಾವ ರಾಶಿಯವರೊಂದಿಗೆ ನಿಮ್ಮ ಸ್ನೇಹ ಬಹುಕಾಲ ಬಾಳುತ್ತದೆ ಎಂಬುದನ್ನು ತಿಳಿಯಬಹುದು. ಇದನ್ನು ತಿಳಿಯುವ ಬಗೆ ಹೀಗಿದೆ.

ಮೇಷ (ಮಾರ್ಚ್ 21-ಏಪ್ರಿಲ್ 19)

ಈ ರಾಶಿಯ ಸ್ನೇಹಿತರು ನಿಮ್ಮ ಜೀವನದಲ್ಲಿ ಸದಾ ಉತ್ಸಾಹವನ್ನು ತುಂಬುತ್ತಾರೆ. ಎಂದಿಗೂ ನಿಮಗೆ ಬೋರ್ ಉಂಟು ಮಾಡುವುದಿಲ್ಲ. ಅವರು ಸ್ವಲ್ಪ ಸಿಟ್ಟಿನ ಸ್ವಭಾವದವರಾಗಿದ್ದರೂ ಹೊಸ ಆಲೋಚನೆಗಳು ಮತ್ತು ಸಾಮರ್ಥ್ಯಗಳನ್ನು ಹೊಂದಿರುತ್ತಾರೆ. ಧೈರ್ಯವೇ ಅವರ ಪ್ರಮುಖ ಬಂಡವಾಳ. ಆದರೆ ನೀವು ಏನಾದರೂ ಹೊಸ ಕಾರ್ಯ ಮಾಡುವ ಯೋಚನೆ ಮಾಡಿದ್ದರೆ ಈ ರಾಶಿಯವರೊಂದಿಗೆ ಸ್ನೇಹ ಮಾಡಿಕೊಳ್ಳಿ.

ವೃಷಭ (ಏಪ್ರಿಲ್ 20-ಮೇ 20)

ಈ ರಾಶಿಯವರು ಸದಾ ಕಾಲ ಪ್ರಾಣ ಸ್ನೇಹಿತರಾಗಿರುತ್ತಾರೆ. ದೀರ್ಘ ಕಾಲದ ಸ್ನೇಹ ಬಯಸುವವರು ಈ ರಾಶಿಯವರೊಂದಿಗೆ ಆತ್ಮೀಯರಾಗುವುದು ಉತ್ತಮ. ನಿಮ್ಮ ಕಡು ಕಷ್ಟದ ದಿನಗಳಲ್ಲೂ ಇವರು ನಿಮ್ಮ ನೆರವಿಗೆ ಧಾವಿಸುತ್ತಾರೆ. ಮನೋ ಸ್ಥಿರತೆಯೇ ಅವರ ಪ್ರಮುಖ ಆಸ್ತಿ.

ಮಿಥುನ (ಮೇ 21-ಜೂನ್ 20)

ಈ ರಾಶಿಯವರಿಗೆ ಹಲವಾರು ವಿಷಯಗಳಲ್ಲಿ ಆಸಕ್ತಿಯಿರುತ್ತದೆ. ಆದ್ದರಿಂದ ಇವರ ಸ್ನೇಹದಿಂದ ನಿಮಗೂ ಅನೇಕ ವಿಷಯಗಳು ತಿಳಿಯುತ್ತದೆ. ನಿಮ್ಮಲ್ಲಿ ಅವರಿಗೆ ನಂಬಿಕೆ ಬಂದರೆ ಅವರು ಎಂದೆಂದಿಗೂ ನಿಮ್ಮ ಜೊತೆಯಲ್ಲಿರುತ್ತಾರೆ. ಮಗುವಿನಲ್ಲಿರುವ ಕುತೂಹಲಕಾರಿ ಮನಸ್ಸೇ ಅವರ ಬಂಡವಾಳ.

