Quantcast
Channel: VijayKarnataka
Viewing all articles
Browse latest Browse all 6795

ರಂಗು ತಂದ ಕಾಲೇಜು ಎಥ್ನಿಕ್ ಡೇ

$
0
0

ಅನಿಲ್ ಸಾಗರ್

ಶಿವಮೊಗ್ಗ :
ಹೇ... ಇಲ್ನೋಡೆ ಲೈಟ್ ಪರ್ಪಲ್ ಸೀರೆ ನಂಗೆ ಚನ್ನಾಗಿ ಕಾಣ್ಸುತ್ತಾ.., ವ್ಹಾ..ವ್ ಏನೇಮಾ ಹೀರೋಯಿನ್ ತರಾ ಕಾಣ್ತಿದಿಯಾ.. ಲೇ ಡೈಲಿ ಇದೇ ಥರಾ ಇದ್ರೇ ಎಷ್ಟು ಚಂದ ಅಲ್ವೇನೇ... ಅರ‌್ರೇ ಇದೇನಿದು ಎಂದು ಆಶ್ಚರ್ಯಗೊಳ್ಳಬೇಡಿ. ನಗರದ ಕಮಲಾ ನೆಹರು ಮಹಿಳಾ ಕಾಲೇಜಿನಲ್ಲಿ ಗುರುವಾರ ನಡೆದ ಸಾಂಪ್ರದಾಯಿಕ ದಿನಾಚರಣೆಯಲ್ಲಿ ಕೇಳಿ ಬಂದ ಮಾತುಗಳಿವು.

ಹೌದು ಪ್ರತಿದಿನ ಸಪ್ಪೆ ಮೋರೆ ಇಟ್ಟು ಕೊಂಡು ಒಲ್ಲದ ಮನಸ್ಸಿನಿಂದಲೇ ಕಾಲೇಜಿಗೆ ಅಡಿ ಇಡುತ್ತಿದ್ದ ವಿದ್ಯಾರ್ಥಿನಿಯರು ಇಂದು ಮಾತ್ರ ಖುಷಿ ಖುಷಿಯಾಗಿಯೇ ಅಡಿಯಿಟ್ಟರು. ಅವರ ಮೊಗದಲ್ಲಿ ತರಗತಿ, ಪಾಠ, ಪ್ರಾಜೆಕ್ಟ್, ಪರೀಕ್ಷೆಯ ಆತಂಕ.... ಯಾವ ಗೆರೆಯೂ ಸುಳಿದಾಡಲಿಲ್ಲ. ಗೂಡು ಬಿಟ್ಟ ಹಕ್ಕಿಯಂತಾಗಿದ್ದ ಅವರು ತಮಗಿಷ್ಟವಾದ ಉಡುಗೆ ತೊಟ್ಟು ಸಂತೋಷದ ಅಲೆಯಲ್ಲಿ ತೇಲಾಡಿದರು. ಈ ಮೂಲಕ ಕಲಾತ್ಮಕ ಹಾಗೂ ಸಾಂಸ್ಕೃತಿಕ ಸಿರಿಗೆ ಮೆರುಗು ನೀಡಿದ್ದರು.

