ಉಗ್ರರ ಅಡಗುತಾಣವನ್ನು ಯೋಧರು ಸುತ್ತುವರಿದಿದ್ದಾರೆ. ಕಾರ‌್ಯಾಚರಣೆಯಲ್ಲಿ ಇದುವರೆಗೆ ಮೂವರನ್ನು ಕೊಲ್ಲಲಾಗಿದೆ. ಭದ್ರತೆಯ ದೃಷ್ಟಿಯಿಂದ ಕಾರ‌್ಯಾಚರಣೆ ನಡೆಯುತ್ತಿರುವ ಸ್ಥಳದ ಗುಟ್ಟು ಬಿಟ್ಟುಕೊಡಲಾಗದು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಕುಛ್‌ನ ಕೋಟೇಶ್ವರ ತೀರದಲ್ಲಿ ಉಗ್ರರು ಭಾರತಕ್ಕೆ ನುಸುಳಿದ್ದ ಅನಾಥ ದೋಣಿ ಮಾ.6ರಂದು ಪತ್ತೆಯಾಗಿತ್ತು.ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜೈಷೆ ಉಗ್ರರು ಭಾರತದ ಗಡಿಯೊಳಕ್ಕೆ ನುಗ್ಗಿರುವ ಗುಪ್ತಚರ ಮಾಹಿತಿಯನ್ನು ಪಾಕಿಸ್ತಾನದ ರಾಷ್ಟ್ರೀಯ ಭದ್ರತಾ ಸಲಹೆಗಾರ ನಾಸಿರ್ ಖಾನ್ ಜಂಜುವಾ ಭಾರತದ ಜತೆ ಹಂಚಿಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಶಿವರಾತ್ರಿಯಂದು ದೇಶದ ಎಲ್ಲ ದೇಗುಲಗಳಲ್ಲೂ ಅಭೂತಪೂರ್ವ ಭದ್ರತೆ ಏರ್ಪಡಿಸಲಾಗಿತ್ತು. ಈಗ ಉಗ್ರರ ಅಡಗುತಾಣವನ್ನೂ ಪತ್ತೆಹಚ್ಚಿ ಅವರನ್ನು ಸದೆಬಡಿಯುವ ಕಾರ‌್ಯಾಚರಣೆ ನಡೆಯುತ್ತಿದೆ.
ಹೊಸದಿಲ್ಲಿ: ಶಿವರಾತ್ರಿ ಹಬ್ಬದಂದು ದೇಶದ ಪುಣ್ಯಕ್ಷೇತ್ರಗಳಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಉದ್ದೇಶದಿಂದ ಪಾಕಿಸ್ತಾನದಿಂದ ಗಡಿ ನುಸುಳಿ ಬಂದಿದ್ದ 10 ಮಂದಿ ಜೈಷೆ ಉಗ್ರರ ಅಡಗುತಾಣವನ್ನು ಪತ್ತೆ ಹಚ್ಚಲಾಗಿದ್ದು. ಇದುವರೆಗೆ ಮೂವರು ಉಗ್ರರನ್ನು ಕೊಲ್ಲಲಾಗಿದೆ.