Quantcast
Channel: VijayKarnataka
Viewing all articles
Browse latest Browse all 6795

ಇನ್ನು 4 ವರ್ಷಕ್ಕೆ ಚಿಲ್ಲರೆ ಮಾರುಕಟ್ಟೆ ದುಪ್ಪಟ್ಟು ವಿಸ್ತರಣೆ

$
0
0

ಹೊಸದಿಲ್ಲಿ: ಇನ್ನು ನಾಲ್ಕು ವರ್ಷಕ್ಕೆ ಅಂದರೆ, 2020ರ ಹೊತ್ತಿಗೆ ಭಾರತದ ಚಿಲ್ಲರೆ ಮಾರುಕಟ್ಟೆ ಎರಡು ಪಟ್ಟು ಬೆಳೆಯಲಿದೆ. ಮಾರುಕಟ್ಟೆಯು 1,100ರಿಂದ 1,200 ಶತಕೋಟಿ ಡಾಲರ್‌ಗೆ ವೃದ್ಧಿಯಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ಭಾರತದಲ್ಲಿನ ಚಿಲ್ಲರೆ ಮಾರುಕಟ್ಟೆ ಬಗ್ಗೆ ಅಧ್ಯಯನ ನಡೆಸಿರುವ ಭಾರತೀಯ ಉದ್ಯಮಗಳ ಒಕ್ಕೂಟ(ಸಿಐಐ) ಮತ್ತು ಬೋಸ್ಟನ್ ಕನ್ಸಲ್ಟಿಂಗ್ ಗ್ರೂಪ್(ಬಿಸಿಜಿ) ಪ್ರಕಾರ, ಚಿಲ್ಲರೆ ಮಾರುಕಟ್ಟೆ ಗಣನೀಯ ಬೆಳವಣಿಗೆ ದಾಖಲಿಸಲಿದೆ.

2015ರಲ್ಲಿ ಈ ಮಾರುಕಟ್ಟೆಯ ಗಾತ್ರ 630 ಶತಕೋಟಿ ಡಾಲರ್‌ನಷ್ಟಿದ್ದು, ಇನ್ನು ನಾಲ್ಕು ವರ್ಷಗಳಲ್ಲಿ ತ್ವರಿತ ಬೆಳವಣಿಗೆಯಾಗಲಿದೆ. ದುಡಿಯುವ ವರ್ಗದಲ್ಲಿ ಹೆಚ್ಚಿನ ಯುವಕರು ಸೇರಿಕೊಳ್ಳುತ್ತಿದ್ದು, ತಲಾ ವರಮಾನ ಶೇ.70ರಷ್ಟು ಏರಿಕೆಯಾಗುತ್ತದೆ. ಇದರಿಂದ ಚಿಲ್ಲರೆ ಮಾರುಕಟ್ಟೆ ಮೇಲೆ ಸಕಾರಾತ್ಮಕ ಪರಿಣಾಮ ಉಂಟಾಗಲಿದೆ. ನಗರಗಳ ತ್ವರಿತ ಬೆಳವಣಿಗೆ ಜತೆಗೆ ವಿಭಕ್ತ ಕುಟುಂಬಗಳಿಂದ ಉತ್ಪನ್ನಗಳ ತಲಾ ಬಳಕೆ ಪ್ರಮಾಣದಲ್ಲಿ ಏರಿಕೆಯಾಗುತ್ತದೆ. ಇದೆಲ್ಲದರ ಪರಿಣಾಮ ಚಿಲ್ಲರೆ ಮಾರುಕಟ್ಟೆ ವೃದ್ಧಿಯಾಗುತ್ತದೆ ಎನ್ನುತ್ತಿದೆ ಅಧ್ಯಯನ ವರದಿ.

''ಸಂಘಟಿತ ಚಿಲ್ಲರೆ ಮತ್ತು ಇ-ಕಾಮರ್ಸ್ ವಲಯಗಳು ತ್ವರಿತ ಬೆಳವಣಿಗೆ ಕಾಣಲಿವೆ. ಅವಕಾಶಗಳು ಬಹಳಷ್ಟಿದ್ದು, ಭಾರತೀಯ ಚಿಲ್ಲರೆ ಮಾರಾಟಗಾರರು ಇದನ್ನು ಸೂಕ್ತವಾಗಿ ಬಳಸಿಕೊಳ್ಳಬೇಕಿದೆ,'' ಎಂದು ಬಿಸಿಜಿ ಇಂಡಿಯಾದ ನಿರ್ದೇಶಕ ಅಭೀಕ್ ಸಿಂಘಿ ಅಭಿಪ್ರಾಯಪಟ್ಟಿದ್ದಾರೆ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ನಾಳೆ ಮೈಸೂರು ನಗರದ ಈ  ಭಾಗದಲ್ಲಿ ವಿದ್ಯುತ್ ವ್ಯತ್ಯಯ


ಬಟ್ಟೆ ಕಳಚಿ ಸೆಕ್ಸ್ ಗೆ ಕರೆದ ಮಂಗಳಮುಖಿಯರು


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>