ಅವರ ಉಡುಗೆಗಳು ಕೇವಲ ತಮ್ಮ ಸಂತೋ ಷಕ್ಕಷ್ಟೇ ಸೀಮಿತವಾಗಿರಲಿಲ್ಲ. ಬದಲಾಗಿ ವಿವಿಧ ಧರ್ಮ, ಜಾತಿ, ಪ್ರದೇಶ, ಬಣ್ಣ ವೈವಿಧ್ಯಗಳ ಪರಿಚಯ ಅಲ್ಲಿತ್ತು. ಕಾಲೇಜಿನ ಈ ಸಂಭ್ರಮ ಹಂಚಿಕೊಳ್ಳಲು ಹಲವು ಯುವತಿಯರು ಪ್ರಥಮ ಬಾರಿಗೆ ಸೀರೆಯುಟ್ಟಿದ್ದರು. 'ಹೈ ಹೀಲ್ಡ್' ಚಪ್ಪಲಿ ಹಾಕಿ, ಸೀರೆಯ ನೆರಿಗೆ ಹಿಡಿದು ನಾಜೂಕಿನಿಂದ ಇಡುತ್ತಿದ್ದ ಪುಟ್ಟ, ಪುಟ್ಟ ಹೆಜ್ಜೆ ಖುಷಿ ತರಿಸುತ್ತಿತ್ತು. ಅಲ್ಲದೇ ಸೀರೆ ಕಾಲಿಗೆ ಎಡತಾಕಿ ಎಲ್ಲಿ ಅವಾಂತರ ಆಗಿ ಬಿಡುವುದೋ ಎನ್ನುವ ಪುಟ್ಟ ಆತಂಕವೂ ಅವರಲ್ಲಿತ್ತು. ಅಲ್ಲದೇ ವಿದ್ಯಾರ್ಥಿನಿಯರೇ ಸೇರಿ ಕಾಲೇಜು ಆವರಣವನ್ನು ಮದುವಣ ಗಿತಿ ್ತ ಯಂತೆ ಸಿಂಗರಿಸಿದ್ದರು. ರಂಗೋಲಿ, ತಳಿರು ತೋರಣಗಳು, ಸಾಲಂಕೃತ ಚಪ್ಪರಗಳು ಅಲ್ಲಿ ಮೇಳೈಸಿದ್ದವು. ಇದಕ್ಕೆ ಕಳೆ ಹೆಚ್ಚಿಸಿದ ವಿವಿಧ ಬಗೆಯ ಉಡುಗೆ ತೊಡುಗೆಗಳು ಬಿಳಿ ಹಾಳೆಯ ಮೇಲೆ ರಂಗು ಚೆಲ್ಲಿದಂತಿತ್ತು.

ಅಲ್ಲದೇ ಅಧ್ಯಾಪಕರು ವಸಂತೋತ್ಸವ ಅಂಗವಾಗಿ ಪ್ರತಿ ತರಗತಿಗೂ ಒಂದೊಂದು ಸಾಂಪ್ರದಾಯಿಕ ಹಬ್ಬದ ಆಚರಣೆ ವಿಷಯ ನೀಡಿ ಅದರಂತೆ ತಾವು ಹಾಗೂ ತರಗತಿಯನ್ನು ಸಿದ್ಧಗೊಳಿಸಲು ತಿಳಿಸಿದ್ದರು. ಅತ್ಯುತ್ತಮಕ್ಕೆ ಬಹುಮಾನವೂ ಇದ್ದರಿಂದ ಅದನ್ನು ಪಡೆದೇ ತೀರುತ್ತೇವೆ ಎನ್ನುವ ಛಲದಿಂದ ವಿದ್ಯಾರ್ಥಿನಿಯರು ಹಗಲಿರಳು ಶ್ರಮಿಸಿ ತರಗತಿಯನ್ನು ಶೃಂಗರಿಸಿದ್ದರು.

ಹಬ್ಬಗಳು : ಬೆಳೆಯುತ್ತಿರುವ ತಾಂತ್ರಿಕ ಯುಗದಿಂದ ಭಾರತೀಯ ಸಂಸ್ಕೃತಿಯ ಅಂಗವಾದ ಸಂಪ್ರದಾಯ, ಸಂಸ್ಕೃತಿ, ಜಾನಪದ ಸಾಹಿತ್ಯ, ಆಚರಣೆ ಕಣ್ಮರೆ ಯಾಗುತ್ತಿವೆ. ಸಂಪ್ರದಾಯಗಳು ಮೌಢ್ಯ ಎಂಬ ಪರಿಸ್ಥಿತಿ ನಿರ್ಮಾಣ ವಾಗಿದೆ. ಆದರೆ ಭಾರತೀಯ ಪ್ರಮುಖ ಹಬ್ಬಗಳಾದ ಕೃಷ್ಣಾಷ್ಟಮಿ, ಪೊಂಗಲ್, ದೀಪಾವಳಿ, ಕ್ರಿಸ್‌ಮಸ್, ಹೋಳಿ, ನಾಗರಪಂಚಮಿ, ಈದ್ ಮಿಲಾದ್, ನವರಾತ್ರಿ, ಹುತ್ತರಿ ಹಬ್ಬ, ವಸಂತ ಹಬ್ಬ, ಓಣಂ, ಗಣೇಶ ಚತುರ್ಥಿ, ಸುಗ್ಗಿ ಹಬ್ಬ ಇವೆಲ್ಲವನ್ನು ಒಂದೇ ಸ್ಥಳದಲ್ಲಿ ನೋಡುವಂತೆ ಮಾಡಿದ್ದು ಈ ಎಥ್ನಿಕ್ ಡೇ ಸಂಭ್ರಮ.

