Quantcast
Channel: VijayKarnataka
Viewing all articles
Browse latest Browse all 6795

ವೇಗದ ಗತಿಮಾನ್‌ ಎಕ್ಸ್‌ಪ್ರೆಸ್‌ಗೆ ಏ.5ಕ್ಕೆ ಗ್ರೀನ್‌ ಸಿಗ್ನಲ್‌

$
0
0

ಆಗ್ರಾ : ಭಾರತದ ವೇಗದ ರೈಲು ಗತಿಮಾನ್‌ ಎಕ್ಸ್‌ಪ್ರೆಸ್‌ ಮಂಗಳವಾರದಿಂದ(ಏ. 5) ಕಾರ್ಯಾರಂಭಿಸಲಿದೆ. ಆ ಮೂಲಕ ಭಾರತೀಯ ರೈಲ್ವೆ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಲಿದೆ.

''ಹಜ್ರತ್‌ ನಿಜಾಮುದ್ದೀನ್‌, ದಿಲ್ಲಿಯಿಂದ ಆಗ್ರಾ ಕಂಟೋನ್ಮೆಂಟ್‌ ವರೆಗಿನ ಮಾರ್ಗದ ಈ ರೈಲು ಸೇವೆಗೆ ತಮ್ಮ ಕಚೇರಿಯಿಂದಲೇ ರಿಮೋಟ್‌ ಮೂಲಕ ಕೇಂದ್ರ ರೈಲ್ವೆ ಸಚಿವ ಸುರೇಶ್‌ ಪ್ರಭು ಅವರು ಚಾಲನೆ ನೀಡುವರು,'' ಎಂದು ವಿಭಾಗೀಯ ರೈಲ್ವೆ ವ್ಯವಸ್ಥೆ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ ಬೆಳಗ್ಗೆ 8.10ಕ್ಕೆ ನಿಜಾಮುದ್ದೀನ್‌ ರೈಲ್ವೆ ಸ್ಟೇಷನ್‌ ಬಿಡುವ ನೂತನ ರೈಲು 9.50ಕ್ಕೆ ಆಗ್ರಾ ಕಂಟೋನ್ಮೆಂಟ್‌ ತಲುಪಲಿದೆ.

12 ಹವಾನಿಯಂತ್ರಿತ ಕೋಚ್‌ಗಳು, ಪ್ರತಿ ಬೋಗಿಯಲ್ಲೂ ರೈಲು ಸಖಿಯರು(ಗಗನಸಖಿಯರ ಮಾದರಿಯಲ್ಲಿ) ಇರಲಿದ್ದಾರೆ. ಉಚಿತ ವೈ-ಫೈ ಸೌಲಭ್ಯ, ಬಯೋ ಟಾಯ್ಲೆಟ್‌ಗಳು, ಸ್ವಯಂ ಚಾಲಿತ ಬಾಗಿಲುಗಳು ಸೇರಿದಂತೆ ಸುಗಮ ಪ್ರಯಾಣಕ್ಕೆ ಅಗತ್ಯವಾದ ವಿನೂತನ ಸೌಲಭ್ಯಗಳನ್ನು ಗತಿಮಾನ್‌ ಎಕ್ಸ್‌ಪ್ರೆಸ್‌ ಒಳಗೊಂಡಿದೆ.

ಶತಾಬ್ದಿ ಎಕ್ಸ್‌ಪ್ರೆಸ್‌ಗಿಂತಲೂ ಈ ರೈಲಿನ ಪ್ರಯಾಣ ದರ ಅಧಿಕವಾಗಿದೆ. ಶುಕ್ರವಾರ ಹೊರತುಪಡಿಸಿ(ಅಂದು ತಾಜ್‌ಮಹಲ್‌ ಪ್ರವೇಶಕ್ಕೆ ಅವಕಾಶವಿಲ್ಲ) ವಾರದ 6 ದಿನ ಹೊಸ ರೈಲಿನ ಸೇವೆ ಲಭ್ಯ ಇರಲಿದೆ.

* ಗತಿಮಾನ್‌ ಎಕ್ಸ್‌ಪ್ರೆಸ್‌ಗೆ ಭಾರತದ ಮೊದಲ ಸೆಮಿ ಹೈ-ಸ್ಪೀಡ್‌ ರೈಲು ಎನ್ನುವ ಹೆಗ್ಗಳಿಕೆ

* 184 ಕಿ.ಮೀಗಳ ಅಂತರವನ್ನು 100 ನಿಮಿಷದಲ್ಲಿ ಈ ರೈಲು ಕ್ರಮಿಸಲಿದೆ

* ಭೋಪಾಲ್‌ ಶತಾಬ್ದಿ ರೈಲಿನ ಗರಿಷ್ಠ ವೇಗ ಗಂಟೆಗೆ 150 ಕಿ.ಮೀ. ಈ ದಾಖಲೆಯನ್ನು ಗತಿಮಾನ್‌ ಎಕ್ಸ್‌ಪ್ರೆಸ್‌ ಮೀರಿದ್ದು, ಗಂಟೆಗೆ 160 ಕಿ.ಮೀ ವೇಗದಲ್ಲಿ ರೈಲು ಚಲಿಸಲಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ಅಪಘಾತ ಗಾಯಾಳುಗಳಿಗೆ ನೆರವು ನೀಡಿದವರಿಗೆ ಜೀವರಕ್ಷಕ ಪ್ರಶಸ್ತಿ


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಶಿವಸೇನೆ ಬಿಗಿಪಟ್ಟು: ದೇಶ ಗೆದ್ದ ಬಿಜೆಪಿ ವಿಲವಿಲ


ಶುಭ ಫಲಕ್ಕಾಗಿ ಮನೆಯಲ್ಲಿ ಗಾಳಿ ಗಂಟೆ ಹಾಕುವ ಮುನ್ನ ಈ ವಿಚಾರ ತಿಳಿಯಿರಿ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>