Quantcast
Channel: VijayKarnataka
Viewing all articles
Browse latest Browse all 6795

ಕೆಲವು ವಸ್ತುಗಳಿಗೆ 15 ಪರ್ಸೆಂಟ್ ಸುಂಕ

$
0
0

ವಿದೇಶದಿಂದ ಭಾರತಕ್ಕೆ ತರುವ ಸುಂಕ: ಹೊಸ ನಿಯಮ

ಹೊಸದಿಲ್ಲಿ: ಒಂದು ವರ್ಷ ವಿದೇಶಗಳಲ್ಲಿ ನೆಲೆಸಿದ ಭಾರತೀಯರು ದೇಶಕ್ಕೆ ಮರಳುವ ಸಂದರ್ಭದಲ್ಲಿ ತಮ್ಮೊಂದಿಗೆ ತರುವ ಕಲರ್‌ ಟಿವಿ, ಹೋಮ್‌ ಥಿಯೇಟರ್‌ ಸಿಸ್ಟಮ್‌ ಮತ್ತು ಚಿನ್ನ, ಬೆಳ್ಳಿ ಮತ್ತಿತರ ವಸ್ತುಗಳಿಗೆ ಶೇ.15ರಷ್ಟು ಸೀಮಾ ಸುಂಕವನ್ನು ಇನ್ನು ಮುಂದೆ ತೆರಬೇಕಾಗುತ್ತದೆ.

ಕೇಂದ್ರೀಯ ಅಬಕಾರಿ ಮತ್ತು ಸೀಮಾ ಸುಂಕ ಮಂಡಳಿ(ಸಿಬಿಇಸಿ) ಸುತ್ತೋಲೆ ಪ್ರಕಾರ, ಕೆಲವು ವಸ್ತುಗಳಿಗೆ ಇನ್ನು ಮುಂದೆ ಸುಂಕವನ್ನು ವಿಧಿಸಲಾಗುತ್ತದೆ. ಪ್ರತಿವರ್ಷ ನಿಯಮ ಮತ್ತು ಸುಂಕದ ದರಗಳನ್ನು ಸಿಬಿಇಸಿ ಪರಿಷ್ಕರಿಸುತ್ತದೆ.

ಇಲ್ಲಿಯ ತನಕ ವಿಸಿಆರ್‌, ವಾಷಿಂಗ್‌ ಮೆಷಿನ್‌, ಎಲೆಕ್ಷ್ರಿಕಲ್‌ ಅಥವಾ ಎಲ್‌ಪಿಜಿ ಸ್ಟವ್‌, ಕಂಪ್ಯೂಟರ್‌ ಮತ್ತು ಲ್ಯಾಪ್‌ಟಾಪ್‌ ಮತ್ತು 300 ಲೀಟರ್‌ ಸಾಮರ್ಥ್ಯದ ರೆಫ್ರಿಜಿರೇಟರ್‌ಗಳು, ಪುರುಷರಿಗೆ 50,000 ರೂ. ಮೌಲ್ಯದ ಚಿನ್ನದ ಆಭರಣಗಳನ್ನು(ಮಹಿಳೆಯರಿಗೆ 1 ಲಕ್ಷ ರೂ. ತನಕ) ಭಾರತಕ್ಕೆ ತರಲು ಸುಂಕ ವಿನಾಯಿತಿ ಇತ್ತು.

2016-17ಕ್ಕೆ ಸಂಬಂಧಿಸಿದಂತೆ ಹೊಸ ನಿಯಮಗಳನ್ನು ಸಿಬಿಇಸಿ ರೂಪಿಸಿದ್ದು,ವಿಡಿಯೊ ಕ್ಯಾಸೆಟ್‌ ರೆಕಾರ್ಡರ್‌/ಪ್ಲೇಯರ್‌, ಡಿಜಿಟಲ್‌ ವಿಡಿಯೊ ಡಿಸ್ಕ್‌ ಪ್ಲೇಯರ್‌, ಮ್ಯೂಸಿಕ್‌ ಸಿಸ್ಟಮ್‌, ಏರ್‌ ಕಂಡೀಷನರ್‌, ಮೈಕ್ರೊವೇವ್‌ ಓವನ್‌, ವರ್‌್ರ್ಡ ಪ್ರೊಸೆಸಿಂಗ್‌ ಮೆಷಿನ್‌, ಫ್ಯಾಕ್ಸ್‌ ಮೆಷಿನ್‌, ಪೋರ್ಟಬಲ್‌ ಫೋಟೊ ಕಾಪಿಯಿಂಗ್‌ ಮೆಷಿನ್‌, ವಾಷಿಂಗ್‌ ಮೆಷಿನ್‌, ಡೆಸ್ಕ್‌ಟಾಪ್‌/ಲ್ಯಾಪ್‌ಟಾಪ್‌ ಕಂಪ್ಯೂಟರ್‌ ಮತ್ತು 300ಲೀಟರ್‌ ಸಾಮರ್ಥ್ಯದ ರೆಫ್ರಿಜಿರೇಟರ್‌ ಸೇರಿದಂತೆ 13 ವಸ್ತುಗಳಿಗೆ ವಿನಾಯಿತಿ ಮುಂದುವರಿದಿದೆ.

ಆದರೆ, ಕಲರ್‌ ಟಿವಿ, ವಿಡಿಯೊ ಹೋಮ್‌ ಥಿಯೇಟರ್‌ ಸಿಸ್ಟಮ್‌, ಡಿಶ್‌ ವಾಷರ್‌, 300 ಲೀಟರ್‌ ಸಾಮರ್ಥ್ಯ ಮೀರಿದ ರೆಫ್ರಿಜಿರೇಟರ್‌,... ವಿಡಿಯೊ ಕ್ಯಾಮೆರಾ, ಆಭರಣದ ರೂಪದಲ್ಲಿಲ್ಲದ ಯಾವುದೇ ರೂಪದ ಚಿನ್ನ ಮತ್ತು ಬೆಳ್ಳಿ ಮತ್ತಿತರ ವಸ್ತುಗಳಿಗೆ ಶೇ.15ರಷ್ಟು ಸೀಮಾ ಸುಂಕ ವಿಧಿಸಲಾಗುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>