Quantcast
Channel: VijayKarnataka
Viewing all articles
Browse latest Browse all 6795

ಬ್ಯಾಡಗಿ ಮಾರುಕಟ್ಟೆ ಇತಿಹಾಸದಲ್ಲಿ ಹೊಸ ದಾಖಲೆ

$
0
0

* ಗಣೇಶ ಅಕಾಚಾರಿ ಬ್ಯಾಡಗಿ (ಹಾವೇರಿ)
ಇಲ್ಲಿನ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸೋಮವಾರ 2 ಲಕ್ಷಕ್ಕಿಂತಲೂ ಅಧಿಕ ಚೀಲಗಳಷ್ಟು ಮೆಣಸಿಕಾಯಿ ಆವಕ ಆಗಿದ್ದರಿಂದ ಮಾರುಕಟ್ಟೆ ಇತಿಹಾಸದಲ್ಲೇ ಹೊಸ ದಾಖಲೆ ಸೃಷ್ಟಿಯಾಗಿದೆ.

ಮಾ. 21ರಂದು ದಾಖಲೆಯ 1.68 ಲಕ್ಷ ಚೀಲ ಆವಕ ಆಗಿದ್ದು ವರ್ಷದ ದಾಖಲೆಯಾಗಿತ್ತು. ಪ್ರಸಕ್ತ ವರ್ಷದಲ್ಲಿ 9 ಬಾರಿ ಒಂದು ಲಕ್ಷಕ್ಕಿಂತ ಜಾಸ್ತಿ ಆವಕವಾಗಿದ್ದು ವರ್ತಕರಲ್ಲಿ ಸಂತಸ ಮೂಡಿಸಿದೆ. ಈ ಹಿಂದೆ ಮಾರುಕಟ್ಟೆಗೆ ಬಂದ ಸರಕು ರವಾನೆಯಾಗದೆ ಆವರಣದಲ್ಲಿಯೆ ಉಳಿದ ಕಾರಣ ಮಾ. 21 ರಿಂದ ಏ. 3ರವರೆಗೆ ವ್ಯಾಪಾರ ವಹಿವಾಟು ಸ್ಥಗಿತಗೊಳಿಸಲಾಗಿತ್ತು. ಸೋಮವಾರ ಮತ್ತೆ ವಹಿವಾಟು ಆರಂಭವಾದ ಕಾರಣ ಹೆಚ್ಚಿನ ಪ್ರಮಾಣದ ಮೆಣಸಿನಕಾಯಿ ಹರಿದುಬಂದಿದೆ.
ಪ್ರಸಕ್ತ ವರ್ಷ ಗುಂಟೂರಿನ ಮಾರುಕಟ್ಟೆಯಲ್ಲಿ ಮೆಣಸಿನಕಾಯಿ ದರದಲ್ಲಿ ಭಾರಿ ಕುಸಿತ ಕಂಡು ಬಂದ ಹಿನ್ನೆಲೆಯಲ್ಲಿ ಆಂಧ್ರ, ಕರ್ನೂಲ್, ಶ್ರೀಶೈಲಂ, ಆದೋನಿ, ಗುಂಟೂರು ಬಳ್ಳಾರಿಯ ಬಹುತೇಕ ರೈತರು ಬ್ಯಾಡಗಿ ಮಾರುಕಟ್ಟೆ ಕಡೆಗೆ ಮುಖ ಮಾಡಿದ್ದಾರೆ.

ಅಲ್ಪ ಮಟ್ಟದ ದರ ಕುಸಿತ:

ಉತ್ತಮ ಗುಣಮಟ್ಟದ ಮೆಣಸಿನಕಾಯಿ ದರದಲ್ಲಿ ಯಾವುದೇ ವ್ಯತ್ಯಾಸ ಕಂಡು ಬಂದಿಲ್ಲ. ಆದರೆ ಗುಣಮಟ್ಟವಿಲ್ಲದ ಹಾಗೂ ನೀರುಣಿಸಿದ ಮೆಣಸಿನಕಾಯಿ ದರದಲ್ಲಿ ಸ್ವಲ್ಪ ಕುಸಿತ ಕಂಡು ಬಂದಿದೆ.

ಕಡ್ಡಿ ತಳಿಗೆ ಕನಿಷ್ಠ 2,569ರಿಂದ 13,786 ರೂ., ಡಬ್ಬಿ ತಳಿಗೆ ಕನಿಷ್ಠ 3,400ರಿಂದ ಗರಿಷ್ಠ 16,199 ರೂ., ಗುಂಟೂರ ತಳಿಗೆ ಕನಿಷ್ಠ 16,99ರಿಂದ ಗರಿಷ್ಠ 10,889 ರೂ. ದರ ಸಿಕ್ಕಿದೆ.

ವಿಶ್ವದ ನಂ.1 ಪಟ್ಟ

ವಿಶ್ವದ ನಂ.1 ಮಾರುಕಟ್ಟೆಯಾಗಿ ಬ್ಯಾಡಗಿ ಹೊರಹೊಮ್ಮಿದೆ. ಸುಮಾರು ವರ್ಷಗಳಿಂದ ನಂ.1 ಮಾರುಕಟ್ಟೆ ಖ್ಯಾತಿ ಗಳಿಸಿದ್ದ ಆಂಧ್ರಪ್ರದೇಶದ ಗುಂಟೂರು ಈಗ ಹಿಂದೆ ಬಿದ್ದಂತಾಗಿದೆ.


Viewing all articles
Browse latest Browse all 6795

Latest Images

Trending Articles



Latest Images

<script src="https://jsc.adskeeper.com/r/s/rssing.com.1596347.js" async> </script>