ಕರ್ಕ (ಜೂನ್ 21-ಜುಲೈ 22)

ಈ ರಾಶಿಯವರು ತುಂಬಾ ನಿಷ್ಠಾವಂತ ಸ್ನೇಹಿತರಾಗಿರುತ್ತಾರೆ. ಆದರೆ ಅವರು ನಿಮ್ಮಿಂದಲೂ ಅದೇ ನಿಷ್ಠೆಯನ್ನು ನಿರೀಕ್ಷಿಸುತ್ತಾರೆ. ನಿಮ್ಮಲ್ಲೂ ಆ ಭಾವನೆಯಿದ್ದರೆ ಮಾತ್ರ ಅವರು ನಿಮಗೆ ಬಹುಕಾಲ ಸ್ನೇಹಿತರಾಗಿ ಉಳಿಯುತ್ತಾರೆ. ಆಳವಾದ ಭಾವನೆಯೇ ಅವರ ಪ್ರಮುಖ ಬಂಡವಾಳ.

ಸಿಂಹ (ಜುಲೈ 23-ಆಗಸ್ಟ್ 22)

ಇವರು ತುಂಬಾ ಉದಾರ ಮನೋಭಾವದವರು ಮತ್ತು ಕ್ರಿಯೇಟಿವ್ ಆಗಿರುತ್ತಾರೆ. ಆದರೆ ಸ್ನೇಹವನ್ನು ತುಂಬಾ ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಅವರು ಹೋದ ಕಡೆಯೆಲ್ಲಾ ಎಲ್ಲರ ಗಮನ ಸೆಳೆಯಲು ಸ್ನೇಹಿತರಂತೆ ವರ್ತಿಸುತ್ತಾರೆ ಆದರೆ ಆ ಸಂಬಂಧಕ್ಕೆ ಹೆಚ್ಚು ಬೆಲೆ ನೀಡುವುದಿಲ್ಲ. ಸ್ನೇಹಪರತೆಯೇ ಅವರ ಪ್ರಮುಖ ಬಂಡವಾಳ.

ಕನ್ಯಾ (ಆಗಸ್ಟ್ 23-ಸೆಪ್ಟೆಂಬರ್ 22)

ಈ ರಾಶಿಯವರಿಗೆ ತಮ್ಮ ಸ್ನೇಹಿತರ ಬಗ್ಗೆ ಹೆಚ್ಚಿನ ಅಕ್ಕರೆ ಮತ್ತು ಕಾಳಜಿಯನ್ನು ಪ್ರದರ್ಶಿಸುತ್ತಾರೆ. ನಿಮಗೆ ಯಾವುದೇ ಕಷ್ಟವಾಗದಂತೆ ನೋಡಿಕೊಳ್ಳುತ್ತಾರೆ. ತುಂಬಾ ಪ್ರಾಮಾಣಿಕರಾಗಿರುತ್ತಾರೆ. ಸತ್ಯವೇ ಅವರ ಬಂಡವಾಳ.

ತುಲಾ (ಸೆಪ್ಟೆಂಬರ್ 23-ಅಕ್ಟೋಬರ್ 22)

ಈ ರಾಶಿಯವರ ಜೊತೆಗಿನ ಸ್ನೇಹಕ್ಕೆ ಸಾಕಷ್ಟು ಸಮತೋಲನ ಮನೋಭಾವನೆ ಅಗತ್ಯ. ಇವರಿಗೆ ಸಾಮರಸ್ಯ ತುಂಬಾ ಇಷ್ಟ. ಸ್ನೇಹ ನಡುವೆ ಯಾವುದೇ ಅಡ್ಡಿಗಳು ಬಾರದಂತೆ ನೋಡಿಕೊಳ್ಳುತ್ತಾರೆ. ಇವರಿಗೆ ಮನೋರಂಜನೆ ಇಷ್ಟ ಮತ್ತು ತಮ್ಮ ಸುತ್ತಮುತ್ತ ಇರುವವರನ್ನೂ ರಂಜಿಸುತ್ತಿರುತ್ತಾರೆ. ಸಹಕಾರ ಮನೋಭಾವನೆಯೇ ಇವರ ದೊಡ್ಡ ಆಸ್ತಿ.