ಆಚರಣೆ ಏಕೆ : ನಮ್ಮ ಸಂಸ್ಕೃತಿ, ಆಚಾರ ವಿಚಾರಗಳು ಪಾಶ್ಚಾತ್ಯ ಪ್ರಭಾವ ಹಾಗೂ ಆಧುನಿಕತೆಯ ಬಿರುಗಾಳಿಗೆ ಸಿಕ್ಕು ಅವನತಿಯ ಹಾದಿ ಹಿಡಿದಿದ್ದು, ಅದನ್ನು ಉಳಿಸಿ ಬೆಳೆಸಬೇಕು. ಈ ಬಗ್ಗೆ ಹೊಸನತಕ್ಕೆ ತುಡಿಯುವ ವಿದ್ಯಾರ್ಥಿಗಳಿಗೆ ಪರಿಚಯಿಸಬೇಕು ಎನ್ನುವ ಉದ್ದೇಶದಿಂದ ಕಾಲೇಜುಗಳಲ್ಲಿ ಈ ಎಥ್ನಿಕ್ ಡೇ ಆಚರಿಸಲಾಗುತ್ತದೆ. ಕಮಲಾ ನೆಹರು ಕಾಲೇಜಿನ ಸಾಂಸ್ಕೃತಿಕ ಸಂಘವು ಈ ಪ್ರಯತ್ನಕ್ಕೆ ಕೈ ಹಾಕಿ ಯಶಸ್ವಿಯಾಯಿತು. ಪ್ರಾಂಶುಪಾಲರು, ಪ್ರಾಧ್ಯಾಪಕರು ಹಾಗೂ ಸಂಘದ ಸಂಚಾಲಕ ಡಾ.ಬಾಲಕೃಷ್ಣ ಹೆಗಡೆ ವಿದ್ಯಾರ್ಥಿನಿಯರ ಈ ಪ್ರಯತ್ನಕ್ಕೆ ಬೆನ್ನುಲುಬಾಗಿದ್ದರು.

-------------
ಗಮನ ಸೆಳೆದ ನೃತ್ಯಗಳು

ವಿದ್ಯಾರ್ಥಿನಿಯರಿಗೆ ಹಾಡಿಗೆ ಹೆಜ್ಜೆ ಹಾಕುವುದೆಂದರೇ ಎಲ್ಲಿಲ್ಲದ ಖುಷಿ. ಇದಕ್ಕಾಗಿಯೇ ಸಿದ್ಧಗೊಂಡು ಬಂದಿದ್ದ ಅವರು ಕೃಷ್ಣ ಲೀಲಾ ನೃತ್ಯ, ಸುಗ್ಗಿನೃತ್ಯ, ದೀಪನೃತ್ಯ, ಗೋವನ್, ರಾಜಸ್ಥಾನಿ, ಜಾನಪದ, ಕವಾಲಿ, ಗರ್ಭಾ, ಕೊಡವ, ಟಾಗೋರ ಸಂಗೀತ, ಓಣಂ, ಲಾವಣಿ, ಆಂಧ್ರಪ್ರದೇಶ, ಬಾಂಗ್ರಾ ನೃತ್ಯಗಳನ್ನು ಪ್ರದರ್ಶಿಸಿ ಸಂಭ್ರಮಿಸಿದರು.

