Quantcast
Channel: VijayKarnataka
Viewing all articles
Browse latest Browse all 6795

ದೇಶದ 400 ಪೊಲೀಸ್‌ ಠಾಣೆಗಳಲ್ಲಿ ಫೋನ್‌ ಇಲ್ಲ

$
0
0

ಹೊಸದಿಲ್ಲಿ: ದೇಶದಲ್ಲಿ ಅಪರಾಧ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಹೆಚ್ಚುವರಿ ರಕ್ಷಣೆ ಒದಗಿಸುವುದು ಅನಿವಾರ್ಯವಾದರೂ, ಕರ್ತವ್ಯ ನಿಭಾಯಿಸಲು ಪೊಲೀಸರಿಗೆ ಅಗತ್ಯವಾದ ಮೂಲ ಸೌಕರ್ಯಗಳು ಇಲ್ಲದಿರುವುದು ವಿಷಾದ.

ಹಲವು ಪೊಲೀಸ್‌ ಠಾಣೆಗಳಲ್ಲಿ ವಾಹನಗಳಿಲ್ಲ, ಫೋನ್‌ ಹಾಗೂ ವೈರ್‌ಲೆಸ್‌ ಸೆಟ್‌ಗಳಿಲ್ಲ. 188 ಪೊಲೀಸ್‌ ಠಾಣೆಗಳಲ್ಲಿ ಒಂದೇ ಒಂದು ವಾಹನ ಇಲ್ಲ, 402 ಠಾಣೆಗಳಿಗೆ ದೂರವಾಣಿ ಸಂಪರ್ಕ ಇಲ್ಲ. 134 ಠಾಣೆಗಳಲ್ಲಿ 134 ವೈರ್‌ಲೆಸ್‌ ಸೆಟ್‌ಗಳಿಲ್ಲ. 65 ಸೆಟ್‌ಗಳಲ್ಲಿ ಫೋನ್‌ ಅಥವಾ ವೈರ್‌ಲೆಸ್‌ ಸೆಟ್‌ಗಳೂ ಇಲ್ಲ ಎಂಬ ಮಾಹಿತಿ ಪೊಲೀಸ್ ಸಂಶೋಧನೆ ಮತ್ತು ಅಭಿವೃದ್ಧಿ ಮಂಡಳಿಯ ಅಂಕಿ ಅಂಶಗಳಿಂದ ತಿಳಿದುಬಂದಿದೆ.

ಮಣಿಪುರದ 43 ಪೊಲೀಸ್‌ ಠಾಣೆಗಳಲ್ಲಿ ಫೋನ್‌ ಅಥವಾ ವೈರ್‌ಲೆಸ್ ಸೆಟ್‌ಗಳಿಲ್ಲ. ಛತ್ತೀಸ್‌ಗಢದ 161 ಪೊಲೀಸ್‌ ಠಾಣೆಗಳಲ್ಲಿ ಯಾವುದೇ ವಾಹನಗಳಿಲ್ಲ. ಮಣಿಪುರದಲ್ಲಿ 111 ಪೊಲೀಸ್‌ ಠಾಣೆ ಹಾಗೂ ಮೇಘಾಲಯ ಹಾಗೂ ಮಣಿಪುರದ ತಲಾ 67 ಠಾಣೆಗಳಿಗೆ ದೂರವಾಣಿ ಸಂಪರ್ಕ ಇಲ್ಲ. ಉತ್ತರ ಪ್ರದೇಶದ 51 ಠಾಣೆಗಳಲ್ಲಿ ಫೋನ್‌ ಹಾಗೂ 17 ಠಾಣೆಗಳಲ್ಲಿ ವೈರ್‌ಲೆಸ್‌ ಸೆಟ್‌ಗಳಿಲ್ಲ.

ದೇಶದಲ್ಲಿ ಒಟ್ಟು 15,555 ಪೊಲೀಸ್‌ ಠಾಣೆಗಳಿವೆ. ಈ ಪೈಕಿ 10,014 ಗ್ರಾಮೀಣ ಪ್ರದೇಶಗಳಿದ್ದು, 5,025 ನಗರ ಪ್ರದೇಶಗಳಲ್ಲಿವೆ. ಉಳಿದದ್ದು ರೈಲ್ವೆ ಪೊಲೀಸ್‌ ಠಾಣೆಗಳು.

ಮೂಲ ಸೌಕರ್ಯವಷ್ಟೇ ಅಲ್ಲ, ಪೊಲೀಸ್‌ ಸಿಬ್ಬಂದಿಯ ಕೊರತೆಯೂ ಇದೆ. ಸೈಬರ್‌ ಅಪರಾಧ, ಭಯೋತ್ಪಾದನೆ, ಕೋಮು ಗಲಭೆ, ನಕ್ಸಲ್‌ ಸಮಸ್ಯೆಗಳ ನಡುವೆಯೂ ಪ್ರತಿ 729 ಜನರಿಗೆ ಒಬ್ಬ ಪೊಲೀಸರಿದ್ದಾರೆ.


Viewing all articles
Browse latest Browse all 6795

Trending Articles



<script src="https://jsc.adskeeper.com/r/s/rssing.com.1596347.js" async> </script>