Quantcast
Channel: VijayKarnataka
Viewing all articles
Browse latest Browse all 6795

ಹೂಡಿಕೆದಾರರಿಗೆ 4.4 ಲಕ್ಷ ಕೋಟಿ ರೂ. ನಷ್ಟ

$
0
0

ಎಕನಾಮಿಕ್ ಟೈಮ್ಸ್ ಹೊಸದಿಲ್ಲಿ
ಜಾಗತಿಕ ಮಾರುಕಟ್ಟೆಯ ಮಂದಗತಿ ಮತ್ತು ದೇಶೀಯ ಕಂಪನಿಗಳ ನೀರಸ ಫಲಿತಾಂಶ ಸೇರಿದಂತೆ ವಿವಿಧ ಕಾರಣಗಳಿಂದ ಭಾರತೀಯ ಷೇರು ಮಾರುಕಟ್ಟೆ ಕುಸಿತದ ಹಾದಿ ಹಿಡಿದ ಪರಿಣಾಮ ಈ ವರ್ಷ ಮಾರುಕಟ್ಟೆ ಹೂಡಿಕೆದಾರರಿಗೆ ಒಟ್ಟಾರೆ 4.4 ಲಕ್ಷ ಕೋಟಿ ರೂ. ನಷ್ಟ ಉಂಟಾಗಿದೆ.

ಬುಧವಾರದವರೆಗೆ ಅನ್ವಯವಾಗುವಂತೆ, ಮುಂಬಯಿ ಷಏರುಪೇಟೆ ಸಂವೇದಿ ಸೂಚ್ಯಂಕ 'ಸೆನ್ಸೆಕ್ಸ್' ಈ ವರ್ಷ ಒಟ್ಟು 2,090.54 ಅಂಕಗಳ ಕುಸಿತ ದಾಖಲಿಸಿ, 25,866.95ರಲ್ಲಿ ವಹಿವಾಟು ನಡೆಸುತ್ತಿದೆ. ಇದರೊಂದಿಗೆ ಶೇ 7.47ರಷ್ಟು ಕುಸಿತ ದಾಖಲಾಗಿದೆ. ಸೆಪ್ಟೆಂಬರ್ 8ರಂದು ಸೂಚ್ಯಂಕ 24,833.54ಕ್ಕೆ ತೀವ್ರ ಕುಸಿತ ದಾಖಲಿಸಿತ್ತು.

ಷೇರು ಮಾರುಕಟ್ಟೆಯಲ್ಲಿ ನೋಂದಣಿ ಆಗಿರುವ ಕಂಪನಿ ಷೇರುಗಳ ಸಂಚಿತ ಮಾರುಕಟ್ಟೆ ಮೌಲ್ಯವನ್ನು ಪರಿಗಣಿಸಿದರೆ, ಈ ವರ್ಷ ಹೂಡಿಕೆದಾರರಿಗೆ 4,45,395 ಕೋಟಿ ರೂ. ಸವಕಲಾಗಿ, 97,03,605 ಕೋಟಿ ರೂ.ಗೆ ಇಳಿಕೆಯಾಗಿದೆ. ಮಾರ್ಚ್ 31ರಂದು ಬಿಎಸ್‌ಇ ನೋಂದಾಯಿತ ಕಂಪನಿಗಳ ಒಟ್ಟು ಮಾರುಕಟ್ಟೆ ಮೌಲ್ಯ 101.49 ಲಕ್ಷ ಕೋಟಿ ರೂ.ಗೆ ಏರಿಕೆ ಕಂಡಿತ್ತು.

ಕಳೆದೆರಡು ತ್ರೈಮಾಸಿಕಗಳಿಂದ ಭಾರತೀಯ ಷೇರು ಮಾರುಕಟ್ಟೆ ತೀವ್ರ ಚಂಚಲತೆಗೆ ಸಾಕ್ಷಿಯಾಗುತ್ತಿದೆ. ಜಾಗತಿಕ ಮಾರುಕಟ್ಟೆ ದುರ್ಬಲ ಪ್ರವೃತ್ತಿ ಮತ್ತು ದೇಶೀಯ ಕಂಪನಿಗಳ ನೀರಸ ಪ್ರದರ್ಶನವೇ ಇದಕ್ಕೆ ಪ್ರಮುಖ ಕಾರಣ. ಚೀನಾದ ಯುವಾನ್ ಕರೆನ್ಸಿಯ ತೀವ್ರ ಕುಸಿತ ಮತ್ತು ಭಾರತದ ಅರ್ಥ ವ್ಯವಸ್ಥಎಯ ಮಂದಗತಿಯೂ ಇದಕ್ಕೆ ಕಾರಣ.