----------------
21ನೇ ಶತಮಾನದಲ್ಲಿ ನಮ್ಮ ಪರಂಪರೆ ಉಳಿವಿಗೆ ನಮ್ಮ ದೊಂದು ಯತ್ನ ಇದಾ ಗಿತ್ತು. ನಮ್ಮ ಸಂಸ್ಕೃತಿ ಬಿಂಬಿಸುವ ಉಡುಗೆ ತೊಡುಗೆ ತೊಟ್ಟು ಹಿರಿ ಯರು ಕಿರಿಯರು ಎನ್ನದೇ ಸಂಭ್ರಮಿಸಿದ್ದು ಖುಷಿ ನೀಡಿದೆ. ಈ ದಿನದಲ್ಲಿ ಭಾಗಿಯಾ ಗಿದ್ದು ಜೀವನದಲ್ಲಿ ಮರಿಯಲಿಕ್ಕಾಗದು. - ಗ್ರೇಸಿ

-----------
ಪ್ರತಿದಿನ ಯೂನಿಫಾರಂ ತೊಟ್ಟು ಬೇಸರವಾಗಿತ್ತು. ಹೀಗಾಗಿ ಈ ದಿನ ನಮ್ಮ ಪಾಲಿಗೆ ವಿಶೇಷವಾಗಿದೆ. ಕಾಲೇಜಿನಲ್ಲಿ ಹಬ್ಬದ ವಾತಾವರಣ ಸೃಷ್ಠಿಯಾ ಗಿದ್ದು, ಪ್ರತಿಯೊಬ್ಬರು ಗೂಡಿಬಿಟ್ಟ ಹಕ್ಕಿಯಂತೆ ಸಂಭ್ರಮಿಸುತ್ತಿದ್ದೇವೆ.
-ಪೂಜಾ

-------------
ಕೇವಲ ನಮ್ಮ ರಾಜ್ಯದ ಹಬ್ಬ ಹರಿದಿನಗಳ ಬಗ್ಗೆ ಮಾತ್ರವೇ ಗೊತ್ತಿತ್ತು. ಆದರೆ ಈ ಎಥ್ನಿಕ್ ಡೇ ಮೂಲಕ ಇಡೀ ದೇಶದ ಸಂಸ್ಕೃತಿ, ಆಚರಣೆಗಳು ತಿಳಿಯುವ ಅವಕಾಶ ಸಿಕ್ಕಿದೆ. ಸೀರೆ ಉಟ್ಟ ದ್ದು ಹೊಸ ಅನುಭವ. ಇಂತಹ ಅವಕಾಶ ದೊರಕಿದ್ದಕ್ಕೆ ತುಂಬಾ ಖುಷಿಯಾಗಿದೆ.
- ರಶ್ಮಿಭಟ್

---------
ವಿದ್ಯಾರ್ಥಿ ಜೀವನದಲ್ಲಿ ಅತ್ಯಂತ ಖುಷಿ ಕೊಟ್ಟ ದಿನ ವಿದು. ನಿಂತ ಜಾಗದ ಲ್ಲಿಯೇ ದೇಶದ ಸಂಸ್ಕೃತಿ, ಆಚಾರ ವಿಚಾರಗಳನ್ನು ನೋಡುವ ಸೌಭಾಗ್ಯ ಸಿಕ್ಕಿದ್ದು, ಖುಷಿ ಹಿಮ್ಮಡಿಸಿದೆ. ಈ ಅವಕಾಶ ಮಾಡಿಕೊಟ್ಟ ಕಾಲೇಜಿನವರಿಗೆ ಕೃತಜ್ಞತೆಗಳು. -ಗೀತಾ


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


Namaskāra नमस्कार (salutation)


ವಿರಾಟ್-ಅನುಷ್ಕಾ ನಡುವಣ ಸಂಭಾಷಣೆ ಊಹಿಸಬಲ್ಲೀರಾ?


‘ವ್ಯಾಪಾರ’ದಲ್ಲಿ ವೃದ್ಧಿಯಾಗಲು ಹೀಗೆ ಮಾಡಿ….


ಅಪ್ಪ ಅಮ್ಮ ಬೈಯ್ತಾರೆ ಅಂತ ಬೆಂಗಳೂರಿಂದ ಚಳ್ಳಕೆರೆಗೆ ಹೋದ ಮಕ್ಕಳು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಮನೆಯಲ್ಲಿ ಸದಾ ಲಕ್ಷ್ಮಿ ನೆಲೆಸಿರಲು ಮಂಗಳಮುಖಿಯಿಂದ ಒಂದು ನಾಣ್ಯ ಪಡೆದು ಹೀಗೆ ಮಾಡಿ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!



<script src="https://jsc.adskeeper.com/r/s/rssing.com.1596347.js" async> </script>