ವೃಶ್ಚಿಕ (ಅಕ್ಟೋಬರ್ 23-ನವೆಂಬರ್ 21)

ಸಿಂಹ ರಾಶಿಯವರಂತೆ ವೃಶ್ಚಿಕ ರಾಶಿಯವರಿಗೂ ಸ್ನೇಹದ ಮಹತ್ವ ಗೊತ್ತಿಲ್ಲ. ಆದ್ದರಿಂದ ಅವರು ಜನರನ್ನು ನಂಬುವುದಿಲ್ಲ. ಯಾರ ಸ್ನೇಹ ಮಾಡಲೂ ಅವರು ಹಿಂಜರಿಯುತ್ತಾರೆ. ಆದರೆ ಒಮ್ಮೆ ಯಾರ ಮೇಲಾದರೂ ನಂಬಿಕೆಯಿಟ್ಟು ಸ್ನೇಹ ಮಾಡಿದರೆ ನಂತರ ನಿಷ್ಠಾವಂತ ಸ್ನೇಹಿತರಾಗುತ್ತಾರೆ. ಬದ್ಧತೆಯೇ ಅವರ ಪ್ರಮುಖ ಆಸ್ತಿ.

ಧನು (ನವೆಂಬರ್ 22-ಡಿಸೆಂಬರ್ 21)

ಈ ರಾಶಿಯವರಿಗೆ ಪ್ರವಾಸ ತುಂಬಾ ಇಷ್ಟ. ಇವರು ನಿಮ್ಮನ್ನು ಹೊಸ ಸ್ಥಳಗಳಿಗೆ ಕೊಂಡೊಯ್ಯುತ್ತಾರೆ. ಇವರು ಇತರರ ಮಾತುಗಳನ್ನು ಚೆನ್ನಾಗಿ ಆಲಿಸುತ್ತಾರೆ. ಈ ಕಾರಣ ಉತ್ತಮ ಸ್ನೇಹಿತರಾಗುತ್ತಾರೆ. ಆಶಾವಾದಾವೇ ಇವರ ಪ್ರಮುಖ ಆಸ್ತಿ.

ಮಕರ (ಡಿಸೆಂಬರ್ 22-ಜನವರಿ 19)

ಇವರು ತುಂಬಾ ಪ್ರಾಯೋಗಿಕ ಮನೋಭಾವದವರು. ಸದಾಕಾಲ ತಮ್ಮ ಸ್ನೇಹಿತರಿಗೆ ಒಳ್ಳೆಯದನ್ನೇ ಬಯಸುತ್ತಾರೆ. ಇವರು ಸ್ವಲ್ಪ ಮೂಡಿಯಾಗಿದ್ದರೂ, ತಮ್ಮ ಸ್ನೇಹಿತರ ಗುರಿ ಸಾಧನೆಗೆ ನೆರವು ನೀಡುತ್ತಾರೆ.

ಕುಂಭ (ಜನವರಿ 20-ಫೆಬ್ರವರಿ 18)

ಈ ರಾಶಿಯ ಸ್ನೇಹಿತರು ನೆರವು ನೀಡುವುದರಲ್ಲಿ ಸದಾ ಮುಂದು. ತುಂಬಾ ಭಾವನಾತ್ಮವಾಗಿರುವ ಇವರು ಸ್ನೇಹಿತರಿಗೆ ತಮ್ಮ ಕೈಲಾದ ನೆರವು ನೀಡುತ್ತಾರೆ. ಇವರ ಸ್ನೇಹದಿಂದ ಬೇಗನೆ ಕಳಚಿಕೊಳ್ಳಬೇಡಿ. ಇವರು ತಮ್ಮ ಸ್ನೇಹಿತರಿಗೆ ಎಲ್ಲಾ ಸ್ವಾತಂತ್ರ್ಯಗಳನ್ನು ನೀಡುತ್ತಾರೆ.

ಮೀನ (ಫೆಬ್ರವರಿ 19-ಮಾರ್ಚ್ 20)

ಈ ರಾಶಿಯವರು ಭಾವನೆಗಳನ್ನು ಹಂಚಿಕೊಳ್ಳಲು ಇಷ್ಟಪಡುತ್ತಾರೆ. ಸ್ನೇಹಿತರಿಂದ ಮೋಸ ಹೋದಾಗ ತುಂಬಾ ನೊಂದುಕೊಳ್ಳುತ್ತಾರೆ. ಸಹಾನುಭೂತಿ ಮತ್ತು ಪ್ರೀತಿಯೇ ಇವರ ಪ್ರಮುಖ ಬಂಡವಾಳ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>