Quantcast
Channel: VijayKarnataka
Viewing all articles
Browse latest Browse all 6795

ಎಚ್‌ಎಎಲ್‌ನಿಂದ ಸರಕಾರಕ್ಕೆ 4,284 ಕೋಟಿ ರೂ. ಸಲ್ಲಿಕೆ

$
0
0

ಬೆಂಗಳೂರು: ಎಚ್‌ಎಎಲ್‌ ಷೇರುಗಳ ಮರು ಖರೀದಿ ಹಾಗೂ ಡಿವಿಡೆಂಡ್‌ ಮೂಲಕ ಸರಕಾರಕ್ಕೆ ಒಟ್ಟು 4,284 ಕೋಟಿ ರೂ.ಗಳನ್ನು ಸಲ್ಲಿಸಿದೆ.

'' 2015-16ರಲ್ಲಿ ಈಗಾಗಲೇ ಎಚ್‌ಎಎಲ್‌ 510 ಕೋಟಿ ರೂ.ಗಳ ಡಿವಿಡೆಂಡ್‌ ಅನ್ನು ಸರಕಾರಕ್ಕಿ ನೀಡಿತ್ತು. ಇದಲ್ಲದೆ ತೆರಿಗೆ ಸೇರಿ ಒಟ್ಟು 5,879 ಕೋಟಿ ರೂ.ಗಳನ್ನು ಸರಕಾರಕ್ಕೆ ಎಚ್‌ಎಎಲ್‌ ಕೊಟ್ಟಿದೆ'' ಎಂದು ಎಚ್‌ಎಎಲ್‌ನ ಮುಖ್ಯ ವ್ಯವಸ್ಥಾಪಕ ನಿದ್ಶೇಕ ಟಿ. ಸುವರ್ಣ ರಾಜು ತಿಳಿಸಿದ್ದಾರೆ.

ಗೋವಾದಲ್ಲಿ ನಡೆದ ರಕ್ಷಣಾ ವಲಯದ ಎಕ್ಸ್‌ಪೊ ವೇಳೆ, ಚೆಕ್‌ ಅನ್ನು ರಕ್ಷಣಾ ಸಚಿವ ಮನೋಹರ್‌ ಪರಿಕರ್‌ ಅವರಿಗೆ ಸಲ್ಲಿಸಲಾಯಿತು. ಎಚ್‌ಎಎಲ್‌ 1973-74ರಿಂದ ಇಲ್ಲಿಯವರೆಗೆ ಸರಕಾರಕ್ಕೆ ಒಟ್ಟು 12,333 ಕೋಟಿ ರೂ.ಗಳನ್ನು ಡಿವಿಡೆಂಡ್‌, ಷೇರುಗಳ ಮರು ಖರೀದಿ, ತೆರಿಗೆ ರೂಪದಲ್ಲಿ ನೀಡಿದೆ.

ಬೆಂಗಳೂರು ಮೂಲದ ಎಚ್‌ಎಎಲ್‌ ಶೇ.100ರಷ್ಟು ಸರಕಾರಿ ಮಾಲಿಕತ್ವದ ಸಂಸ್ಥೆಯಾಗಿದ್ದು, ಇತ್ತೀಚೆಗೆ ಆಡಳಿತ ಮಂಡಳಿಯು ಷೇರುಗಳ ಮರು ಖರೀದಿ ಪ್ರಸ್ತಾಪವನ್ನು ಅಂಗೀಕರಿಸಿತ್ತು. ಕಳೆದ 10 ವರ್ಷಗಳಿಂದ ಎಚ್‌ಎಎಲ್‌ ವಾರ್ಷಿಕ ಶೇ.11ರ ದರದಲ್ಲಿ ವ್ಯಾಪಾರ ವೃದ್ಧಿಸಿಕೊಂಡಿದೆ. ಕಂಪನಿ 15 ಮಾದರಿಯ ಹೆಲಿಕಾಪ್ಟರ್‌, ವಿಮಾನಗಳನ್ನು ಅಭಿವೃದ್ಧಿಪಡಿಸಿದೆ. ಇದುವರೆಗೆ ಸುಮಾರು 3,900 ವಿಮಾನಗಳನ್ನು, 4,700 ಏರೊ-ಎಂಜಿನ್‌ಗಳನ್ನು ತಯಾರಿಸಿದೆ.


Viewing all articles
Browse latest Browse all 6795

Trending Articles


ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸ: ಗ್ಯಾರಂಟಿ ಯೋಜನೆ  ಜನರ ಮೇಲೆ ಹೆಚ್ಚು ಪರಿಣಾಮ ಬೀರಿದೆ-...


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಮುಕೇಶ್ ಅಂಬಾನಿಯವರ ಮೊದಲ ಮನೆ ಹೇಗಿದೆ ಗೊತ್ತಾ?


ಜಮೀನಿನಲ್ಲೇ ಘೋರ ದುರಂತ: ನೀರು ತುಂಬಿದ್ದ ಗುಂಡಿಗೆ ಬಿದ್ದು ಮೂವರು ಸಾವು


ಸೈಬರ್ ಕ್ರೈಂ ಹೇಗೆ ನಡೆಯುತ್ತೆ –ಹೀಗೊಂದು ಸುಂದರ ಕಲ್ಪನೆಯ ಮದ್ವೆ ಕರೆಯೋಲೆ


ವಚನಗಳಿಂದ ಸಂಗೀತ ಲೋಕ ಶ್ರೀಮಂತ


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ತುಳು ತೆರೆಗೆ ಸೋನಿಯಾ ಎಂಟ್ರಿ


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್



<script src="https://jsc.adskeeper.com/r/s/rssing.com.1596347.js" async> </script>