ಅಮೆರಿಕದ ಕೇಂದ್ರ ಬ್ಯಾಂಕ್ ಫೆಡರಲ್ ರಿಸರ್ವ್, ಡಿಸೆಂಬರ್‌ನಲ್ಲಿ ಬಡ್ಡಿದರ ಏರಿಕೆ ಮಾಡುವುದಾಗಿ ಪ್ರಕಟಿಸಿದ ನಂತರ ಭಾರತದ ಅರ್ಥ ವ್ಯವಸ್ಥೆ ಉತ್ತಮವಾಗಿದ್ದರೂ, ಮಾರುಕಟ್ಟೆ ಮತ್ತಷ್ಟು ಕುಸಿತಕ್ಕೆ ಸಾಕ್ಷಿಯಾಗುತ್ತಿದೆ.

ಸೆನ್ಸೆಕ್ಸ್ ಆಗಸ್ಟ್ 24ರಂದು ಒಂದು ದಿನ 1,624.51 ಅಂಕಗಳ ಪತನ ಕಂಡಿತ್ತು. ಇದರ ಪರಿಣಾಮವಾಗಿ ಹೂಡಿಕೆದಾರರ 7 ಲಕ್ಷ ಕೋಟಿ ರೂ. ಸಂಪತ್ತು ಕರಗಿ ಹೋಗಿತ್ತು. ಚೀನಾ ಮಾರುಕಟ್ಟೆಯ ಕುಸಿತದ ಕರಿನೆರಳೇ ಇದಕ್ಕೆ ಕಾರಣ.

ಮಾರುಕಟ್ಟೆಯ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ, ಸುಧಾರಣಾ ಕ್ರಮಗಳ ಪ್ರಕ್ರಿಯೆಯ ವಾಸ್ತವಾಂಶ ಕುರಿತ ಮಾರುಕಟ್ಟೆಯ ಭಾವನೆಗಳನ್ನು ಯಾರಾದರೂ ಅರಿಯಬಹುದಾಗಿದೆ ಎನ್ನುತ್ತಾರೆ ಅಶಿಕಾ ಸ್ಟಾಕ್ ಬ್ರೋಕಿಂಗ್ ಸಂಸ್ಥೆಯ ಉಪಾಧ್ಯಕ್ಷ ಪಾರಸ್ ಬೊತ್ರಾ.

ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರದ ಸುಧಾರಣಾ ಕ್ರಮಗಳ ಪ್ರಕ್ರಿಯೆ ಮತ್ತು ಅಮೆರಿಕದ ಕೇಂದ್ರ ಬ್ಯಾಂಕ್ ಫೆಡರಲ್ ರಿಸರ್ವ್‌ನ ಬಡ್ಡಿ ದರ ಏರಿಕೆಯ ನಿರ್ಧಾರಗಳೇ ಮಾರುಕಟ್ಟೆಯನ್ನು ಆಳುವ ಮುನ್ಸೂಚನೆಗಳು ಗೋಚರಿಸುತ್ತಿವೆ ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.


Viewing all articles
Browse latest Browse all 6795

Trending Articles


ಶ್ರೀ ಮಹಿಷಾಸುರ ಮರ್ದಿನೀ ಸ್ತೋತ್ರಮ್


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ಬಿಗ್‌ ನ್ಯೂಸ್: ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟ -‌ ಈ ಬಾರಿಯೂ...


‘ಬಾಹುಬಲಿ’ಅಭಿಮಾನಿಗಳಿಗೆ ಗುಡ್ ನ್ಯೂಸ್ ಸುದ್ದಿ ! ಬರ್ತಿದೆ ‘ಪಾರ್ಟ್-3’


ಕಳ್ಳತನ ಮಾಡುವಾಗ ಮನೆಯೊಡತಿ ನೋಡಿದ್ದಕ್ಕೆ ಕೊಂದೇ ಬಿಟ್ಟ ಅರ್ಚಕ!


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ


ತುಳು ತೆರೆಗೆ ಸೋನಿಯಾ ಎಂಟ್ರಿ



<script src="https://jsc.adskeeper.com/r/s/rssing.com.1596347.js" async> </script>